ಸಾಂದರ್ಭಿಕ ಚಿತ್ರ 
ದೇಶ

ರಾಜಸ್ಥಾನ: ಬಿಜೆಪಿಯ ಮಾಜಿ ಶಾಸಕಿಗೆ ಬಂದೂಕು ತೋರಿಸಿ ಬೆದರಿಕೆ ಹಾಕಿದ ದುಷ್ಕರ್ಮಿಗಳು

ಬಿಜೆಪಿಯ ಮಾಜಿ ಶಾಸಕಿ ಅಮೃತಾ ಮೇಘವಾಲ್ ಅವರು ಅಜ್ಮೀರ್‌ನಿಂದ ರಾಜಸ್ಥಾನದ ಜಲೋರ್‌ಗೆ ತಮ್ಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ 4-5 ಅಪರಿಚಿತ ದುಷ್ಕರ್ಮಿಗಳು ಬಂದೂಕು ತೋರಿಸಿ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಜೈಪುರ: ಬಿಜೆಪಿಯ ಮಾಜಿ ಶಾಸಕಿ ಅಮೃತಾ ಮೇಘವಾಲ್ ಅವರು ಅಜ್ಮೀರ್‌ನಿಂದ ರಾಜಸ್ಥಾನದ ಜಲೋರ್‌ಗೆ ತಮ್ಮ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ 4-5 ಅಪರಿಚಿತ ದುಷ್ಕರ್ಮಿಗಳು ಬಂದೂಕು ತೋರಿಸಿ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಭಾನುವಾರ ರಾತ್ರಿ ಅಜ್ಮೀರ್‌ನ ನರೇಲಿ ಪುಲಿಯ ಬಳಿ ಈ ಘಟನೆ ನಡೆದಿದೆ. ಮೇಘವಾಲ್ ಜಲೋರ್‌ನ ಮಾಜಿ ಬಿಜೆಪಿ ಶಾಸಕಿ.

ಆರೋಪಿಗಳು ಆಕೆಯ ಎಸ್‌ಯುವಿಯನ್ನು ನಿಲ್ಲಿಸಿ ಬಂದೂಕು ತೋರಿಸಿ ಬೆದರಿಕೆ ಹಾಕಿದ್ದಾರೆ ಎಂದು ಅಜ್ಮೀರ್‌ನ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿಕಾಸ್ ಸಾಂಗ್ವಾನ್ ಹೇಳಿದ್ದಾರೆ.
ಈ ಬಗ್ಗೆ ಅಲ್ವಾರ್ ಗೇಟ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ದಾಳಿಕೋರರು ಆಕೆಯ ವಾಹನದ ವಿಂಡ್‌ಸ್ಕ್ರೀನ್ ಅನ್ನು ಒಡೆದು ಹಾಕಿದ್ದಾರೆ ಎಂದು ಅಲ್ವಾರ್ ಗೇಟ್ ಎಸ್‌ಎಚ್‌ಒ ಮೊಹಮ್ಮದ್ ಜಬೀರ್ ಹೇಳಿದ್ದಾರೆ.

ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Video: ಶ್ರೀಲಂಕಾ ಕರಾವಳಿಯಲ್ಲಿ ಇರಾನ್ ಯುದ್ಧನೌಕೆ ಮೇಲೆ ಅಮೆರಿಕ ದಾಳಿ; ಕನಿಷ್ಠ 87 ನಾವಿಕರು ಸಾವು

ವಾಣಿಜ್ಯ, ಕೈಗಾರಿಕಾ ವಲಯಕ್ಕೆ ವಿದ್ಯುತ್ ದರ ಏರಿಕೆ ಶಾಕ್; ಆದ್ರೆ ರೈತರಿಗೆ ಗುಡ್ ನ್ಯೂಸ್!

ಬಿಹಾರದಲ್ಲಿ ರಾಜಕೀಯ ಬಿರುಗಾಳಿ: ಮುಖ್ಯಮಂತ್ರಿ ಸ್ಥಾನಕ್ಕೆ ನಿತಿಶ್ ಕುಮಾರ್ ರಾಜೀನಾಮೆ?

ಖಮೇನಿ ಹತ್ಯೆ ಕುರಿತು ಪೋಸ್ಟ್‌: ಎನ್‌ಸಿ ಸಂಸದ, ಶ್ರೀನಗರ ಮಾಜಿ ಮೇಯರ್ ವಿರುದ್ಧ ಎಫ್‌ಐಆರ್ ದಾಖಲು

'ದೇಹದ ಮೇಲೆ ಕ್ಯಾಮೆರಾ Zoom': ಪಾಪರಾಜಿಗಳ ವಿರುದ್ಧ ಸಪ್ತಮಿಗೌಡ ಕಿಡಿ; Rukmini Vasanth ಬೆಂಬಲ!

SCROLL FOR NEXT