ಪಾತಕಿ ಆಫ್ತಾಬ್ 
ದೇಶ

ಗುರುತು ಸಿಗದಂತೆ ಶ್ರದ್ಧಾಳ ತಲೆ ಸುಟ್ಟು ಹಾಕಿದ ಪಾತಕಿ ಆಫ್ತಾಬ್!

ಶ್ರದ್ದಾಳ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯನ್ನು ಚುರುಕುಗೊಳಿಸಿರುವ ಪೊಲೀಸರಿಗೆ ಮಹತ್ವದ ಮಾಹಿತಿಗಳು ಹೊರಬೀಳುತ್ತಿವೆ. ಆರೋಪಿ ಆಫ್ತಾಬ್ ಪೂನಾವಾಲ ತನ್ನ ಪ್ರಿಯತಮೆಯ ಗುರುತು ಸಿಗದಂತೆ  ಆಕೆಯ ತಲೆಗೆ ಬೆಂಕಿ ಹಚ್ಚಿ ಸುಟ್ಟುಹಾಕಿದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ನವದೆಹಲಿ:ಶ್ರದ್ದಾಳ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯನ್ನು ಚುರುಕುಗೊಳಿಸಿರುವ ಪೊಲೀಸರಿಗೆ ಮಹತ್ವದ ಮಾಹಿತಿಗಳು ಹೊರಬೀಳುತ್ತಿವೆ. ಆರೋಪಿ ಆಫ್ತಾಬ್ ಪೂನಾವಾಲ ತನ್ನ ಪ್ರಿಯತಮೆಯ ಗುರುತು ಸಿಗದಂತೆ  ಆಕೆಯ ತಲೆಗೆ ಬೆಂಕಿ ಹಚ್ಚಿ ಸುಟ್ಟುಹಾಕಿದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಶ್ರದ್ಧಾಳ ದೇಹವನ್ನು ಮೊದಲಿಗೆ 35 ತುಂಡುಗಳಾಗಿ ಕತ್ತರಿಸಿದ್ದಾನೆ. ಬಳಿಕ ಒಂದು ವೇಳೆ ದೇಹದ ಗುರುತು ಪತ್ತೆಯಾದರೂ, ಆಕೆಯ ಮುಖದ ಗುರುತು ಸಿಗದಂತೆ ಮಾಡಲು ತಲೆಯನ್ನು ಸುಟ್ಟು ಹಾಕಿರುವುದಾಗಿ ತಿಳಿದುಬಂದಿದೆ. ಈ ಎಲ್ಲಾ ಹೀನ ಕೃತ್ಯಗಳ ಬಗ್ಗೆ ಇಂಟರ್ ನೆಟ್ ನಲ್ಲಿ ತಿಳಿದಿದ್ದಾಗಿ ಆಫ್ತಾಬ್ ಪೊಲೀಸ್ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ.

ಈ ಮಧ್ಯೆ ಇದೇ ವರ್ಷ ಜೂನ್ ನಲ್ಲಿ ವಶಕ್ಕೆ ಪಡೆಯಲಾದ ಮಾನವ ತಲೆ ಸೇರಿದಂತೆ ದೇಹದ ವಿವಿಧ ಭಾಗಗಳ ಡಿಎನ್ ಎ ಮಾದರಿಗಳನ್ನು ಹೋಲಿಕೆ ಮಾಡಲು ದಕ್ಷಿಣ ಜಿಲ್ಲಾ ಪೊಲೀಸರು, ಪೂರ್ವದ ಪೊಲೀಸರನ್ನು ಸಂಪರ್ಕಿಸಿದ್ದಾರೆ. 

ಶ್ರದ್ಧಾ ಹತ್ಯೆಯಾದ ಸುಮಾರು ಒಂದು ತಿಂಗಳ ನಂತರ (ಮೇ 18 ರಂದು) ಪೂರ್ವ ದೆಹಲಿ ಪೊಲೀಸರು ಇದೇ ವರ್ಷ ಜೂನ್‌ನಲ್ಲಿ ರಾಷ್ಟ್ರ ರಾಜಧಾನಿಯ ಪಾಂಡವ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ತ್ರಿಲೋಕಪುರಿ ಪ್ರದೇಶದಲ್ಲಿ ಕತ್ತರಿಸಿದ ತಲೆ ಮತ್ತು ಕೈಯನ್ನು ಪತ್ತೆ ಹಚ್ಚಿದ್ದಾರೆ.  ಆದರೆ, ಪತ್ತೆಯಾದ ದೇಹದ ಭಾಗಗಳು ಯಾರದು ಎಂಬುದನ್ನು ಖಚಿತಪಡಿಸಿಕೊಳ್ಳಲು ಪೊಲೀಸರಿಗೆ ಇನ್ನೂ ಸಾಧ್ಯವಾಗಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಇಂದಿರಾ ಗಾಂಧಿ ಕೂಡ ಹೀಗೆ ಮಾಡಿರಲಿಲ್ಲ': ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯುವ ಮುನ್ನ ಅಭಿಜಿತ್ ದೀಪ್ಕೆ; ವಿಡಿಯೋ ಹಂಚಿಕೊಂಡ CJP

ಅಭಿಜೀತ್ ದೀಪ್ಕೆ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ; ಅಜ್ಜಿ ಸಾವಿನ ಸುದ್ದಿ ತಿಳಿಸುವುದು ಹೇಗೆ? ಪೊಲೀಸ್ ಕ್ರಮಕ್ಕೆ ಪೋಷಕರ ಆಕ್ರೋಶ

ದೇಶವಿರೋಧಿ ಶಕ್ತಿಗಳಿಂದ ಅಶಾಂತಿ ಸೃಷ್ಟಿಗೆ ಯತ್ನ; CJP ಪ್ರತಿಭಟನೆಯಿಂದ ದೂರವಿರಿ: ಮುಸ್ಲಿಮರಿಗೆ ಇಮಾಮ್‌ ಮುಖ್ಯಸ್ಥ ಕರೆ

CJP protest: ಮಮತಾ ಬ್ಯಾನರ್ಜಿ, ನೇಹಾ ಬೋರಾ, ಯೋಗೇಂದ್ರ ಯಾದವ್ ವಶಕ್ಕೆ ಪಡೆದ ಪೊಲೀಸರು

CEC ಜ್ಞಾನೇಶ್ ಕುಮಾರ್ ವಿರುದ್ಧ ಸಿಜೆಪಿ ಪ್ರತಿಭಟನೆ ವೇಳೆ 2 ಪೊಲೀಸರಿಗೆ ಕಲ್ಲೇಟು!