ಸಾಂದರ್ಭಿಕ ಚಿತ್ರ 
ದೇಶ

ಭಾರತ-ನೇಪಾಳ ಗಡಿಯಲ್ಲಿ ಇಬ್ಬರು ಚೀನಾ ಪ್ರಜೆಗಳ ಬಂಧನ

ಉತ್ತರ ಪ್ರದೇಶದ ಮಹಾರಾಜ್‌ಗಂಜ್‌ನ ಸೊನೌಲಿ ಪ್ರದೇಶದಲ್ಲಿ ಭಾರತ-ನೇಪಾಳ ಗಡಿಯಲ್ಲಿ ಸುತ್ತಾಡುತ್ತಿದ್ದ ಇಬ್ಬರು ಚೀನಿ ಪ್ರಜೆಗಳನ್ನು ಸಶಸ್ತ್ರ ಸೀಮಾ ಬಲ(ಎಸ್‌ಎಸ್‌ಬಿ) ಬಂಧಿಸಿದೆ ಎಂದು ಉತ್ತರ ಪ್ರದೇಶ ಪೊಲೀಸರು ಶನಿವಾರ ತಿಳಿಸಿದ್ದಾರೆ.

ಮಹಾರಾಜ್‌ಗಂಜ್‌: ಉತ್ತರ ಪ್ರದೇಶದ ಮಹಾರಾಜ್‌ಗಂಜ್‌ನ ಸೊನೌಲಿ ಪ್ರದೇಶದಲ್ಲಿ ಭಾರತ-ನೇಪಾಳ ಗಡಿಯಲ್ಲಿ ಸುತ್ತಾಡುತ್ತಿದ್ದ ಇಬ್ಬರು ಚೀನಿ ಪ್ರಜೆಗಳನ್ನು ಸಶಸ್ತ್ರ ಸೀಮಾ ಬಲ(ಎಸ್‌ಎಸ್‌ಬಿ) ಬಂಧಿಸಿದೆ ಎಂದು ಉತ್ತರ ಪ್ರದೇಶ ಪೊಲೀಸರು ಶನಿವಾರ ತಿಳಿಸಿದ್ದಾರೆ.
  
ಪೊಲೀಸರ ಪ್ರಕಾರ, ಸಶಸ್ತ್ರ ಸೀಮಾ ಬಲ ಪೊಲೀಸರು ಶುಕ್ರವಾರ ತಡರಾತ್ರಿ ಗಡಿಯಲ್ಲಿ ವಾಡಿಕೆಯಂತೆ ತಪಾಸಣೆ ನಡೆಸುತ್ತಿದ್ದ ವೇಳೆ ಇಬ್ಬರು ವಿದೇಶಿ ಪ್ರಜೆಗಳನ್ನು ವಶಕ್ಕೆ ಪಡೆದಿದ್ದಾರೆ.

ವಿದೇಶಿಗರು ಈ ಪ್ರದೇಶಕ್ಕೆ ಭೇಟಿ ನೀಡಿದ ಕಾರಣವನ್ನು ಕೇಳಲಾಯಿತು. ಆದರೆ ಅವರು ಸರಿಯಾಗಿ ಉತ್ತರ ನೀಡದ  ಕಾರಣ ಅವರನ್ನು ಬಂಧಿಸಲಾಗಿದೆ ಎಂದು ಉತ್ತರ ಪ್ರದೇಶ ಪೊಲೀಸರು ತಿಳಿಸಿದ್ದಾರೆ.

ಗುಪ್ತಚರ ಸಂಸ್ಥೆಗಳು ಇಬ್ಬರನ್ನು ವಿಚಾರಣೆ ನಡೆಸುತ್ತಿವೆ ಎಂದು ಸೋನೌಲಿ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಅಭಿಷೇಕ್ ಸಿಂಗ್ ಹೇಳಿದ್ದಾರೆ.

"ಬಂಧಿತ ಇಬ್ಬರು ಝೆಂಗ್ ಯಿಂಗ್ಜುನ್(50) ಮತ್ತು ಸಾಂಗ್ ಹುಯಿ(52) ಹೆಸರಿನಲ್ಲಿ ಚೀನಾ ಗಣರಾಜ್ಯದ ಪಾಸ್‌ಪೋರ್ಟ್‌ಗಳನ್ನು ಹೊಂದಿದ್ದಾರೆ. ಭಾರತ ಪ್ರವೇಶಿಸಲು ಅವರ ವೀಸಾ ಅವಧಿಯೂ ಮುಗಿದಿದೆ. ಅವರು ಈ ಹಿಂದೆ ಹಲವಾರು ಬಾರಿ ಭಾರತಕ್ಕೆ ಭೇಟಿ ನೀಡಿದ್ದಾರೆ" ಎಂದು ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಕರ್ನಾಟಕ ಸೇರಿ ದೇಶಾದ್ಯಂತ Pakನ ISI ಬೆಂಬಲಿತ ಗ್ಯಾಂಗಸ್ಟರ್ ಶಹಜಾದ್ ಭಟ್ಟಿ ಜಾಲದ 200ಕ್ಕೂ ಹೆಚ್ಚು ಜನರ ಬಂಧನ: ಅಮಿತ್ ಶಾ

SIR ಪ್ರಕ್ರಿಯೆಯಲ್ಲಿನ ಅನ್ಯಾಯ ತಡೆಗೆ ಸರ್ಕಾರ ಕೂಡಲೇ ಮಧ್ಯಪ್ರವೇಶಿಸಬೇಕು: ಸಿಎಂ ಶಿವಕುಮಾರ್ ಗೆ ಪ್ರಕಾಶ್ ರಾಜ್ ಮನವಿ

'ನಾನು ಎಂದಿಗೂ ವಂದೇ ಮಾತರಂ ಹಾಡುವುದಿಲ್ಲ': 'ನಮ್ಮ ಧರ್ಮ ಒಪ್ಪಲ್ಲ'; Congress ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್

D Boss, D Boss ಜೈಕಾರಕ್ಕೆ ಗರಂ: ನಿಮ್ಮಂತವರಿಂದಲೇ ತೊಂದರೆ ಆಗ್ತೀರೋದು, ಅಭಿಮಾನಿಗಳಿಗೆ ವಿಜಯಲಕ್ಷ್ಮಿ ಬುದ್ಧಿ ಮಾತು, Video!

ಶಿವಮೊಗ್ಗ: ನಡು ರಸ್ತೆಯಲ್ಲೇ ಕಬ್ಬಿಣದ ರಾಡ್ ನಿಂದ ವ್ಯಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ, Video ವೈರಲ್ ಬಳಿಕ ಆರೋಪಿ ಬಂಧನ!