ಶಿಕ್ಷೆಯ ದೃಶ್ಯ 
ದೇಶ

ಮಧ್ಯಪ್ರದೇಶ: ಪ್ರಿಯಕರನೊಂದಿಗೆ ಸಿಕ್ಕಿಬಿದ್ದ ಗೃಹಿಣಿಗೆ ಅಮಾನವೀಯ ಶಿಕ್ಷೆ, ವಿಡಿಯೋ ವೈರಲ್!

ಮಧ್ಯಪ್ರದೇಶದ ದೇವಾಸ್ ಜಿಲ್ಲೆಯಲ್ಲಿ ತಾಲಿಬಾನಿ ರೀತಿಯ ಶಿಕ್ಷೆ ನೀಡಲಾಗಿದೆ. ವಿವಾಹಿತ ಮಹಿಳೆ ತನ್ನ ಪ್ರಿಯಕರನೊಂದಿಗೆ ಸಿಕ್ಕಿಬಿದ್ದಾಗ, ಗುಂಪೊಂದು ತಾಲಿಬಾನಿ ರೀತಿಯಲ್ಲಿ ವರ್ತಿಸಿ ಇಬ್ಬರನ್ನೂ ಶಿಕ್ಷಿಸಿದ್ದಾರೆ. ಅದರ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ದೇವಾಸ್: ಮಧ್ಯಪ್ರದೇಶದ ದೇವಾಸ್ ಜಿಲ್ಲೆಯಲ್ಲಿ ತಾಲಿಬಾನಿ ರೀತಿಯ ಶಿಕ್ಷೆ ನೀಡಲಾಗಿದೆ. ವಿವಾಹಿತ ಮಹಿಳೆ ತನ್ನ ಪ್ರಿಯಕರನೊಂದಿಗೆ ಸಿಕ್ಕಿಬಿದ್ದಾಗ, ಗುಂಪೊಂದು ತಾಲಿಬಾನಿ ರೀತಿಯಲ್ಲಿ ವರ್ತಿಸಿ ಇಬ್ಬರನ್ನೂ ಶಿಕ್ಷಿಸಿದ್ದಾರೆ. ಅದರ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. 

ಆದಿವಾಸಿಗಳ ಪ್ರಾಬಲ್ಯವಿರುವ ಉದಯನಗರದ ಬೋರ್ಪದವ್ ಗ್ರಾಮದಲ್ಲಿ ನಡೆದಿದೆ. ಜೂನ್ 24ರಂದು ಮಹಿಳೆ ಮನೆ ಬಿಟ್ಟು ಎಲ್ಲೋ ಹೋದವಳು ವಾಪಸ್ ಬಂದಿರಲಿಲ್ಲ. ಮಹಿಳೆಯ ಪತಿ ಎಲ್ಲಾ ಕಡೆ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ಮಹಿಳೆ ಕಾಣೆಯಾಗಿರುವ ಬಗ್ಗೆ ಪತಿ ಉದಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ವೇಳೆ ಯುವತಿ ತನ್ನ ಪ್ರಿಯಕರನಾಗಿರುವ ಹರಿ ಸಿಂಗ್ ಎಂಬ ಯುವಕನ ಮನೆಯಲ್ಲಿ ಅದೇ ಗ್ರಾಮದಲ್ಲಿಯೇ ವಾಸವಾಗಿದ್ದಾಳೆ ಎಂದು ತಿಳಿದು ಬಂದಿದೆ.

