ಭಾರತದ ಟ್ವಿಟರ್ ಸ್ನೇಹಿತನನ್ನು ಭೇಟಿಯಾದ ಇಲಾನ್ ಮಸ್ಕ್!
ವಿಶ್ವದ ಅತ್ಯಂತ ಶ್ರೀಮಂತ ಹಾಗೂ ಟೆಸ್ಲಾ ಅಂಡ್ ಸ್ಪೇಸ್ ಕಂಪನಿ ಸಿಇಒ ಇಲಾನ್ ಮಸ್ಕ್ ಅವರು ಭಾರತದ 24 ವರ್ಷದ ಯುವ ಟೆಕ್ಕಿಯೊಬ್ಬರನ್ನು ಭೇಟಿಯಾಗಿ ಮಾತನಾಡಿಸಿದ್ದಾರೆ.
ನವದೆಹಲಿ: ವಿಶ್ವದ ಅತ್ಯಂತ ಶ್ರೀಮಂತ ಹಾಗೂ ಟೆಸ್ಲಾ ಅಂಡ್ ಸ್ಪೇಸ್ ಕಂಪನಿ ಸಿಇಒ ಇಲಾನ್ ಮಸ್ಕ್ ಅವರು ಭಾರತದ 24 ವರ್ಷದ ಯುವ ಟೆಕ್ಕಿಯೊಬ್ಬರನ್ನು ಭೇಟಿಯಾಗಿ ಮಾತನಾಡಿಸಿದ್ದಾರೆ.
ಟ್ವಿಟರ್ ಸೇರಿದಂತೆ ಇತರ ಸಾಮಾಜಿಕ ಜಾಲತಾಣಗಳ ಮೂಲಕ ಯುವ ಜನತೆಯೊಂದಿಗೆ ಹೆಚ್ಚು ಸಂಪರ್ಕದಲ್ಲಿರುವ ಇಲಾನ್ ಮಸ್ಕ್, ಪುಣೆ ಮೂಲದ ಪ್ರಣಯ್ ಪಾತೋಳೆ ಅವರನ್ನು ಟೆಕ್ಸಾಸ್ ನ ಟೆಸ್ಲಾ ಕಾರು ತಯಾರಿಕಾ ಘಟಕದಲ್ಲಿ ಭೇಟಿಯಾಗಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಪ್ರಣಯ್, ಇಲಾನ್ ಮಸ್ತ್ ಅವರೊಂದಿಗೆ ಇರುವ ಫೋಟೋ ಹಂಚಿಕೊಂಡಿದ್ದಾರೆ.'ನಿಮ್ಮನ್ನು ಭೇಟಿಯಾಗಿದ್ದು ಅದ್ಬುತ ಕ್ಷಣವಾಗಿತ್ತು. ಅತ್ಯಂತ ವಿನಯಪೂರ್ವಕ ಹಾಗೂ ಸರಳ ಸಜ್ಜನಿಕೆಯ ಮನುಷ್ಯನನ್ನು ಎಲ್ಲಿಯೂ ನೋಡಿಲ್ಲ. ಲಕ್ಷಾಂತರ ಜನರಿಗೆ ನೀವು ಸ್ಪೂರ್ತಿಯಾಗಿದ್ದಿರಿ ಎಂದು ಪ್ರಣಯ್ ಪಾತೋಳೆ ಟ್ವೀಟ್ ಮಾಡಿದ್ದಾರೆ.
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.