ಆರೋಪಿ ಮತ್ತು ಮೃತ ಶ್ರದ್ಧಾ 
ದೇಶ

ಶ್ರದ್ಧಾ ದೇಹದ ಭಾಗಗಳು ಫ್ರಿಡ್ಜ್ ನಲ್ಲಿರುವಾಗಲೇ ಹೊಸ ಗೆಳತಿಯನ್ನು ಮನೆಗೆ ಕರೆತಂದಿದ್ದ ಪಾತಕ ಪ್ರೇಮಿ!

ಕೊಲೆಗಾರ ಅಫ್ತಾಬ್‌ ಅಮಿನ್‌ ಪೂನವಾಲಾ ಪ್ರೇಯಸಿ ಶ್ರದ್ಧಾಳನ್ನು ಕೊಲೆಗೈದು, ದೇಹದ ತುಂಡುಗಳನ್ನು ಕತ್ತರಿಸಿ ಮನೆಯ ಫ್ರಿಡ್ಜ್‌ನಲ್ಲಿ ಇಟ್ಟಿರುವಾಗಲೇ ಮತ್ತೊಬ್ಬ ಮಹಿಳೆಯನ್ನು ಮನೆಗೆ ಕರೆತಂದಿದ್ದ ಎಂಬ ಸತ್ಯ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.

ನವದೆಹಲಿ: ಕೊಲೆಗಾರ ಅಫ್ತಾಬ್‌ ಅಮಿನ್‌ ಪೂನವಾಲಾ ಪ್ರೇಯಸಿ ಶ್ರದ್ಧಾಳನ್ನು ಕೊಲೆಗೈದು, ದೇಹದ ತುಂಡುಗಳನ್ನು ಕತ್ತರಿಸಿ ಮನೆಯ ಫ್ರಿಡ್ಜ್‌ನಲ್ಲಿ ಇಟ್ಟಿರುವಾಗಲೇ ಮತ್ತೊಬ್ಬ ಮಹಿಳೆಯನ್ನು ಮನೆಗೆ ಕರೆತಂದಿದ್ದ ಎಂಬ ಸತ್ಯ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ ಎಂದು ವರದಿಯಾಗಿದೆ.

ಶ್ರದ್ಧಾ ಕೊಲೆಯ ಬಳಿಯ ಅಫ್ತಾಬ್‌ ಬಂಬ್ಲ್‌ ಎಂಬ ಡೇಟಿಂಗ್‌ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡು ಮತ್ತೊಂದು ಮಹಿಳೆಯ ಸಂಪರ್ಕ ಸಾಧಿಸಿದ್ದ. ಶ್ರದ್ಧಾ ದೇಹದ ಕತ್ತರಿಸಿ ತುಂಡಾಗಿಸಿ, ಅದನ್ನು ದಕ್ಷಿಣ ದೆಹಲಿಯ ಮೆಹ್ರೌಲಿಯ ಅಪಾರ್ಟ್‌ಮೆಂಟ್‌ನ ಫ್ರಿಡ್ಜ್‌ನಲ್ಲಿ ಇಟ್ಟಿರುವಾಗಲೇ ಹೊಸ ಗೆಳತಿಯನ್ನು ಮನೆಗೆ ಕರೆತಂದಿದ್ದ. ಶ್ರದ್ಧಾಳನ್ನು ಕೂಡ ಈತ 2019ರಲ್ಲಿ ಇದೇ ಆ್ಯಪ್‌ನಲ್ಲಿ ಭೇಟಿಯಾಗಿದ್ದ ಎಂದು ವರದಿ ಹೇಳಿದೆ.

ಹೊಸ ಗೆಳತಿ ಜೂನ್‌ ಮತ್ತು ಜುಲೈನಲ್ಲಿ ಕೆಲವು ಸಲ ಅಫ್ತಾಬ್‌ ಅಪಾರ್ಟ್‌ಮೆಂಟ್‌ಗೆ ಭೇಟಿ ನೀಡಿದ್ದಾಳೆ. ಅಡುಗೆ ಕೋಣೆಯ ಫ್ರಿಡ್ಜ್‌ನಲ್ಲಿ ಶ್ರದ್ಧಾ ದೇಹದ ಭಾಗಗಳಿರುವಾಗಲೇ ಈತ ಹೊಸ ಗೆಳತಿಗೆ ಮನೆಯಲ್ಲೇ ಆತಿಥ್ಯ ನೀಡಿದ್ದಾನೆ.

ಶ್ರದ್ಧಾ ಕೊಲೆಯ ನಂತರ ಆಕೆಯ ಕ್ರೆಡಿಟ್‌ ಕಾರ್ಡ್‌ಗಳ ಬಿಲ್‌ಗಳನ್ನು ಈತ ಪಾವತಿಸಿದ್ದ. ಆಕೆಯ ಸಾಮಾಜಿಕ ಜಾಲತಾಣದ ಪುಟಗಳಿಗೆ ಲಾಗಿನ್‌ ಆಗಿ ಮೆಸೇಜ್‌ಗಳಿಗೆ ಉತ್ತರಿಸಿದ್ದ. ಪೋಸ್ಟ್‌ಗಳನ್ನು ಮಾಡಿದ್ದ. ಆಕೆ ಬದುಕಿದ್ದಾಳೆ ಎಂದು ಬಿಂಬಿಸಲು ಆಕೆಯ ಸ್ನೇಹಿತರಿಗೆ ಆಕೆಯ ಖಾತೆಯಿಂದ ಸಂದೇಶಗಳನ್ನು ಕೂಡ ಕಳುಹಿಸಿದ್ದ ಎಂದು ವಿಚಾರಣೆಯಿಂದ ತಿಳಿದುಬಂದಿದೆ.

