ದೇಶ

ನಿರ್ಗಮಿತ ರಾಷ್ಟ್ರಪತಿ ಕೋವಿಂದ್ ಗೆ ಮೆಹಬೂಬಾ ಮುಫ್ತಿ ಅವಮಾನ! 

Srinivas Rao BV

ನವದೆಹಲಿ: ಸದಾ ಒಂದಿಲ್ಲೊಂದು ವಿವಾದಗಳ ಕಾರಣದಿಂದಲೇ ಸುದ್ದಿಯಾಗುವ ಜಮ್ಮು-ಕಾಶ್ಮೀರದ ಮಾಜಿ ಸಿಎಂ ಮೆಹಬೂಬಾ ಮುಫ್ತಿ ಈಗ ನಿರ್ಗಮಿತ ರಾಷ್ಟ್ರಪತಿ ಕೋವಿಂದ್ ವಿಷಯವಾಗಿಯೂ ವಿವಾದಕ್ಕೊಳಗಾಗಿದ್ದಾರೆ. 

ಅಧಿಕಾರಾವಧಿ ಮುಕ್ತಾಯಗೊಳಿಸಿ ಹುದ್ದೆಯಿಂದ ನಿರ್ಗಮಿಸಿರುವ ನಿಕಟಪೂರ್ವ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಇಡೀ ದೇಶದ ಜನತೆ ಗೌರವ ಬೀಳ್ಕೊಡುಗೆ ನೀಡುತ್ತಿದ್ದರೆ, ಟ್ವಿಟರ್ ನಲ್ಲಿ ಮೆಹಬೂಬಾ ಮುಫ್ತಿ ತಮ್ಮ ನಾಲಿಗೆ ಹರಿಬಿಟ್ಟಿದ್ದಾರೆ. 

"ನಿರ್ಗಮಿತ ರಾಷ್ಟ್ರಪತಿಗಳು, ದೇಶದ ಸಂವಿಧಾನಕ್ಕೆ ಅನೇಕ ಬಾರಿ ವಿರುದ್ಧವಾಗಿ ನಡೆದುಕೊಳ್ಳುವ ಪರಂಪರೆಯನ್ನು ಬಿಟ್ಟು ಹೋಗಿದ್ದಾರೆ" ಎಂದು ಮುಫ್ತಿ ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ. ತಮ್ಮ ವಾದವನ್ನು ಸಮರ್ಥಿಸಿಕೊಳ್ಳುವುದಕ್ಕಾಗಿ ಮುಫ್ತಿ ಆರ್ಟಲ್ 370, ಸಿಎಎ ಹಾಗೂ ಅಲ್ಪಸಂಖ್ಯಾತರು ಮತ್ತು ದಲಿತರನ್ನು ನಿರ್ಲಜ್ಜವಾಗಿ ಗುರಿಯಾಗಿಸಲಾಗಿದೆ ಎಂಬ ಕಾರಣಗಳನ್ನು ಮುಂದಿಟ್ಟಿದ್ದಾರೆ.
 
ರಾಮನಾಥ್ ಕೋವಿಂದ್ ಅವರು ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಂಡು ಬಿಜೆಪಿಯ ರಾಜಕೀಯ ಉದ್ದೇಶಗಳನ್ನು ಈಡೇರಿಸಲು ಬಿಜೆಪಿಯ ಕೈಗೊಂಬೆಯಾಗಿ ನಡೆದುಕೊಂಡರು ಎಂದು ಮೆಹಬೂಬಾ ಗಂಭೀರ ಆರೋಪ ಮಾಡಿದ್ದಾರೆ.ಮೆಹಬೂಬಾ ಮುಫ್ತಿ ಟ್ವೀಟ್ ಗೆ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. 

SCROLL FOR NEXT