ದೇಶ

ರಾಹುಲ್ ಗಾಂಧಿ ಧ್ವನಿ ಹತ್ತಿಕ್ಕಲು ಇಡಿ ವಿಚಾರಣೆ, ಸಂದರ್ಭ ಅರ್ಥಮಾಡಿಕೊಳ್ಳಿ: ಮೋದಿ ಸರ್ಕಾರ ವಿರುದ್ಧ ಕಾಂಗ್ರೆಸ್ ಆರೋಪಗಳ ಸುರಿಮಳೆ!

Sumana Upadhyaya

ನವದೆಹಲಿ: ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರನ್ನು ಜಾರಿ ನಿರ್ದೇಶನಾಲಯವು ನ್ಯಾಷನಲ್ ಹೆರಾಲ್ಡ್ ಕೇಸಿನಲ್ಲಿ ವಿಚಾರಣೆ ನಡೆಸುತ್ತಿರುವ ಎರಡನೇ ದಿನಕ್ಕೆ ಮೊದಲು, ಕಾಂಗ್ರೆಸ್ ಮತ್ತೆ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

ತನಿಖಾ ಸಂಸ್ಥೆಗಳನ್ನು ಚುನಾವಣಾ ನಿರ್ವಹಣಾ ಇಲಾಖೆಯಾಗಿ ಬಳಸುತ್ತಿದೆ ಎಂದು ಕಾಂಗ್ರೆಸ್ ಬಿಜೆಪಿಯನ್ನು ಆರೋಪಿಸಿದೆ, ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳ ಮೂಲಕ ರಾಜಕೀಯ ವಿರೋಧಿಗಳನ್ನು ಬೆದರಿಸುವ 5,000ಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿದೆ ಎಂದು ಹೇಳಿದೆ.  

ಇಂದು ದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೆವಾಲಾ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಕಾಲಾನುಕ್ರಮವನ್ನು ಅರ್ಥಮಾಡಿಕೊಳ್ಳಿ ಎಂದು ಹೇಳಿದ್ದಾರೆ. 

ಕಳೆದ ಎಂಟು ವರ್ಷಗಳಲ್ಲಿ, ಚುನಾವಣಾ ನಿರ್ವಹಣಾ ವಿಭಾಗವನ್ನು (ಇಡಿ) ಸರ್ಕಾರವು ಬಳಸಿಕೊಂಡಿದೆ. “ಬೆರಳೆಣಿಕೆಯಷ್ಟು ಕೈಗಾರಿಕೋದ್ಯಮಿಗಳು ಮತ್ತು ಮೋದಿ ಸರ್ಕಾರದ ನಡುವಿನ ನಂಟನ್ನು ರಾಹುಲ್ ಗಾಂಧಿ ಬಹಿರಂಗಪಡಿಸಿದರು. ಹಾಗಾಗಿ ರಾಹುಲ್ ಗಾಂಧಿಗೆ ತೊಂದರೆಯಾಗಿದೆ. ಚುನಾವಣಾ ನಿರ್ವಹಣಾ ವಿಭಾಗದ (ಇಡಿ) ಹಿಂದೆ ಅಡಗಿ ಕೂರುವ ಮೂಲಕ ಮೋದಿ ಸರಕಾರವು ಸಮಗ್ರತೆಯ ಧ್ವನಿಯ ಮೇಲೆ ಉಗ್ರ ದಾಳಿ ನಡೆಸಿದೆ ಎಂದು ಆರೋಪಿಸಿದ್ದಾರೆ.

ರಾಹುಲ್ ಗಾಂಧಿ ಅವರು ಜನರ ಧ್ವನಿಯನ್ನು ಎತ್ತುವ ಕಾರಣದಿಂದ ಬಿಜೆಪಿ ಅವರ ಮೇಲೆ ದಾಳಿ ಮಾಡಿದೆ ಎಂದು ಸುರ್ಜೇವಾಲಾ ಆರೋಪಿಸಿದ್ದಾರೆ.

ಚೀನಾದ ಅತಿಕ್ರಮಣ, ಏರುತ್ತಿರುವ ಹಣದುಬ್ಬರ, ಕೋವಿಡ್ ಸಾಂಕ್ರಾಮಿಕ ರೋಗ ನಿರ್ವಹಣೆ, ಲಾಕ್‌ಡೌನ್‌ಗಳ ಸಮಯದಲ್ಲಿ ವಲಸೆ ಕಾರ್ಮಿಕರ ಅವಸ್ಥೆ, ರೈತರ ಪ್ರತಿಭಟನೆಗಳು ಮತ್ತು ಬಿಜೆಪಿಯಿಂದ ಕೋಮುಗಲಭೆ ಇತ್ಯಾದಿಗಳ ಬಗ್ಗೆ ರಾಹುಲ್ ಗಾಂಧಿ ಕೇಂದ್ರಕ್ಕೆ ಕಠಿಣ ಪ್ರಶ್ನೆಗಳನ್ನು ಕೇಳಿದ್ದರು. ಸರ್ಕಾರವು ರಾಹುಲ್ ಗಾಂಧಿಯವರ ಬಗ್ಗೆ ಭಯ ಹೊಂದಿದೆ. ಅದಕ್ಕಾಗಿಯೇ ಅವರನ್ನು 'ಗುರಿ' ಮಾಡುತ್ತಿದೆ. ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಆರೋಪವನ್ನು ನಿನ್ನೆ ಕಾಂಗ್ರೆಸ್ ತಳ್ಳಿಹಾಕಿದ್ದು, ಇದನ್ನು 'ಮಾಟಗಾತಿ ಬೇಟೆ' ಎಂದು ಕರೆದಿದೆ.

