ದೇಶ

ಮಹಾರಾಷ್ಟ್ರ ವಿಧಾನಪರಿಷತ್ ಚುನಾವಣೆ: ಐದು ಸ್ಥಾನ ಗೆದ್ದ ಬಿಜೆಪಿ

Nagaraja AB

ಮುಂಬೈ: ಮಹಾರಾಷ್ಟ್ರ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಐದು ಸ್ಥಾನಗಳನ್ನು ಗೆದ್ದುಕೊಂಡಿದ್ದು, ಶಿವಸೇನೆ ಮತ್ತು ಎನ್ ಸಿಪಿ ತಲಾ ಎರಡು ಸ್ಥಾನಗಳನ್ನು ಪಡೆದುಕೊಂಡಿವೆ.

ಬಿಜೆಪಿಯ ರಾಮ್ ಶಿಂಧೆ, ಉಮಾ ಖಪ್ರೆ, ಶ್ರೀಕಾಂತ್  ಭಾರ್ತಿಯಾ ಮತ್ತು ಪ್ರವೀಣ್ ದಾರೆಕರ್, ಎನ್ ಸಿಪಿ ನಾಯಕರಾದ ಏಕನಾಥ್ ಖಾಡ್ಸೆ, ರಾಮರಾಜೇ ನಾಯ್ಕ್ ನಿಂಬಾಳ್ಕರ್ , ಶಿವಸೇನಾ ಅಭ್ಯರ್ಥಿಗಳಾದ ಅಮ್ಯ್ಯ ಪದ್ವಿ , ಸಚಿನ್ ಅಹಿರ್ ಮತ್ತು ಮುಂಬೈ  ಕಾಂಗ್ರೆಸ್ ಮುಖ್ಯಸ್ಥ ಜಗತಾಪ್ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ.

10 ಪರಿಷತ್ ಸ್ಥಾನಗಳಿಗೆ ಮಹಾ ಆಘಾದಿ ಮೈತ್ರಿಕೂಟ 6 ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೆ ಬಿಜೆಪಿ ಐದು ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು, ಸಂಖ್ಯಾ ಬಲದ ಕೊರತೆ ನಡುವೆಯೂ ಬಿಜೆಪಿ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದೆ.

ಗೆಲುವಿನ ಬಗ್ಗೆ ಪ್ರತಿಕ್ರಿಯಿಸಿರುವ ಮಹಾರಾಷ್ಟ್ರ ವಿಪಕ್ಷ ನಾಯಕ ದೇವೇಂದ್ರ ಫಡ್ನವೀಸ್, ನಮ್ಮ ಐದು ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ರಾಜ್ಯಸಭೆಯಲ್ಲಿ ಬಿಜೆಪಿ 123 ಮತಗಳನ್ನು ಪಡೆದಿತ್ತು. ಪರಿಷತ್ ಚುನಾವಣೆಯಲ್ಲಿ ನಾವು 134 ಮತಗಳನ್ನು ಪಡೆದಿದ್ದೇವೆ. 5ನೇ ಅಭ್ಯರ್ಥಿಗೆ ಮತಗಳ ಕೊರತೆ ಇತ್ತು. ಆದರೆ, ಅವರು ಕಾಂಗ್ರೆಸ್ ಅಭ್ಯರ್ಥಿಗಿಂತ ಹೆಚ್ಚು ಮತಗಳನ್ನು ಪಡೆದಿದ್ದಾರೆ ಎಂದು ತಿಳಿಸಿದರು.

SCROLL FOR NEXT