ಅಗ್ನಿ-5 ಪರೀಕ್ಷಾರ್ಥ ಉಡಾವಣೆ ಯಶಸ್ವಿ 
ದೇಶ

ತವಾಂಗ್‌ ಘರ್ಷಣೆ ಬಿಸಿಯ ನಡುವೆಯೇ, ಅಗ್ನಿ 5 ಕ್ಷಿಪಣಿ ಯಶಸ್ವಿ ಪರೀಕ್ಷಾರ್ಥ ಉಡಾವಣೆ ಮಾಡಿದ ಭಾರತ!

ಚೀನಾದೊಂದಿಗಿನ ತವಾಂಗ್‌ ಘರ್ಷಣೆ ಹಸಿರಾಗಿರುವ ಹೊತ್ತಿನಲ್ಲೇ ಭಾರತ ತನ್ನ ಅತ್ಯಂತ ಯಶಸ್ವಿ ಕ್ಷಿಪಣಿ ವ್ಯವಸ್ಥೆಯಲ್ಲಿ ಒಂದಾಗಿರುವ ಅಗ್ನಿ-5 ಕ್ಷಿಪಣಿಯ ಯಶಸ್ವಿ ಪರೀಕ್ಷಾರ್ಥ ಉಡಾವಣೆ ಮಾಡಿದೆ.

ನವದೆಹಲಿ: ಚೀನಾದೊಂದಿಗಿನ ತವಾಂಗ್‌ ಘರ್ಷಣೆ ಹಸಿರಾಗಿರುವ ಹೊತ್ತಿನಲ್ಲೇ ಭಾರತ ತನ್ನ ಅತ್ಯಂತ ಯಶಸ್ವಿ ಕ್ಷಿಪಣಿ ವ್ಯವಸ್ಥೆಯಲ್ಲಿ ಒಂದಾಗಿರುವ ಅಗ್ನಿ-5 ಕ್ಷಿಪಣಿಯ ಯಶಸ್ವಿ ಪರೀಕ್ಷಾರ್ಥ ಉಡಾವಣೆ ಮಾಡಿದೆ.

ಅಗ್ನಿ-5 ಕ್ಷಿಪಣಿ ಪರೀಕ್ಷೆ ಇಂದು ಒಡಿಶಾ ಕರಾವಳಿಯಲ್ಲಿ ನಡೆಯಿತು. ಪರಮಾಣು ಸಾಮರ್ಥ್ಯದ ಮೇಲ್ಮೈಯಿಂದ ಮೇಲ್ಮೈ ಸಾಮರ್ಥ್ಯದ ಖಂಡಾತಂರ ಕ್ಷಿಪಣಿ ಅಗ್ನಿ-5 ರಾತ್ರಿ ಪ್ರಯೋಗ ಯಶಸ್ವಿಯಾಗಿದೆ ಎಂದು ರಕ್ಷಣಾ ಮೂಲಗಳು ಮಾಹಿತಿ ನೀಡಿವೆ. ಒಡಿಶಾದ ಬಾಲಸೋರ್ ಕರಾವಳಿಯಲ್ಲಿರುವ ಅಬ್ದುಲ್ ಕಲಾಂ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ನಡೆಸಲಾಯಿತು. ಈ ಕ್ಷಿಪಣಿಯಲ್ಲಿ ಮೂರು ಹಂತದ ಘನ ಇಂಧನ ಎಂಜಿನ್ ಅಳವಡಿಸಲಾಗಿದ್ದು, ಅಗ್ನಿ-5 ಐದು ಸಾವಿರ ಕಿಲೋಮೀಟರ್‌ ದೂರದ ಗುರಿಗಳನ್ನು ನಿಖರವಾಗಿ ಹೊಡೆದುರುಳಿಸುವ ಸಾಮರ್ಥ್ಯವನ್ನು ಹೊಂದಿದೆ. 

ಹೊಸ ಉಪಕರಣಗಳು ಮತ್ತು ತಂತ್ರಜ್ಞಾನ
ಹಾಲಿ ಉಡಾವಣೆಯಾದ ಅಗ್ನಿ-5 ಕ್ಷಿಪಣಿ ಹೊಸ ಉಪಕರಣಗಳು ಮತ್ತು ತಂತ್ರಜ್ಞಾನ ಸುಸಜ್ಜಿತವಾಗಿದೆ ಎಂದು ಸೇನೆ ಮಾಹಿತಿ ನೀಡಿದ್ದು, ಕ್ಷಿಪಣಿಯಲ್ಲಿ ಅಳವಡಿಸಲಾಗಿರುವ ಹೊಸ ತಂತ್ರಜ್ಞಾನಗಳು ಮತ್ತು ಉಪಕರಣಗಳನ್ನು ಪರೀಕ್ಷಿಸಲು ಇದನ್ನು ಉಡಾವಣೆ ಮಾಡಲಾಗಿದೆ ಎಂದು ರಕ್ಷಣಾ ಮೂಲಗಳು ತಿಳಿಸಿವೆ. ಈ ಕ್ಷಿಪಣಿ ಈಗ ಮೊದಲಿಗಿಂತ ಹಗುರವಾಗಿದ್ದು, ಅಷ್ಟೇ ಅಲ್ಲ, ಅಗ್ನಿ-5 ಕ್ಷಿಪಣಿಯ ವ್ಯಾಪ್ತಿಯನ್ನು ಬೇಕಾದರೆ ಹೆಚ್ಚಿಸುವ ಸಾಮರ್ಥ್ಯವನ್ನೂ ಅಭಿವೃದ್ಧಿಪಡಿಸಲಾಗಿದೆ ಎಂದು ಹೇಳಲಾಗಿದೆ.