ಬಿಜೆಪಿಯು ಸುಳ್ಳುಗಳನ್ನು ಹರಡಲು ಮತ್ತು ಪ್ರತಿಪಕ್ಷಗಳ ಮೇಲೆ ದಾಳಿ ಮಾಡಲು ಮಾಧ್ಯಮ ಮತ್ತು 'ವಾಟ್ಸಾಪ್ ವಿಶ್ವವಿದ್ಯಾನಿಲಯ'ವನ್ನು ಬಳಸುತ್ತಿದೆ ಎಂದು ಕೂಡ ಸುರ್ಜೆವಾಲಾ ಆರೋಪಿಸಿದರು. 

ಮೂರು ವಿವಾದಾತ್ಮಕ ಕೃಷಿ ಕಾನೂನುಗಳನ್ನು ರದ್ದುಗೊಳಿಸಲು ರಾಹುಲ್ ಗಾಂಧಿಯವರ ನಿರಂತರ ಒತ್ತಡಕ್ಕೆ ಕೇಂದ್ರ ಸರ್ಕಾರ ಮಣಿಯಬೇಕಾಯಿತು. ಕೋವಿಡ್ ಲಸಿಕೆಯನ್ನು ಕಾಂಗ್ರೆಸ್ ಒತ್ತಾಯಕ್ಕೆ ಒಳಗಾಗಿ ಬಿಡುಗಡೆ ಮಾಡಿತು.. ಕಟ್ಟುನಿಟ್ಟಾದ ಲಾಕ್‌ಡೌನ್‌ಗಳಿಂದ ಉಂಟಾದ ಬಿಕ್ಕಟ್ಟಿನ ಸಂದರ್ಭದಲ್ಲಿ ರಾಹುಲ್ ಗಾಂಧಿಯವರು ವಲಸೆ ಕಾರ್ಮಿಕರ ಪರವಾಗಿ ನಿಂತರು, ಬಿಜೆಪಿ ಅವರನ್ನು "ಭಯೋತ್ಪಾದಕರು" ಎಂದು ಕರೆಯುವಾಗ ಸಾರ್ವಜನಿಕವಾಗಿ ಬೆಂಬಲ ನೀಡಿದರು. ರೈತರ ಪ್ರತಿಭಟನೆಯಲ್ಲಿ ನಿಂತರು ರಾಹುಲ್ ಗಾಂಧಿಯವರು ಕೋಮು ಅಶಾಂತಿಯನ್ನು ಸೃಷ್ಟಿಸುವ ವಿರುದ್ಧ ಮಾತನಾಡುತ್ತಾರೆ. ಇವೆಲ್ಲ ಬಿಜೆಪಿಗೆ ಸಮಸ್ಯೆಯಾಗಿ ಇಂದು ಇಡಿ ವಿಚಾರಣೆಯ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದರು.

ಪ್ರಧಾನಿ ನರೇಂದ್ರ ಮೋದಿಯವರ ವಿರುದ್ಧ ನೇರ ವಾಗ್ದಾಳಿ ನಡೆಸಿದ ಸುರ್ಜೆವಾಲಾ, ಮೋದಿಯವರು ಕೈಗಾರಿಕೋದ್ಯಮಿಗಳ ಏಜೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರಿಗೆ ವಿದೇಶದಲ್ಲಿ ಒಪ್ಪಂದಗಳನ್ನು ಮಾಡುತ್ತಿದ್ದಾರೆ. ಶ್ರೀಲಂಕಾದಲ್ಲಿ ಒಪ್ಪಂದಗಳಿಗೆ ಅದಾನಿ ಸಮೂಹಕ್ಕೆ ಆದ್ಯತೆ ನೀಡುವಂತೆ ಪ್ರಧಾನಮಂತ್ರಿ ಅವರು ರಫೇಲ್ ಜೆಟ್‌ಗಳ ವಿವಾದ ಮತ್ತು ಇತ್ತೀಚಿನ ವರದಿಗಳನ್ನು ಪ್ರಸ್ತಾಪಿಸಿದರು.

SCROLL FOR NEXT