ದೇಶ

ತೆಲಂಗಾಣ: ಟಿಆರ್ ಎಸ್ ಸರ್ಕಾರ ಕಿತ್ತೆಸೆದು ಬಿಜೆಪಿಗೆ ಅವಕಾಶ ಕೊಡಿ- ಅಮಿತ್ ಶಾ

Nagaraja AB

ಹೈದರಾಬಾದ್: ತೆಲಂಗಾಣದಲ್ಲಿ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ನೇತೃತ್ವದಲ್ಲಿನ ಟಿಆರ್ ಎಸ್ ಸರ್ಕಾರವನ್ನು ಕಿತ್ತೆಸೆದು ಒಂದು ಬಾರಿ ಬಿಜೆಪಿಗೆ ಅವಕಾಶ ಮಾಡಿಕೊಡುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಬಿಜೆಪಿ 'ವಿಜಯ ಸಂಕಲ್ಪ ಸಭಾ' ಸಮಾವೇಶವನ್ನುದ್ದೇಶಿಸಿ ಮಾತನಾಡಿದ ಅವರು, ತೆಲಂಗಾಣದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ತೆಲಂಗಾಣ ಅಧಿಕೃತವಾಗಿ ವಿಮೋಚನಾ ದಿನವನ್ನು ಆಚರಿಸಲಿದೆ ಎಂದು ಹೇಳಿದರು. 

ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಆಡಳಿತವಿರುವ ಎಲ್ಲಾ ರಾಜ್ಯಗಳು ಪ್ರಗತಿಪಥದಲ್ಲಿ ನಡೆಯುತ್ತಿವೆ. ತೆಲಂಗಾಣದಲ್ಲಿ ಯುವ ಜನತೆಗೆ ಉದ್ಯೋಗ ಸಿಗದಂತಾಗಿದೆ. ಉದ್ಯಮಗಳು ಬರುತ್ತಿಲ್ಲ. ಯಾವುದೇ ಅಭಿವೃದ್ಧಿಯಾಗುತ್ತಿಲ್ಲ. ಇಡೀ ದೇಶವೇ ಪ್ರಗತಿ ಪಥದಲ್ಲಿ ಸಾಗುತ್ತಿದ್ದರೆ ತೆಲಂಗಾಣ ಇನ್ನೂ ಹಿಂದುಳಿದಿದೆ. ಈ ಪರಿಸ್ಥಿತಿ ತೆಲಂಗಾಣಕ್ಕೆ ಒಳ್ಳೆಯದಲ್ಲ ಎಂದು ಅಮಿತ್ ಶಾ ಹೇಳಿದರು.

ಸರ್ಕಾರ ರಚನೆಗೆ ಬಿಜೆಪಿಗೆ ಒಂದು ಅವಕಾಶ ನೀಡಿ, ಟಿಆರ್ ಎಸ್ ಸರ್ಕಾರನ್ನು ಕಿತ್ತೆಸೆಯಿರಿ ಎಂದು ಜನತೆಗೆ ಮನವಿ ಮಾಡಿದ ಅಮಿತ್ ಶಾ, ಟಿಆರ್ ಎಸ್ ಮಾಡದಿರುವುದನ್ನು ಬಿಜೆಪಿ ಸರ್ಕಾರ ಮಾಡುವುದಾಗಿ ಭರವಸೆ ನೀಡಿದರು.

ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿಯ ಭಯದಿಂದ ಕೆಸಿಆರ್ ತೆಲಂಗಾಣ ವಿಮೋಚನಾ ದಿನವನ್ನು ಆಚರಿಸುತ್ತಿಲ್ಲ ಎಂದು ಆರೋಪಿಸಿದ  ಅಮಿತ್ ಶಾ, ಓವೈಸಿ ಟಿಆರ್ ಎಸ್ ಪಕ್ಷದ ಗುರುತು ಆಗಿರುವ ಕಾರಿನ ಸ್ಟೇರಿಂಗ್ ಓವೈಸಿ ಕೈಯಲ್ಲಿದೆ. ತೆಲಂಗಾಣ ಜನರ ಮನಸ್ಥಿತಿ ಗಮನಿಸಿದ್ದು, ಕೆಸಿಆರ್ ನಿಮಗೆ ಯಾವಾಗ ಬೇಕೋ ಆಗ ಚುನಾವಣೆ ನಡೆಸಿ, ಬಿಜೆಪಿ ರಾಜ್ಯದಲ್ಲಿ ಸರ್ಕಾರ ರಚಿಸಲು ಸಜ್ಜಾಗಿದೆ ಎಂದರು.
 

SCROLL FOR NEXT