ದೇಶ

ಧರ್ಮವನ್ನು ವ್ಯಕ್ತಿಗಳಿಗೆ ಖಾಸಗಿಯಾಗಿ ಆಚರಿಸಲು ಬಿಡಬೇಕು: ಮೊಯಿತ್ರಾ ಕಾಳಿ ಟೀಕೆ ವಿವಾದಕ್ಕೆ ತರೂರ್ ಪ್ರತಿಕ್ರಿಯೆ

Nagaraja AB

ನವದೆಹಲಿ: ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಅವರು ಕಾಳಿ ದೇವಿ ಬಗ್ಗೆ ನೀಡಿರುವ ಹೇಳಿಕೆಗಾಗಿ ಅವರ ಮೇಲಿನ ದಾಳಿಯಿಂದ ನಾನು ಆಘಾತಕ್ಕೊಳಗಾಗಿದ್ದೇನೆ ಎಂದು ಕಾಂಗ್ರೆಸ್ ನಾಯಕ ಶಶಿ ತರೂರ್ ಬುಧವಾರ ಹೇಳಿದ್ದಾರೆ.

ಪ್ರತಿ ವ್ಯಕ್ತಿಗೂ ಅವರದೇ ಆದ ರೀತಿಯಲ್ಲಿ ದೇವರು ಮತ್ತು ದೇವಿಯನ್ನು ಪೂಜಿಸುವ ಹಕ್ಕು ಹೊಂದಿರುವುದರಿಂದ ಕಾಳಿಯನ್ನು ಮಾಂಸಾಹಾರಿ ಮತ್ತು ಮದ್ಯಪಾನ ಮಾಡುವ ದೇವೆತೆಯಾಗಿ ಕಲ್ಪಿಸಿಕೊಳ್ಳಲು ತನಗೆ ಸಂಪೂರ್ಣ ಹಕ್ಕಿದೆ ಎಂದು ಮೊಯಿತ್ರಾ ಮಂಗಳವಾರ ನೀಡಿದ್ದ ಹೇಳಿಕೆ ವಿವಾದವಾಗಿ ಮಾರ್ಪಟ್ಟಿದೆ.

ಈ ಕುರಿತು ಟ್ವೀಟರ್ ನಲ್ಲಿ ಪ್ರತ್ರಿಯಿಸಿರುವ ಶಶಿ ತರೂರ್, ದುರುದ್ದೇಶ ಪೂರಿತ ವಿವಾದಕ್ಕೆ ನಾನು ಹೊಸಬಲ್ಲ. ಆದರೆ, ಪ್ರತಿಯೊಬ್ಬ ಹಿಂದೂ ತಿಳಿದಿರುವಂತೆ ನಮ್ಮ ಆರಾಧನಾ ವಿಧಾನಗಳು ದೇಶಾದ್ಯಂತ ವ್ಯಾಪಕವಾಗಿ ಬದಲಾಗುತ್ತವೆ ಎಂದಿರುವ ಮಹುವಾ ಮೊಯಿತ್ರಾ ಅವರ ಮೇಲಿನ ದಾಳಿಯಿಂದ ಆಘಾತಕ್ಕೊಳಗಾಗಿದ್ದೇನೆ. ಮಹುವ ಮೊಯಿತ್ರಾ ಯಾರನ್ನೂ ಅಪರಾಧ ಮಾಡಲು ಪ್ರಯತ್ನಿಸುತ್ತಿಲ್ಲ ಎಂಬುದು ಸ್ಪಷ್ಟವಾಗಿದೆ. ಪ್ರತಿಯೊಬ್ಬರು ಧರ್ಮವನ್ನು ಖಾಸಗಿಯಾಗಿ ಆಚರಿಸಲು ಬಿಡಬೇಕೆಂದು ನಾನು ಒತ್ತಾಯಿಸುತ್ತೇನೆ ಎಂದು ಅವರು ಹೇಳಿದ್ದಾರೆ.

ಮಾಧ್ಯಮ ಕಾರ್ಯಕ್ರಮವೊಂದರಲ್ಲಿ ಸಂಸದೆ ಮಹುವಾ ಮೊಯಿತ್ರಾ ಕಾಳಿ ದೇವಿ ನನಗೆ ಮಾಂಸ ತಿನ್ನುವ ಮತ್ತು ಮದ್ಯ ಸೇವಿಸುವ ದೇವತೆ. ನಿಮ್ಮ ದೇವತೆಯನ್ನು ಕಲ್ಪಿಸಿಕೊಳ್ಳುವ ಸ್ವಾತಂತ್ರ್ಯ ನಿಮಗಿದೆ. ಕೆಲವು ಸ್ಥಳಗಳಲ್ಲಿ ವಿಸ್ಕಿಯನ್ನು ದೇವರಿಗೆ ಅರ್ಪಿಸಲಾಗುತ್ತದೆ ಮತ್ತು ಕೆಲವು ಸ್ಥಳಗಳಲ್ಲಿ ಅದು ಧರ್ಮನಿಂದೆಯಾಗಿರುತ್ತದೆ ಎಂದು ಮೊಯಿತ್ರಾ ಹೇಳಿದ್ದರು.

SCROLL FOR NEXT