ದೇಶ

'ಮಹಾ' ಬಂಡಾಯ: ರಾಜಿನಾಮೆ ವದಂತಿ ಬೆನ್ನಲ್ಲೇ ಅಧಿಕೃತ ನಿವಾಸ ತೊರೆದ ಸಿಎಂ ಉದ್ಧವ್ ಠಾಕ್ರೆ!

Srinivasamurthy VN

ಮುಂಬೈ: ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು ಮುಂದುವರೆದಿರುವಂತೆಯೇ ಇತ್ತ ಸಿಎಂ ಉದ್ಧವ್ ಠಾಕ್ರೆ ಅವರು, ಮುಂಬೈನ ತಮ್ಮ ಅಧಿಕೃತ ನಿವಾಸವನ್ನು ತೊರೆದು ಸ್ವಂತ ನಿವಾಸಕ್ಕೆ ಕುಟುಂಬ ಸಮೇತ ಮರಳಿದ್ದಾರೆ.

ಹೌದು.. ಏಕನಾಥ್ ಶಿಂಧೆ ಬಂಡಾಯದ ಬೆನ್ನಲ್ಲೇ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರು ಸಿಎಂ ಗೃಹ ಕಚೇರಿ 'ವರ್ಷಾ'ದಿಂದ ಸ್ವಂತ ನಿವಾಸ 'ಮಾತೋಶ್ರೀ' ಮರಳಲಿದ್ದಾರೆ. ಈ ಬೆಳವಣಿಗೆ ಬೆನ್ನಲ್ಲೇ ಉದ್ಧವ್ ಠಾಕ್ರೆ ರಾಜಿನಾಮೆ ವಿಚಾರ ವ್ಯಾಪಕವಾಗುತ್ತಿದ್ದಂತೆಯೇ ಈ ಕುರಿತು ಸಂಜಯ್ ರಾವತ್ ಸ್ಪಷ್ಟನೆ ನೀಡಿದ್ದು, ಉದ್ಧವ್ ಠಾಕ್ರೆ ಅವರು ಅಧಿಕೃತ ನಿವಾಸವನ್ನು ತೊರೆದಿದ್ದಾರೆಯೇ ಹೊರತು ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿಲ್ಲ. ಮುಖ್ಯಮಂತ್ರಿಯಾಗಿ ಠಾಕ್ರೆ ಮುಂದುವರಿಯಲಿದ್ದಾರೆ ಎಂದು ಹೇಳಿದರು.

ಶಿವಸೇನಾ ನೇತೃತ್ವದ ಮಹಾ ವಿಕಾಸ ಅಘಾಡಿ ಸರ್ಕಾರಕ್ಕಿರುವ ಬಹುಮತವನ್ನು ಸಿಎಂ ಉದ್ಧವ್‌ ಠಾಕ್ರೆ ಸಾಬೀತುಪಡಿಸಲಿದ್ದಾರೆ. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದು ಸಂಜತ್‌ ರಾವತ್‌ ಸ್ಪಷ್ಟನೆ ನೀಡಿದರು.

ಎಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಅವರು ಠಾಕ್ರೆ ಅವರ ಬಳಿ ಸರ್ಕಾರವನ್ನು ಉಳಿಸಲು ಬಂಡಾಯ ಶಾಸಕರ ನೇತೃತ್ವ ವಹಿಸಿರುವ ಏಕನಾಥ್‌ ಶಿಂಧೆ ಅವರನ್ನು ಮುಖ್ಯಮಂತ್ರಿ ಮಾಡುವ ಪ್ರಸ್ತಾಪವನ್ನು ಮುಂದಿಟ್ಟಿದ್ದಾರೆ ಎಂಬ ವದಂತಿಯನ್ನು ಸಂಜಯ್‌ ರಾವತ್‌ ಅಲ್ಲಗಳೆದಿದ್ದು, ಪವಾರ್ ಅವರು ಠಾಕ್ರೆ ಅವರಿಗೆ ಯಾವುದೇ ಸಲಹೆಯನ್ನು ನೀಡಲಿಲ್ಲ ಮತ್ತು ಬದಲಿಗೆ ಎಂವಿಎ ರಾಜಕೀಯ ಬಿಕ್ಕಟ್ಟಿನ ವಿರುದ್ಧ ಕೊನೆಯವರೆಗೂ ಒಟ್ಟಾಗಿ ಹೋರಾಡಲಿದೆ ಎಂದು ಹೇಳಿದ್ದಾರೆ. 
 

SCROLL FOR NEXT