ಗ್ರಾಮದ ಜನರು ಹರಿಸಿಂಗ್ ಅವರ ಮನೆಯಲ್ಲಿ ಮಹಿಳೆಯನ್ನು ಪತ್ತೆ ಹಚ್ಚಿದ್ದಾರೆ. ಪತಿ ಮತ್ತು ಗ್ರಾಮಸ್ಥರು ಮಹಿಳೆ ಹಾಗೂ ಪ್ರಿಯಕರನನ್ನು ಮನೆಯಿಂದ ಆಚೆ ತಂದು ಇಬ್ಬರನ್ನೂ ಮೊದಲು ತೀವ್ರವಾಗಿ ಥಳಿಸಲಾಯಿತು. ನಂತರ ಪತಿಯನ್ನು ಮಹಿಳೆಯ ಭುಜದ ಮೇಲೆ ಕೂರಿಸಿ ಗ್ರಾಮದಾದ್ಯಂತ ಮೆರವಣಿಗೆ ಮಾಡಿದ್ದಾರೆ. ಇನ್ನು ಪ್ರಿಯಕರನ ಕೊರಳಿಗೆ ಪಾದರಕ್ಷೆ ಮತ್ತು ಚಪ್ಪಲಿಯನ್ನು ಧರಿಸಿ ಮೆರವಣಿಗೆ ನಡೆಸಿದರು.

9 ಜನರನ್ನು ಬಂಧಿಸಿದ ಪೊಲೀಸರು
ಈ ಸಂದರ್ಭದಲ್ಲಿ ಇಬ್ಬರೂ ಕ್ಷಮೆಗಾಗಿ ಬೇಡಿಕೊಂಡರು. ಆದರೆ ಅಲ್ಲಿ ನೆರೆದಿದ್ದ ಜನರು ಸಹಾಯ ಮಾಡುವ ಬದಲು ಅವರನ್ನು ನೋಡಿ ನಗುತ್ತಿದ್ದರು. ಇದನ್ನು ನೆರೆದಿದ್ದವರೊಬ್ಬರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಿದ್ದಾರೆ. ಈ ವೀಡಿಯೋ ಪೊಲೀಸರಿಗೆ ತಲುಪಿದ ಕೂಡಲೇ ವಿಡಿಯೋ ಆಧರಿಸಿ ಪತಿ ಮಂಗಿಲಾಲ್ ಸೇರಿದಂತೆ 9 ಮಂದಿಯನ್ನು ಬಂಧಿಸಿ ಇಬ್ಬರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಹೆಚ್ಚುವರಿ ಎಸ್ಪಿ ಸೂರ್ಯಕಾಂತ್ ಶರ್ಮಾ ಪ್ರಕಾರ, ಪ್ರಕರಣದ ತನಿಖೆ ಇನ್ನೂ ಮುಂದುವರೆದಿದೆ. ಇದರಲ್ಲಿ ಯಾರೇ ತಪ್ಪಿತಸ್ಥರಾದರೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಮತಗಳ್ಳತನ' ನಡೆದಿರುವುದನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ನಿರಾಕರಿಸಲಿಲ್ಲ, ನನಗೆ ಆಶ್ಚರ್ಯವಾಯಿತು: ರಾಹುಲ್ ಗಾಂಧಿ

ಬೆಂಗಳೂರು: ನಮ್ಮ ಮೆಟ್ರೋದಲ್ಲಿ Alt News ಸಹ ಸ್ಥಾಪಕ ಮೊಹಮ್ಮದ್ ಜುಬೈರ್ ಗೆ ಹಿಗ್ಗಾಮುಗ್ಗ ಥಳಿತ?, Video Viral

19ನೇ ಓವರ್‌ನಲ್ಲೇ 250 ರನ್ ಚೇಸ್: ಟಿ20 ಕ್ರಿಕೆಟ್‌ನಲ್ಲಿ ಭಾರತವನ್ನು ಸೋಲಿಸಿ ದಾಖಲೆ ಬರೆದ ವಿಂಡೀಸ್

CJP Protest: ಭಾರತದ ಯುವಕರು ದೆಹಲಿಗೆ ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ: ಚಿರಾಗ್ ಪಾಸ್ವಾನ್

24 ಗಂಟೆ ಇಂಟರ್ನೆಟ್ ಕಟ್, 57 ಮೆಟ್ರೋ ನಿಲ್ದಾಣ ಬಂದ್: ಸಿಜೆಪಿ ಪ್ರತಿಭಟನೆಗೂ ಮುನ್ನ ದೆಹಲಿ ಹೈ ಅಲರ್ಟ್