ಮುಂಬೈನಲ್ಲಿ ಇರುವಾಗಲೇ ಇಬ್ಬರ ನಡುವೆ ಸಾಕಷ್ಟು ಜಗಳ ನಡೆಯುತ್ತಿತ್ತು. ಸಂಬಂಧದ ಕುರಿತು ಅನುಮಾನಗೊಂಡಿದ್ದ ಇಬ್ಬರೂ ಫೋನ್‌ ಜಿಪಿಎಸ್‌ ಮತ್ತು ಫೋಟೊಗಳನ್ನು ಟ್ರೇಸ್‌ ಮಾಡುತ್ತಿದ್ದರು. ಸಂಬಂಧ ಸುಧಾರಣೆಗಾಗಿ ಏಪ್ರಿಲ್‌ನಲ್ಲಿ ಹಿಮಾಚಲ ಪ್ರದೇಶ ಪ್ರವಾಸ ಯೋಜಿಸಿದ್ದರು. ಅದಾದ ಬಳಿಕ ದೆಹಲಿಗೆ ಸ್ಥಳಾಂತರಗೊಂಡಿದ್ದರು.

ಮೇ.15ರಂದು ದೆಹಲಿಗೆ ಸ್ಥಳಾಂತರಗೊಂಡ 3 ದಿನಗಳ ನಂತರ ಮತ್ತೆ ಜಗಳವಾಗಿದ್ದು, ಶ್ರದ್ಧಾಳನ್ನು ಕೊಲೆಗೈದಿದ್ದಾನೆ. ಅಫ್ತಾಬ್‌ ಅಮೆರಿಕದ ಕ್ರೈಂ ಸರಣಿ ‘ಡೆಕ್ಸ್‌ಟರ್‌’ನಿಂದ ಸ್ಫೂರ್ತಿ ಪಡೆದಿದ್ದ. ಕೊಲೆಗಾಗಿ ಸಾಕಷ್ಟು ಸಂಶೋಧನೆ ಮಾಡಿದ್ದ. ಮನುಷ್ಯನ ದೇಹ ರಚನಾ ಶಾಸ್ತ್ರ ಅಧ್ಯಯನ ಮಾಡಿದ್ದ.

ರಕ್ತದ ಕಲೆ ಕಾಣಿಸದಂತೆ ಮಾಡುವ ಮಾರ್ಗಗಳ ಕುರಿತು ಗೂಗಲ್ ನಲ್ಲಿ ಹುಡುಕಾಟ ನಡೆಸಿದ್ದ ಎಂದು ವರದಿಯಾಗಿದೆ. ಆತ ಬಳಸಿದ್ದ ಚಾಕುವಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಇಂದಿರಾ ಗಾಂಧಿ ಕೂಡ ಹೀಗೆ ಮಾಡಿರಲಿಲ್ಲ': ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯುವ ಮುನ್ನ ಅಭಿಜಿತ್ ದೀಪ್ಕೆ; ವಿಡಿಯೋ ಹಂಚಿಕೊಂಡ CJP

ಅಭಿಜೀತ್ ದೀಪ್ಕೆ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ; ಅಜ್ಜಿ ಸಾವಿನ ಸುದ್ದಿ ತಿಳಿಸುವುದು ಹೇಗೆ? ಪೊಲೀಸ್ ಕ್ರಮಕ್ಕೆ ಪೋಷಕರ ಆಕ್ರೋಶ

ದೇಶವಿರೋಧಿ ಶಕ್ತಿಗಳಿಂದ ಅಶಾಂತಿ ಸೃಷ್ಟಿಗೆ ಯತ್ನ; CJP ಪ್ರತಿಭಟನೆಯಿಂದ ದೂರವಿರಿ: ಮುಸ್ಲಿಮರಿಗೆ ಇಮಾಮ್‌ ಮುಖ್ಯಸ್ಥ ಕರೆ

CJP protest: ಮಮತಾ ಬ್ಯಾನರ್ಜಿ, ನೇಹಾ ಬೋರಾ, ಯೋಗೇಂದ್ರ ಯಾದವ್ ವಶಕ್ಕೆ ಪಡೆದ ಪೊಲೀಸರು

CEC ಜ್ಞಾನೇಶ್ ಕುಮಾರ್ ವಿರುದ್ಧ ಸಿಜೆಪಿ ಪ್ರತಿಭಟನೆ ವೇಳೆ 2 ಪೊಲೀಸರಿಗೆ ಕಲ್ಲೇಟು!