ದೇಶ

ರಾಷ್ಟ್ರಪತಿ ಚುನಾವಣೆ 2022: ಚುನಾಯಿತ ಸಂಸದರು, ಶಾಸಕರಿಂದ ಮತದಾನ, ಮುರ್ಮು ಗೆಲುವು ಬಹುತೇಕ ನಿಶ್ಚಿತ

Nagaraja AB

ನವದೆಹಲಿ: ರಾಷ್ಟ್ರಪತಿ ಚುನಾವಣೆ ಆರಂಭವಾಗಿದೆ. ದೇಶದ ಸುಮಾರು 4,800 ಚುನಾಯಿತ ಜನ ಪ್ರತಿನಿಧಿಗಳು 15ನೇ ರಾಷ್ಟ್ರಪತಿ ಆಯ್ಕೆ ಮಾಡಲು ಮತದಾನ ಮಾಡುತ್ತಿದ್ದಾರೆ.

ಸಂಸತ್ ಭವನ ಹಾಗೂ ರಾಜ್ಯಗಳ ವಿಧಾನಸಭೆಯಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೂ ಚುನಾವಣೆ ಪ್ರಗತಿಯಲ್ಲಿದೆ.  ಜುಲೈ 21 ರಂದು ಸಂಸತ್ ಭವನದಲ್ಲಿ ಮತ ಎಣಿಕೆ ನಡೆದು, ಜುಲೈ 25 ರಂದು ಮುಂದಿನ ರಾಷ್ಟ್ರಪತಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. 

ಎನ್ ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಅವರು ಶೇಕಡಾ 60 ರಷ್ಟು ಮತಗಳನ್ನು ಪಡೆದು ವಿರೋಧ ಪಕ್ಷಗಳ ಅಭ್ಯರ್ಥಿ ಯಶವಂತ ಸಿನ್ಹಾ ಅವರನ್ನು ಸೋಲಿಸುವ ಸಾಧ್ಯತೆ ಹೆಚ್ಚಾಗಿದೆ.

 ಬಿಜೆಡಿ, ವೈಎಸ್ ಆರ್ ಸಿಪಿ, ಬಿಎಸ್ ಪಿ, ಎಐಎಡಿಎಂಕೆ, ಟಿಡಿಪಿ, ಜೆಡಿಎಸ್, ಶಿರೋಮಣಿ ಅಕಾಲಿ ದಳ, ಶಿವಸೇನಾ, ಜೆಎಂಎಂನಂತಹ ಪ್ರಾದೇಶಿಕ ಪಕ್ಷಗಳು ಬೆಂಬಲದೊಂದಿಗೆ ಮುರ್ಮು  ಮತ ಹಂಚಿಕೆಯು ಸುಮಾರು ಮೂರನೇ ಎರಡರಷ್ಟು ತಲುಪುವ ಸಾಧ್ಯತೆಯಿದ್ದು, ದೇಶದ ಬುಡಕಟ್ಟು ಸಮುದಾಯದ ಮೊದಲ ಮಹಿಳೆಯೊಬ್ಬರು ಮೊದಲ ದೇಶದ ಉನ್ನತ ಸಾಂವಿಧಾನಿಕ ಹುದ್ದೆಗೇರುವುದು ಬಹುತೇಕ ನಿಶ್ಚಿತವಾಗಿದೆ.
 

SCROLL FOR NEXT