ದೇಶ

ಮೇಘಾಲಯ: ಇಬ್ಬರು ಕಾಂಗ್ರೆಸ್ ಶಾಸಕರು ರಾಜೀನಾಮೆ, ಆಡಳಿತರೂಢ ಎನ್‌ಪಿಪಿ ಸೇರ್ಪಡೆ

Lingaraj Badiger

ಗುವಾಹಟಿ: ನಿರೀಕ್ಷೆಯಂತೆ ಪಕ್ಷದಿಂದ ಅಮಾನತುಗೊಂಡಿದ್ದ ಮೇಘಾಲಯದ ಇಬ್ಬರು ಕಾಂಗ್ರೆಸ್ ಶಾಸಕರಾದ ಅಂಪಾರೀನ್ ಲಿಂಗ್ಡೋಹ್ ಮತ್ತು ಮೊಹೆಂದ್ರೋ ರಾಪ್ಸಾಂಗ್ ಅವರು ಸೋಮವಾರ ವಿಧಾನಸಭೆ ಹಾಗೂ ಪಕ್ಷಕ್ಕೆ ರಾಜೀನಾಮೆ ನೀಡಿ ಆಡಳಿತಾರೂಢ ನ್ಯಾಷನಲ್ ಪೀಪಲ್ಸ್ ಪಾರ್ಟಿ(ಎನ್‌ಪಿಪಿ)ಗೆ ಸೇರ್ಪಡೆಯಾಗಿದ್ದಾರೆ.

ಕಳೆದ ಫೆಬ್ರವರಿಯಲ್ಲಿ, ಎನ್ ಪಿಪಿ-ಬಿಜೆಪಿ ಸಮ್ಮಿಶ್ರ ಸರ್ಕಾರವನ್ನು ಬೆಂಬಲಿಸಿದ್ದ ಈ ಇಬ್ಬರೂ ಶಾಸಕರು ಸೇರಿದಂತೆ ಮೇಘಾಲಯದ ಎಲ್ಲಾ ಐವರು ಶಾಸಕರನ್ನು ಕಾಂಗ್ರೆಸ್ ಅಮಾನತುಗೊಳಿಸಿತ್ತು. ಅಂದಿನಿಂದ, ಅವರು ಗ್ರ್ಯಾಂಡ್ ಓಲ್ಡ್ ಪಾರ್ಟಿಯೊಂದಿಗೆ ವಾಸ್ತವವಾಗಿ ಯಾವುದೇ ಸಂಬಂಧವನ್ನು ಹೊಂದಿರಲಿಲ್ಲ.

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಲ್ಲಿಸಿರುವ ರಾಜೀನಾಮೆ ಪತ್ರದಲ್ಲಿ ಮಾಜಿ ಸಚಿವೆ ಲಿಂಗ್ಡೋ, ರಾಜ್ಯದ ಜನರೊಂದಿಗೆ ಕಾಂಗ್ರೆಸ್ ಸಂಪರ್ಕ ಕಳೆದುಕೊಂಡಿದೆ ಎಂದು ತಿಳಿಸಿದ್ದಾರೆ.

“ನಾನು ಕಾಂಗ್ರೆಸ್‌ನ ಕಟ್ಟಾ ಬೆಂಬಲಿಗ. ಆದಾಗ್ಯೂ, ಪಕ್ಷದೊಳಗಿನ ಇತ್ತೀಚಿನ ಬೆಳವಣಿಗೆಗಳು ಅದು ತಾನು ಸಾಗುವ ದಿಕ್ಕಿನ ಬಗ್ಗೆ ಪ್ರಜ್ಞೆ ಕಳೆದುಕೊಂಡಿದೆ ಎಂದು ನಂಬುವಂತೆ ಮಾಡಿದೆ. ಈ ಬಗ್ಗೆ ಪಕ್ಷ ಮತ್ತು ಅದರ ನಾಯಕತ್ವ ಚಿಂತನೆ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ. ಅಂತಹ ಆತ್ಮಾವಲೋಕನವನ್ನು ನಡೆಸುವ ಪ್ರಾಮಾಣಿಕ ಪ್ರಯತ್ನಗಳು ವಿಫಲವಾಗಿವೆ ಎಂದು ನಾನು ನಂಬುತ್ತೇನೆ" ಎಂದು ಲಿಂಗ್ಡೋಹ್ ಪತ್ರದಲ್ಲಿ ಬರೆದಿದ್ದಾರೆ.

"... ಸೇವೆ ಸಲ್ಲಿಸಲು ಇದು ನನಗೆ ಉತ್ತಮ ವೇದಿಕೆ ಎಂದು ನಾನು ಇನ್ನು ಮುಂದೆ ನಂಬುವುದಿಲ್ಲ. ಆದ್ದರಿಂದ, ತೀವ್ರ ವಿಷಾದದಿಂದ ತಕ್ಷಣದಿಂದ ಜಾರಿಗೆ ಬರುವಂತೆ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ”ಎಂದು ಹೇಳಿದ್ದಾರೆ.

SCROLL FOR NEXT