ಮೇಲಾಜಿ ವಘೇಲಾ 
ದೇಶ

ಗುಜರಾತ್: ಮಗಳ ಅಶ್ಲೀಲ ವಿಡಿಯೋ ಹರಿಬಿಟ್ಟ ವಿದ್ಯಾರ್ಥಿ; ಪ್ರಶ್ನಿಸಲು ಹೋದ ಬಿಎಸ್‌ಎಫ್ ಯೋಧನ ಹತ್ಯೆ

ಮಗಳ ಅಶ್ಲೀಲ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಹುಡುಗನನ್ನು ಪ್ರಶ್ನಿಸಲು ಹೋದ ಬಿಎಸ್‌ಎಫ್‌  ಯೋಧನನ್ನು ಹುಡುಗನ ಮನೆಯವರು ಹೊಡೆದು ಕೊಂದಿರುವ ಆಘಾತಕಾರಿ ಘಟನೆ ಗುಜರಾತ್‌ನಲ್ಲಿ ನಡೆದಿದೆ.

ಗುಜರಾತ್: ಮಗಳ ಅಶ್ಲೀಲ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಹುಡುಗನನ್ನು ಪ್ರಶ್ನಿಸಲು ಹೋದ ಬಿಎಸ್‌ಎಫ್‌  ಯೋಧನನ್ನು ಹುಡುಗನ ಮನೆಯವರು ಹೊಡೆದು ಕೊಂದಿರುವ ಆಘಾತಕಾರಿ ಘಟನೆ ಗುಜರಾತ್‌ನಲ್ಲಿ ನಡೆದಿದೆ.

ಬಿಎಸ್ಎಫ್ ಯೋಧ ಮೇಲಾಜಿ ವಘೇಲಾ ಅವರ ಮಗಳು ಹಾಗೂ ಆಕೆಯ ತರಗತಿಯಲ್ಲೇ ಓದುತ್ತಿದ್ದ 15 ವರ್ಷದ ಬಾಲಕ ಪರಸ್ಪರ ಸಂಬಂಧ ಹೊಂದಿದ್ದರು. ಇತ್ತೀಚೆಗೆ ಈ 15 ವರ್ಷದ ಯುವಕ ಸಾಮಾಜಿಕ ಜಾಲತಾಣದಲ್ಲಿ ಈ ಬಾಲಕಿಯ ಅಶ್ಲೀಲ ವಿಡಿಯೋವನ್ನು ಪೋಸ್ಟ್ ಮಾಡಿದ್ದ, ಇದು ವೈರಲ್ ಆಗಿತ್ತು.

ಈ ಹಿನ್ನೆಲೆಯಲ್ಲಿ ವಿಚಾರಿಸಲು ಆತನ ಮನೆಗೆ ಹೋದ ಯೋಧ ಹಾಗೂ ಆತನ ಕುಟುಂಬವನ್ನು ಬಾಲಕನ ಮನೆಯವರು ನಿಂದಿಸಲು ಶುರು ಮಾಡಿದ್ದಾರೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದಾಗ ಆತನ ಮನೆಯವರೆಲ್ಲರೂ ಸೇರಿ ಯೋಧನನ್ನು ಥಳಿಸಿದ್ದಾರೆ. ಇದರಿಂದ ಗಂಭೀರ ಗಾಯಗೊಂಡ ಅವರು ನಂತರ ಸಾವನ್ನಪ್ಪಿದ್ದಾರೆ.

ಗುಜರಾತ್‌ನ ಖೇಡಾ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ. ಜಿಲ್ಲೆಯ ನಾಡಿಯಾಡ್ ತಹಸಿಲ್‌ನ  ಚಕ್ಲಾಸಿ ಗ್ರಾಮದಲ್ಲಿ  ಶನಿವಾರ ಈ ಘಟನೆ ನಡೆದಿದ್ದು, ತನ್ನ ಮಗಳ ಅಶ್ಲೀಲ ವೀಡಿಯೊವನ್ನು ಪ್ರಸಾರ ಮಾಡಿದ್ದನ್ನು ವಿರೋಧಿಸಿದ ಕಾರಣಕ್ಕಾಗಿ ಯೋಧನನ್ನು ಹತ್ಯೆ ಮಾಡಲಾಗಿದೆ.

ಯೋಧ ಹಾಗೂ ಆತನ ಕುಟುಂಬ ಅಶ್ಲೀಲ ವಿಡಿಯೋ ವಿಚಾರವಾಗಿ ಕೇಳಲು ಶನಿವಾರ ಚಕ್ಲಾಸಿ ಗ್ರಾಮದ ಬಾಲಕನ ಮನೆಗೆ ತೆರಳಿದಾಗ  ಘಟನೆ ಸಂಭವಿಸಿದೆ. ಈ ಸಂಬಂಧ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ಬಿಎಸ್‌ಎಫ್ ಯೋಧ ಮತ್ತು ಅವರ ಕುಟುಂಬವು ಜಾದವ್  ಮನೆಗೆ ಹೋಗಿದ್ದಾರೆ. ಈ ವೇಳೆ  ಹುಡುಗನ  ತಂದೆ ಮತ್ತು ಕುಟುಂಬದ ಇತರ ಆರು ಸದಸ್ಯರು ವಘೇಲಾ ಮತ್ತು ಅವರ ಮಗನ ತಲೆಯ ಮೇಲೆ ಕೋಲು ಮತ್ತು ಕುಡಗೋಲಿನಿಂದ ಹಲ್ಲೆ ನಡೆಸಿದರು.  ಈ ವೇಳೆ ಹುಡುಗಿಯ ತಾಯಿ ಮಂಜುಳಾಬೆನ್ ಅವರಿಗೂ ಗಾಯಗಳಾಗಿವೆ. ನಾವು ಎಲ್ಲಾ ಏಳು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದೇವೆ, ಎಲ್ಲರನ್ನೂ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ.50 ರಷ್ಟು ಸುಂಕ ನಾಳೆ ಜಾರಿ: ಕರಡು ಸೂಚನೆ ಹೊರಡಿಸಿದ ಅಮೆರಿಕ

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

ವಿಧಾನಪರಿಷತ್'ಗೆ ನಾಮನಿರ್ದೇಶನ: ನಾಲ್ವರು MLC ಅಭ್ಯರ್ಥಿಗಳು ಹೆಸರು ಬದಲು, ಪಟ್ಟಿಯಲ್ಲಿ TNIE ಮೈಸೂರು ವಿಭಾಗದ ಮುಖ್ಯಸ್ಥನಿಗೆ ಸ್ಥಾನ

SCROLL FOR NEXT