ದೇಶ

ಮೊಹಮ್ಮದ್ ಜುಬೇರ್ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದ ದೆಹಲಿ ಕೋರ್ಟ್!

Vishwanath S

ನವದೆಹಲಿ: 2018ರಲ್ಲಿ ಹಿಂದೂ ದೇವತೆಯ ವಿರುದ್ಧದ 'ಆಕ್ಷೇಪಾರ್ಹ ಟ್ವೀಟ್'ಗೆ ಸಂಬಂಧಿಸಿದ ಪ್ರಕರಣದಲ್ಲಿ ಆಲ್ಟ್ ನ್ಯೂಸ್ ಸಹ-ಸಂಸ್ಥಾಪಕ ಮೊಹಮ್ಮದ್ ಜುಬೇರ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ವಜಾಗೊಳಿಸಿರುವ ದೆಹಲಿ ನ್ಯಾಯಾಲಯವು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ.

ಚೀಫ್ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಸ್ನಿಗ್ಧಾ ಸರ್ವರಿಯಾ ಪೊಲೀಸ್ ಮನವಿಯನ್ನು ಅನುಮತಿಸಿದ್ದು ನ್ಯಾಯಾಂಗ ಬಂಧನಕ್ಕೆ ಆದೇಶಿಸಿದ್ದಾರೆ. 

ಐದು ದಿನಗಳ ಕಸ್ಟಡಿಯಲ್ ವಿಚಾರಣೆಯ ಅವಧಿ ಮುಗಿದ ಹಿನ್ನಲೆಯಲ್ಲಿ ದೆಹಲಿ ಪೊಲೀಸರು ಜುಬೈರ್‌ನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒತ್ತಾಯಿಸಿದ್ದರು.

ಟ್ವೀಟ್ 2018ರದ್ದಾಗಿದ್ದು, ನಾನು (ಜುಬೈರ್) ಪ್ರಸ್ತುತ ಬಳಸುತ್ತಿರುವ ಫೋನ್. ಆ ಟ್ವೀಟ್ ಮಾಡಿದ್ದು ನಾನೇ ಎಂದು ಸಹ ಹೇಳಿಕೊಂಡಿದ್ದಾನೆ. ಜುಬೈರ್ ವಿರುದ್ಧ ಈ ಹಿಂದೆ ಐಪಿಸಿಯ ಸೆಕ್ಷನ್ 153 (ಗಲಭೆ ಉಂಟುಮಾಡುವ ಉದ್ದೇಶದಿಂದ ಪ್ರಚೋದನೆ ನೀಡುವುದು) ಮತ್ತು 295 (ಯಾವುದೇ ವರ್ಗದ ಧರ್ಮವನ್ನು ಅವಮಾನಿಸುವ ಉದ್ದೇಶದಿಂದ ಪೂಜಾ ಸ್ಥಳವನ್ನು ಅಪವಿತ್ರಗೊಳಿಸುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

SCROLL FOR NEXT