ದೇಶ

ಎನ್ಇಇಟಿ ದಂಧೆ ಬಯಲಿಗೆಳೆದ ಸಿಬಿಐ; 7 ಮಂದಿ ಬಂಧನ

Srinivas Rao BV

ನವದೆಹಲಿ: ಕೇಂದ್ರ ತನಿಖಾ ದಳ (ಸಿಬಿಐ) ಎನ್ಇಇಟಿ ಅಕ್ರಮ ದಂಧೆಯನ್ನು ಬಯಲಿಗೆಳೆದಿದ್ದು 7 ಮಂದಿಯನ್ನು ಬಂಧಿಸಿದೆ. 

ಪದವಿಪೂರ್ವ ವೈದ್ಯಕೀಯ ಕೋರ್ಸ್‌ಗಳಲ್ಲಿ ನೈಜ ಅಭ್ಯರ್ಥಿಗಳಿಗೆ ಸಹಾಯ ಮಾಡಲು ಅವರಂತೆಯೇ ಸೋಗು ಹಾಕುತ್ತಿದ್ದ ದಂಧೆ ಇದಾಗಿದೆ. ಎನ್ ಟಿಎಯಿಂದ ನಡೆಸುತ್ತಿದ್ದ ಪರೀಕ್ಷೆಗಳಲ್ಲಿ ನೈಜ ಅಭ್ಯರ್ಥಿಗಳ ಸೋಗಿನಲ್ಲಿ ಪೇಪರ್ ಸಾಲ್ವರ್(solvers) ಗಳನ್ನು ವ್ಯವಸ್ಥೆ ಮಾಡುವುದಕ್ಕೆ ಕ್ರಿಮಿನಲ್ ಪಿತೂರಿ ನಡೆಯುತ್ತಿದ್ದ ಬಗ್ಗೆ ತನಿಖಾ ಸಂಸ್ಥೆಗೆ ಮಾಹಿತಿ ಲಭ್ಯವಾಗಿತ್ತು. ದೆಹಲಿ ಹಾಗೂ ಹರ್ಯಾಣಗಳ ಹಲವು ಕೇಂದ್ರಗಳಲ್ಲಿ ಈ ಅಕ್ರಮ ನಡೆದಿತ್ತು ಎಂದು ಎಫ್ಐಆರ್ ಆರೋಪಿಸಿದೆ. 

2022  ಯುಜಿ ಎನ್ಇಇಟಿ ಪರೀಕ್ಷೆಯಲ್ಲಿ ವಾಸ್ತವದಲ್ಲಿ ಪರೀಕ್ಷೆ ಬರೆಯಬೇಕಿದ್ದ ಅಭ್ಯರ್ಥಿಗಳ ಪರವಾಗಿ ಮತ್ತೆ ಇನ್ಯಾರೋ ಪರೀಕ್ಷೆ ಬರೆಯುತ್ತಿದ್ದರು. ಇದಕ್ಕಾಗಿ ಬೃಹತ್ ಮೊತ್ತದ ಹಣವನ್ನು ಪಡೆಯುತ್ತಿದ್ದರು. 

ಅಭ್ಯರ್ಥಿಗಳ ಯೂಸರ್ ಐಡಿ ಹಾಗೂ ಪಾಸ್ವರ್ಡ್ ಗಳನ್ನು ಆರೋಪಿಗಳಿಂದ ವಶಕ್ಕೆ ಪಡೆಯಲಾಗಿದೆ, ಈ ಆರೋಪಿಗಳು ತಮಗೆ ಬೇಕಾದ ಪರೀಕ್ಷಾ ಕೇಂದ್ರಗಳನ್ನು ಬದಲಾವಣೆ ಮಾಡಿಕೊಳ್ಳುತ್ತಿದ್ದರು. 

ಸುಶೀಲ್ ರಂಜನ್, ಬ್ರಿಜ್ ಮೋಹನ್ ಸಿಂಗ್, ಪಪ್ಪು, ಉಮಾ ಶಂಕರ್ ಗುಪ್ತಾ, ನಿಧಿ, ಕೃಷ್ಣ ಶಂಕರ್, ಯೋಗಿ, ಸನ್ನಿ ರಂಜನ್, ರಘುನಂದನ್, ಜೀಪು ಲಾಲ್, ಹಿಮೇಂದ್ರ ಹಾಗೂ ಭರತ್ ಸಿಂಗ್ ಆರೋಪಿಗಳು.

SCROLL FOR NEXT