ಸಾಂದರ್ಭಿಕ ಚಿತ್ರ 
ದೇಶ

ಭಯಾನಕ: ಅತ್ಯಾಚಾರ ವಿರೋಧಿಸಿದ ಮಹಿಳಾ ಅಥ್ಲೀಟ್ ಅನ್ನು ಕ್ರೀಡಾಂಗಣದ ಟೆರೇಸ್‌ನಿಂದ ತಳ್ಳಿ ಕೊಲೆ ಯತ್ನ!

ಅತ್ಯಾಚಾರಕ್ಕೆ ವಿರೋಧ ವ್ಯಕ್ತಪಡಿಸಿದ ಮಹಿಳಾ ಅಥ್ಲೀಟ್ ಳನ್ನು ಕ್ರೀಡಾಂಗಣದ ಟೆರೇಸ್‌ನಿಂದ 'ತಳ್ಳಿ ಕೊಲೆಗೆ ಯತ್ನಿಸಿರುವ ಭಯಾನಕ ಘಟನೆ ಪಂಜಾಬ್ ನಲ್ಲಿ ನಡೆದಿದೆ.

ಚಂಡೀಗಢ: ಅತ್ಯಾಚಾರಕ್ಕೆ ವಿರೋಧ ವ್ಯಕ್ತಪಡಿಸಿದ ಮಹಿಳಾ ಅಥ್ಲೀಟ್ ಳನ್ನು ಕ್ರೀಡಾಂಗಣದ ಟೆರೇಸ್‌ನಿಂದ 'ತಳ್ಳಿ ಕೊಲೆಗೆ ಯತ್ನಿಸಿರುವ ಭಯಾನಕ ಘಟನೆ ಪಂಜಾಬ್ ನಲ್ಲಿ ನಡೆದಿದೆ.

ಪಂಜಾಬ್‌ನ ಮೋಗಾ ಜಿಲ್ಲೆಯಲ್ಲಿ 18 ವರ್ಷದ ಬ್ಯಾಸ್ಕೆಟ್‌ಬಾಲ್ ಆಟಗಾರ್ತಿಯೊಬ್ಬಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಮೂವರು ಯುವಕರು ಕ್ರೀಡಾಂಗಣದ ಮೇಲ್ಛಾವಣಿಯಿಂದ ತಳ್ಳಿ ಆಕೆಯ ಕೊಲೆಗೆ ಯತ್ನಿಸಿದ್ದಾರೆ. ಕೆಳಗೆ ಬಿದ್ದ ಮಹಿಳಾ ಅಥ್ಲೀಟ್ ಗೆ ದೇಹದ ಹಲವೆಡೆ ಮುರಿತಗಳು ಉಂಟಾಗಿವೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.

ಸಂತ್ರಸ್ಥ ಆಟಗಾರ್ತಿಯನ್ನು ಲುಧಿಯಾನದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆಕೆಯ ಎರಡೂ ಕಾಲುಗಳು ಮುರಿದಿದ್ದು, ದವಡೆಯಲ್ಲಿ ಗಾಯಗಳಾಗಿವೆ. ವೈದ್ಯರಿಂದ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಅವರು ಹೇಳಿದರು.

ಆಗಸ್ಟ್ 12 ರಂದು ಈ ಘಟನೆ ನಡೆದಿದ್ದು, ಘಟನೆ ಬಳಿಕ ಮೂವರು ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದಾರೆ. ಸಂತ್ರಸ್ತೆಯ ತಂದೆ ನೀಡಿದ ದೂರಿನ ಪ್ರಕಾರ, ಅವರ ಮಗಳು ಅಭ್ಯಾಸಕ್ಕಾಗಿ ಮೊಗಾದ ಕ್ರೀಡಾಂಗಣಕ್ಕೆ ಹೋಗಿದ್ದರು. ಜತಿನ್ ಕಾಂಡ ಎಂದು ಗುರುತಿಸಲಾದ ಆರೋಪಿಗಳಲ್ಲಿ ಒಬ್ಬರು ಕ್ರೀಡಾಂಗಣದಲ್ಲಿ ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದರು. ಆಕೆ ಪ್ರತಿಭಟಿಸಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ, ಅವನು ಅವಳನ್ನು ಸುಮಾರು 25 ಅಡಿ ಎತ್ತರ ಮೇಲ್ಛಾವಣಿ ಮೇಲಿಂದ ತಳ್ಳಿದನು. ಇದರಿಂದ ಅವಳಿಗೆ ಗಂಭೀರ ಗಾಯಗಳಾಗಿವೆ ಎಂದು ಹೇಳಲಾಗಿದೆ.

ಜತಿನ್ ಮತ್ತು ಆತನ ಇಬ್ಬರು ಸಹಚರರ ವಿರುದ್ಧ ಐಪಿಸಿಯ 307 (ಕೊಲೆ ಯತ್ನ) ಮತ್ತು 376 (ಅತ್ಯಾಚಾರ) ಸೇರಿದಂತೆ ಹಲವು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿಗಳನ್ನು ಬಂಧಿಸಲು ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಮೊಗಾ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಗುಲ್ನೀತ್ ಖುರಾನಾ ಗುರುವಾರ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Hormuz closure: ಹಾರ್ಮುಜ್ ಜಲಸಂಧಿ ಬಂದ್, ಏಷ್ಯಾದ ಬಂದರುಗಳಲ್ಲಿ ಕ್ಯೂನಲ್ಲಿ ನಿಂತ ಹಡಗುಗಳು!

ಪದೇ ಪದೇ ಇರಾನ್ ದಾಳಿ: ಅಬುದಾಬಿಯಲ್ಲಿ ಕ್ಷಿಪಣಿ ಅವಶೇಷಗಳು ಬಿದ್ದು, ಭಾರತೀಯ ಪ್ರಜೆ ಸೇರಿದಂತೆ ಇಬ್ಬರು ಸಾವು!

ಬಾಗಲಕೋಟೆ, ದಾವಣಗೆರೆ ಉಪಚುನಾವಣೆ: ಕಣದಲ್ಲಿ 34 ಅಭ್ಯರ್ಥಿಗಳು, 80 ಲಕ್ಷ ನಗದು, 1.74 ಲಕ್ಷ ರೂ. ಮೌಲ್ಯದ ಮದ್ಯ ವಶಕ್ಕೆ

ಮಹಾರಾಷ್ಟ್ರದಲ್ಲಿ ಮತ್ತೊಂದು ಕಾಮಕಾಂಡ: ಸಚಿವ ನರಹರಿ ಜಿರ್ವಾಲ್ 'ಅಶ್ಲೀಲ ವಿಡಿಯೋ' ವೈರಲ್!

ಕಾಡುಪ್ರಾಣಿಗಳ ದಾಳಿಯಲ್ಲಿ ಮೃತಪಟ್ಟ ಕುಟುಂಬಕ್ಕೆ ಸರ್ಕಾರಿ ಉದ್ಯೋಗವಿಲ್ಲ: ಸಚಿವ ಈಶ್ವರ್ ಖಂಡ್ರೆ

SCROLL FOR NEXT