ಸಂಗ್ರಹ ಚಿತ್ರ 
ದೇಶ

ಮದುವೆ ದಿಬ್ಬಣದ ಬಸ್​ಗೆ ಕಂಟೈನರ್ ಡಿಕ್ಕಿ: ಚಾಲಕ ಸಾವು, 10 ಮಂದಿಗೆ ಗಾಯ

ಮದುವೆ ದಿಬ್ಬಣದ ಬಸ್'ಗೆ ಹಿಂಬದಿಯಿಂದ ಕಂಟೈನರ್ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಓರ್ವ ಸಾವನ್ನಪ್ಪಿ 10 ಮಂದಿ ಪ್ರಯಾಣಿಕರು ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ.

ಮುಂಬೈ: ಮದುವೆ ದಿಬ್ಬಣದ ಬಸ್'ಗೆ ಹಿಂಬದಿಯಿಂದ ಕಂಟೈನರ್ ಟ್ರಕ್ ಡಿಕ್ಕಿ ಹೊಡೆದ ಪರಿಣಾಮ ಓರ್ವ ಸಾವನ್ನಪ್ಪಿ 10 ಮಂದಿ ಪ್ರಯಾಣಿಕರು ಗಾಯಗೊಂಡಿರುವ ಘಟನೆ ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಮುಂಬೈ-ಪುಣೆ ಎಕ್ಸ್‌ಪ್ರೆಸ್‌ವೇಯಲ್ಲಿ ಸೋಮವಾರ ಬೆಳಗ್ಗೆ ನಡೆದಿದೆ.

ಮದುವೆ ಸಮಾರಂಭ ಮುಗಿಸಿ ಸಿಂಧುದುರ್ಗದಿಂದ ಶಹಪುರಕ್ಕೆ ಖಾಸಗಿ ಬಸ್​ ತೆರಳುತ್ತಿತ್ತು. ಬಸ್ ನಲ್ಲಿ ಸುಮಾರು 35 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಈ ವೇಳೆ ಹಿಂಬದಿಯಿಂದ ಬರುತ್ತಿದ್ದ ಕಂಟೈನರ್ ಟ್ರಕ್ ಗುದ್ದಿದೆ. ಡಿಕ್ಕಿಯ ರಭಸಕ್ಕೆ ಚಾಲಕ ಬಸ್​ನಿಂದ ಕೆಳಕ್ಕೆ ಬಿದ್ದು, ಟ್ರಕ್​ನ ಚಕ್ರದಡಿ ಸಿಲುಕಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಇದರಂತೆ ಬಸ್​ನಲ್ಲಿದ್ದ ಹತ್ತು ಮಂದಿ ಪ್ರಯಾಣಿಕರು ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ರವಾನಿಸಲಾಗಿದೆ.

ಪ್ರಕರಣ ದಾಖಲಿಸಿಕೊಂಡ ಸ್ಥಳೀಯ ಪೊಲೀಸರು ಕಂಟೈನರ್ ಚಾಲಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'E20 ಈಗ 420 ಆಗಿದೆ': ಪೆಟ್ರೋಲ್‌ನಲ್ಲಿ ಎಥೆನಾಲ್ ಪ್ರಮಾಣ ಹೆಚ್ಚಾಗಿದೆ, ಲಾಭ ಯಾರಿಗೆ?; ಪ್ರಧಾನಿ ಮೋದಿ ವಿರುದ್ಧ ರಾಹುಲ್ ಗಾಂಧಿ ಕಿಡಿ

'ತುಂಡು ತುಂಡಾಗಿ ಕತ್ತರಿಸುತ್ತಾರೆ' ಹೇಳಿಕೆ: ಛಲವಾದಿ ನಾರಾಯಣಸ್ವಾಮಿ ಮನೆಗೆ ಚಾಕು, ಚೂರಿ ಆರ್ಡರ್; ಡೆಲಿವರಿ ಬಾಯ್ಸ್ ಬಂದಾಗ ಹೈಡ್ರಾಮಾ!

ವಿಜಯಪುರ ಕೊಲೆ ಪ್ರಕರಣ: ಪ್ರಮುಖ ಆರೋಪಿ ಸಮೀರ್ ಮುಲ್ಲಾನ ಕಾಲಿಗೆ ಗುಂಡಿಕ್ಕಿ ಬಂಧನ, ಪೊಲೀಸ್ ಸಿಬ್ಬಂದಿಗೆ ಗಾಯ!

SBI ಬ್ಯಾಂಕ್‌ಗೆ ₹12,668 ಕೋಟಿ ಸಾಲ ಬಾಕಿ: ಮಾಜಿ ವೀಡಿಯೊಕಾನ್ ಮುಖ್ಯಸ್ಥ ವೇಣುಗೋಪಾಲ್ ಧೂತ್ ದಿವಾಳಿ ಎಂದ NCLT

ಗಾಜಿಯಾಬಾದ್ ಪೊಲೀಸ್ ಔಟ್ ಪೋಸ್ಟ್ ಸ್ಫೋಟ: ಹೊಣೆ ಹೊತ್ತ 'ತೆಹ್ರೀಕ್-ಉಲ್-ಮುಜಾಹಿದ್ದೀನ್' ಉಗ್ರ ಸಂಘಟನೆ, ATS ತನಿಖೆ ಶುರು!