ದೇಶ

ಶಾಸಕರು ವಿಮಾನ ಹತ್ತುವವರೆಗೂ ಗುಪ್ತಚರ ಇಲಾಖೆ ಏನು ಮಾಡುತ್ತಿತ್ತು?: ಶರದ್ ಪವಾರ್ ಪ್ರಶ್ನೆ

Srinivasamurthy VN

ಮುಂಬೈ: ಶಿವಸೇನೆ ಬಂಡಾಯ ಶಾಸಕರು ವಿಮಾನ ಹತ್ತುವವರೆಗೂ ರಾಜ್ಯ ಗುಪ್ತಚರ ಇಲಾಖೆ ಏನು ಮಾಡುತ್ತಿತ್ತು ಎಂದು ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಶಿವಸೇನೆ ಮುಖಂಡ ಏಕನಾಥ್ ಶಿಂಧೆ ನೇತೃತ್ವದ ಬಂಡಾಯಶಾಸಕರ ಗುಂಪು ಹಠಾತ್ ವಿಮಾನ ಹಾರಾಟ ನಡೆಸಿದ್ದು ಮಹಾರಾಷ್ಟ್ರ ಸರ್ಕಾರವನ್ನು ಪತನದ ಅಂಚಿಗೆ ತಂದಿದೆ. ಬಿಜೆಪಿ ಆಡಳಿತವಿರುವ ಗುಜರಾತ್‌ನ ಸೂರತ್‌ಗೆ ಸೋಮವಾರ ತಡರಾತ್ರಿ ಶಾಸಕರು ವಿಮಾನದಲ್ಲಿ ತೆರಳಿದ್ದಾರೆ. 22 ಶಾಸಕರ ಗುಂಪಿನ ಚಲನವಲನವು ಮುಂಬೈ ಪೊಲೀಸರ ಗಮನಕ್ಕೆ ಬಂದಿಲ್ಲವೇ ಎಂಬ ಪ್ರಶ್ನೆಗಳು ಎದ್ದಿವೆ, ಇದು ಮಹಾರಾಷ್ಟ್ರ ಸರ್ಕಾರಕ್ಕೆ, ನಿರ್ದಿಷ್ಟವಾಗಿ ಗೃಹ ಸಚಿವ ಹಾಗೂ ಎನ್‌ಸಿಪಿಯ ದಿಲೀಪ್ ವಾಲ್ಸೆ-ಪಾಟೀಲ್ ಅವರಿಗೆ ವರದಿ ಮಾಡಿದೆ ಎನ್ನಲಾಗಿದೆ.

ಶಾಸಕರ ಚಲನವಲನದ ಬಗ್ಗೆ ಸಚಿವರಿಗೆ ತಿಳಿದಿಲ್ಲವೇ, ಅವರ ಭದ್ರತಾ ವಿವರಗಳನ್ನು ಪೊಲೀಸರು ಒದಗಿಸಿದ್ದಾರೆಯೇ? ಎಂದು ಶರದ್ ಪವಾರ್ ಪ್ರಶ್ನಿಸಿದ್ದಾರೆ.

ಎರಡು ವರ್ಷಗಳ ಹಿಂದಿನ ಸಮ್ಮಿಶ್ರ ಸರ್ಕಾರದ ಐದನೇ ಹಂತದ ಬಿಕ್ಕಟ್ಟನ್ನು ಶಿವಸೇನೆಯ ಬಂಡಾಯ ಶಾಸಕರು ಆರಂಭಿಸುತ್ತಿದ್ದಂತೆಯೇ ಎನ್‌ಸಿಪಿ ನಾಯಕ ಶರದ್ ಪವಾರ್ ಅವರು ಪಕ್ಷದ ಇತರ ನಾಯಕರಲ್ಲದೆ ದಿಲೀಪ್ ವಾಲ್ಸೆ-ಪಾಟೀಲ್ ಮತ್ತು ಜಯಂತ್ ಪಾಟೀಲ್ ಅವರೊಂದಿಗೆ ಇಂದು ಬೆಳಿಗ್ಗೆ ಸಭೆ ನಡೆಸಿದರು. ಈ ಸಭೆಯಲ್ಲಿ ಪವಾರ್ ಅವರು ಸಚಿವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದು, ರಾತ್ರಿಯ ಸಮಯದಲ್ಲಿ ಶಾಸಕರೊಂದಿಗೆ ವಿಮಾನದಲ್ಲಿ ಹೋಗುತ್ತಿರುವ ಕುರಿತು ಯಾವುದೇ ಗುಪ್ತಚರ ಮಾಹಿತಿ ಏಕೆ ಇರಲಿಲ್ಲ ಎಂದು ಪ್ರಶ್ನಿಸಿದರು.

ಅಂತೆಯೇ ಶಿಂಧೆಯವರ ಬಂಡಾಯ ಶಿವಸೇನೆಯ ಆಂತರಿಕ ಬಿಕ್ಕಟ್ಟಾಗಿದ್ದು, ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅದನ್ನು ಪರಿಹರಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.
 

SCROLL FOR NEXT