ದೇಶ

ದಾವೋಸ್‌ನಲ್ಲಿ ನಡೆಯುವ 2023ರ ವಿಶ್ವ ಆರ್ಥಿಕ ಶೃಂಗ ಸಭೆಯಲ್ಲಿ ಯುಪಿ ಸಿಎಂ ಯೋಗಿ ಭಾಗಿ ಸಾಧ್ಯತೆ

Lingaraj Badiger

ಲಖನೌ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ವಿಶ್ವ ಆರ್ಥಿಕ ಶೃಂಗಸಭೆ-2023 ರಲ್ಲಿ ಪಾಲ್ಗೊಳ್ಳಲು ಸ್ವಿಟ್ಜರ್ಲೆಂಡ್‌ನ ದಾವೋಸ್‌ಗೆ ನಿಯೋಗ ಕರೆದೊಯ್ಯಲು ಸಿದ್ಧರಾಗಿದ್ದಾರೆ. 

ವಿಶ್ವ ಆರ್ಥಿಕ ಶೃಂಗ ಸಭೆಯಲ್ಲಿ ಉತ್ತರ ಪ್ರದೇಶ "ಅತ್ಯುತ್ತಮ ಹೂಡಿಕೆ ತಾಣ" ಎಂದು ಪ್ರದರ್ಶಿಸಲು ರಾಜ್ಯ ಸರ್ಕಾರ ಪೆವಿಲಿಯನ್ ಸಿದ್ಧಪಡಿಸುತ್ತಿದೆ. 

ವಿಶ್ವ ಆರ್ಥಿಕ ಶೃಂಗ ಸಭೆಯನ್ನು ಮುಂದಿನ ವರ್ಷ ಜನವರಿ 16 ರಿಂದ 20 ರವರೆಗೆ ದಾವೋಸ್‌ನಲ್ಲಿ ನಡೆಸಲು ಉದ್ದೇಶಿಸಲಾಗಿದೆ.

ಮುಂದಿನ ಐದು ವರ್ಷಗಳಲ್ಲಿ ರಾಜ್ಯವನ್ನು ಒಂದು ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿ ಮಾಡುವ ಗುರಿ ಸಾಧಿಸುವ ನಿಟ್ಟಿನಲ್ಲಿ ಈ ಪ್ರಯತ್ನವು ಯೋಗಿ ಸರ್ಕಾರದ ಮತ್ತೊಂದು ಹೆಜ್ಜೆಯಾಗಿದೆ.

ವಿಶ್ವ ಹಾರ್ಥಿಕ ಶೃಂಗಸಭೆಯಲ್ಲಿ ಭಾಗವಹಿಸುವ ಸಿಎಂ ಯೋಗಿ ಅವರ ಪ್ರಯಾಣದ ಯೋಜನೆಯನ್ನು ಅನುಮೋದಿಸಲಾಗಿದೆ. ಉತ್ತರ ಪ್ರದೇಶವನ್ನು ಸಂಭಾವ್ಯ ಹೂಡಿಕೆಯ ತಾಣವಾಗಿ ಮಾಡಲು ದಾವೋಸ್‌ನಲ್ಲಿ ಪೆವಿಲಿಯನ್ ಹಾಕುವುದು ಸೇರಿದಂತೆ ವಿವಿಧ ಆಯ್ಕೆಗಳ ಮೇಲೆ ರಾಜ್ಯ ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
 
ಆದಾಗ್ಯೂ, ಸಿಎಂ ಯೋಗಿ ಅವರ ಭಾಗವಹಿಸುವಿಕೆಯು ಅವರ ರಾಜಕೀಯ ಮತ್ತು ಇತರ ಕಾರ್ಯಕ್ರಮಗಳ ಮೇಲೆ ಹೆಚ್ಚು ಅವಲಂಬಿತವಾಗಿರುತ್ತದೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಯೋಗಿ ಆದಿತ್ಯನಾಥ್ ಅವರು ವಿಶ್ವ ಆರ್ಥಿಕ ಶೃಂಗ ಸಭೆಯಲ್ಲಿ ಭಾಗವಹಿಸಲು ದಾವೋಸ್‌ಗೆ ಪ್ರಯಾಣಿಸುವ ಮೊದಲ ಉತ್ತರ ಪ್ರದೇಶ ಮುಖ್ಯಮಂತ್ರಿ ಆಗಲಿದ್ದಾರೆ. ಮುಖ್ಯಮಂತ್ರಿಗಳ ಭೇಟಿಗೆ ರಾಜ್ಯ ಸರ್ಕಾರ ಸಿದ್ಧತೆಗಳನ್ನು ಚುರುಕುಗೊಳಿಸಿದೆ.

SCROLL FOR NEXT