ಅಗ್ನಿ-5 ಕ್ಷಿಪಣಿಯ ಹೊಸ ವೈಶಿಷ್ಟ್ಯಗಳು
ಅಗ್ನಿ ಸರಣಿಯ ಖಂಡಾಂತರ ಕ್ಷಿಪಣಿಯನ್ನು DRDO ಮತ್ತು ಭಾರತ್ ಡೈನಾಮಿಕ್ಸ್ ಲಿಮಿಟೆಡ್ ಜಂಟಿಯಾಗಿ ಅಭಿವೃದ್ಧಿಪಡಿಸಿವೆ. ಅನೇಕ ವರದಿಗಳಲ್ಲಿ, ಹೊಸ ಅಗ್ನಿ ಕ್ಷಿಪಣಿಯ ಫೈರ್‌ಪವರ್ (ದೂರದ ಸಾಮರ್ಥ್ಯ) 5,000 ರಿಂದ 8,000 ಕಿಮೀ ಎಂದು ಹೇಳಲಾಗಿದೆ. ಅಗ್ನಿ-5 17 ಮೀಟರ್ ಎತ್ತರ ಮತ್ತು 2 ಮೀಟರ್ ಅಗಲವನ್ನು ಹೊಂದಿದೆ. ಈ ಕ್ಷಿಪಣಿಯು 50 ಟನ್ ತೂಕವಿದ್ದು, 1.5 ಟನ್ ವರೆಗಿನ ಪರಮಾಣು ಸಿಡಿತಲೆಯನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ. ಅಗ್ನಿ-5 ಶಬ್ದದ 24 ಪಟ್ಟು ವೇಗದೊಂದಿಗೆ ಚಲಿಸಬಲ್ಲದು.

ಚೀನಾದ ಈ ನಗರಗಳು ಕ್ಷಿಪಣಿ ವ್ಯಾಪ್ತಿಯಲ್ಲಿ
ಇನ್ನು ರಕ್ಷಣಾ ತಜ್ಞರ ಪ್ರಕಾರ, ಈ ಕ್ಷಿಪಣಿ ಬೀಜಿಂಗ್, ಶಾಂಘೈ, ಗುವಾಂಗ್‌ಝೌ ಮತ್ತು ಹಾಂಗ್ ಕಾಂಗ್ ಸೇರಿದಂತೆ ಇಡೀ ಚೀನಾವನ್ನು ಗುರಿಯಾಗಿಸುವ ಸಾಮರ್ಥ್ಯವನ್ನು ಹೊಂದಿದೆ. 'ಅಗ್ನಿ-5' ಅದರ ಸರಣಿಯಲ್ಲಿ ಅತ್ಯಾಧುನಿಕ ಅಸ್ತ್ರವಾಗಿದೆ. ಇದು ನ್ಯಾವಿಗೇಷನ್‌ಗಾಗಿ ಇತ್ತೀಚಿನ ತಂತ್ರಜ್ಞಾನಗಳನ್ನು ಹೊಂದಿದೆ. ಪರಮಾಣು ವಸ್ತುಗಳನ್ನು ಸಾಗಿಸುವ ಅದರ ಸಾಮರ್ಥ್ಯವು ಇತರ ಕ್ಷಿಪಣಿ ವ್ಯವಸ್ಥೆಗಳಿಗಿಂತ ಹೆಚ್ಚು ಎನ್ನಲಾಗಿದೆ.

ಕೆಲವೇ ಕೆಲವು ದೇಶಗಳು ಇಂಟರ್-ಕಾಂಟಿನೆಂಟಲ್ ಬ್ಯಾಲಿಸ್ಟಿಕ್ ಮಿಸೈಲ್ ಸಿಸ್ಟಮ್ ಅನ್ನು ಹೊಂದಿವೆ. ಈ ವ್ಯವಸ್ಥೆ ಪಾಕಿಸ್ತಾನದ ಬಳಿಯೂ ಇಲ್ಲ.. ಅಮೆರಿಕಾದಲ್ಲಿ, ಚೀನಾ. ರಷ್ಯಾ, ಫ್ರಾನ್ಸ್ ಮತ್ತು ಉತ್ತರ ಕೊರಿಯಾದೊಂದಿಗೆ ಇದೀಗ ಈ ಪಟ್ಟಿಯಲ್ಲಿ ಭಾರತ ಕೂಡ ಇದೆ. ಭಾರತ ಈಗಾಗಲೇ 700 ಕಿ.ಮೀ ವ್ಯಾಪ್ತಿಯ ಅಗ್ನಿ-1, 2000 ಕಿ.ಮೀ ವ್ಯಾಪ್ತಿಯ ಅಗ್ನಿ-2, 2,500 ಕಿ.ಮೀ ನಿಂದ 3,500 ಕಿ.ಮೀ ವ್ಯಾಪ್ತಿಯ ಅಗ್ನಿ-3 ಕ್ಷಿಪಣಿಗಳನ್ನು ಹೊಂದಿದೆ. ಪಾಕಿಸ್ತಾನದ ವಿರುದ್ಧ ಮಾಡಿದ ತಂತ್ರದ ಅಡಿಯಲ್ಲಿ ಅವುನ್ನು ಸಿದ್ಧಪಡಿಸಲಾಗಿದೆ. ಆದರೆ ಚೀನಾವನ್ನು ಗಮನದಲ್ಲಿಟ್ಟುಕೊಂಡು ಅಗ್ನಿ-4 ಮತ್ತು ಅಗ್ನಿ-5 ಅನ್ನು ಸಿದ್ಧಪಡಿಸಲಾಗಿದೆ ಎಂದು ಸೇನಾ ಮೂಲಗಳು ಮಾಹಿತಿ ನೀಡಿದೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT