ಲೈಗರ್ ಸಿನಿಮಾದ ತಂಡ 
ದೇಶ

ಲೈಗರ್ ಸಿನಿಮಾಗೆ ಹಣದ ಹರಿವು: ನಿರ್ದೇಶಕ ಪುರಿ ಜಗನ್ನಾಥ್, ಚಾರ್ಮಿ ಕೌರ್‌ರನ್ನು ವಿಚಾರಣೆ ನಡೆಸಿದ ಇ.ಡಿ

ಟಾಲಿವುಡ್ ನಟ ವಿಜಯ ದೇವರಕೊಂಡ ಅಭಿನಯದ ಲೈಗರ್ ಸಿನಿಮಾಗೆ ಭಾರಿ ಬಂಡವಾಳ ಹೂಡಿಕೆಯ ವಿರುದ್ಧ ಶಂಕಿತ ವಿನಿಮಯ ನಿರ್ವಹಣಾ ಕಾಯ್ದೆಯ (ಎಫ್ಇಎಂಎ) ಉಲ್ಲಂಘನೆ ವಿಚಾರವಾಗಿ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಗುರುವಾರ ದಿನವಿಡೀ ನಿರ್ದೇಶಕ ಪುರಿ ಜಗನ್ನಾಥ್ ಮತ್ತು ನಟಿ, ನಿರ್ಮಾಪಕಿ ಚಾರ್ಮಿ ಕೌರ್ ಅವರನ್ನು ವಿಚಾರಣೆಗೊಳಪಡಿಸಿದ್ದಾರೆ.

ಹೈದರಾಬಾದ್: ಟಾಲಿವುಡ್ ನಟ ವಿಜಯ ದೇವರಕೊಂಡ ಅಭಿನಯದ ಲೈಗರ್ ಸಿನಿಮಾಗೆ ಭಾರಿ ಬಂಡವಾಳ ಹೂಡಿಕೆಯ ವಿರುದ್ಧ ಶಂಕಿತ ವಿನಿಮಯ ನಿರ್ವಹಣಾ ಕಾಯ್ದೆಯ (ಎಫ್ಇಎಂಎ) ಉಲ್ಲಂಘನೆ ವಿಚಾರವಾಗಿ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಗುರುವಾರ ದಿನವಿಡೀ ನಿರ್ದೇಶಕ ಪುರಿ ಜಗನ್ನಾಥ್ ಮತ್ತು ನಟಿ, ನಿರ್ಮಾಪಕಿ ಚಾರ್ಮಿ ಕೌರ್ ಅವರನ್ನು ವಿಚಾರಣೆಗೊಳಪಡಿಸಿದ್ದಾರೆ.

ಕಾಂಗ್ರೆಸ್ ನಾಯಕ ಬಕ್ಕಾ ಜುಡ್ಸನ್ ಆಗಸ್ಟ್‌ನಲ್ಲಿ ಇ.ಡಿಗೆ ದೂರು ನೀಡಿದ ನಂತರ ತನಿಖೆ ಆರಂಭವಾಗಿದ್ದು, ರಾಜಕಾರಣಿಗಳು ಸಹ ಲೈಗರ್ ಸಿನಿಮಾದಲ್ಲಿ ಹೂಡಿಕೆ ಮಾಡಿದ್ದಾರೆ ಎಂದು ಹೇಳಿದ್ದಾರೆ. ಹೂಡಿಕೆ ಮಾಡಿದವರು ಲೈಗರ್‌ಗೆ ಹಣ ಹೂಡಿಕೆ ಮಾಡುವುದರಿಂದ ಕಪ್ಪು ಹಣವನ್ನು ಸುಲಭವಾಗಿ ಬಿಳಿ ಆಗಿ ಪರಿವರ್ತಿಸುವ ಮಾರ್ಗವನ್ನಾಗಿಸಿಕೊಂಡಿದ್ದಾರೆ ಎಂದೂ ಅವರು ಗಮನ ಸೆಳೆದಿದ್ದರು.

ಪ್ಯಾನ್ ಇಂಡಿಯಾ ಚಿತ್ರವನ್ನು ನಿರ್ಮಿಸಲು ಎಫ್ಇಎಂಎ ಉಲ್ಲಂಘಿಸಿ ವಿದೇಶಗಳಿಂದ ಕೋಟ್ಯಂತರ ರೂಪಾಯಿಗಳು ಬಂದಿವೆ ಎಂಬ ಮಾಹಿತಿಯೂ ಅವರ ಬಳಿ ಇರುವುದಾಗಿ ತನಿಖಾ ಸಂಸ್ಥೆಯ ಮೂಲಗಳು ತಿಳಿಸಿವೆ. 15 ದಿನಗಳ ಹಿಂದಷ್ಟೇ ಪುರಿ ಜಗನ್ನಾಥ್ ಮತ್ತು ಚಾರ್ಮಿಗೆ ಗುರುವಾರ ತನ್ನ ಮುಂದೆ ಹಾಜರಾಗುವಂತೆ ಇ.ಡಿ ನೋಟಿಸ್ ನೀಡಿತ್ತು. ಚಿತ್ರಕ್ಕೆ ಹೂಡಿಕೆಯಾಗಿರುವ ಹಣದ ಮೂಲದ ಬಗ್ಗೆ ಮತ್ತು ವಿದೇಶದಲ್ಲಿ ಯಾರಾದರೂ ಹೂಡಿಕೆದಾರರು ಚಿತ್ರದ ತಯಾರಿಕೆಗೆ ಹಣವನ್ನು ರವಾನಿಸಿದ್ದಾರೆಯೇ ಎಂಬ ಬಗ್ಗೆ ಅಧಿಕಾರಿಗಳು ಅವರನ್ನು ಪ್ರಶ್ನಿಸಿರುವುದಾಗಿ ಮೂಲಗಳು ತಿಳಿಸಿವೆ.

ಕರಣ್ ಜೋಹರ್, ಪುರಿ ಜಗನ್ನಾಥ್ ಮತ್ತು ಚಾರ್ಮಿ ಕೌರ್ ಚಿತ್ರಕ್ಕೆ ಬಂಡವಾಳ ಹೂಡಿದ್ದರು. ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದ್ದ ಸಿನಿಮಾದಲ್ಲಿ ಪ್ರಸಿದ್ಧ ಬಾಕ್ಸರ್ ಮೈಕ್ ಟೈಸನ್ ಕೂಡ ಸಿನಿಮಾದ ದೃಶ್ಯವೊಂದರಲ್ಲಿ ನಟಿಸಿದ್ದರು.

ಇಬ್ಬರು ನಿರ್ಮಾಪಕರ ಖಾತೆಗಳಿಗೆ ಹಲವಾರು ಕಂಪನಿಗಳು ಹಣವನ್ನು ವರ್ಗಾಯಿಸಿವೆ ಎಂದು ಇಡಿ ಶಂಕಿಸಿದ್ದು, ಯಾರೆಲ್ಲ ಮತ್ತು ಯಾವ ಉದ್ದೇಶಕ್ಕಾಗಿ ಹಣವನ್ನು ರವಾನಿಸಿದ್ದಾರೆ ಎಂಬ ಬಗ್ಗೆ ಅದಿಕಾರಿಗಳು ಅವರಿಂದ ವಿವರಣೆ ಕೇಳಿದ್ದಾರೆ. ಪುರಿ ಜಗನ್ನಾಥ್ ಮತ್ತು ಚಾರ್ಮಿ ಕೌರ್ ಇ.ಡಿ ಮುಂದೆ ವಿಚಾರಣೆಗೆ ಹಾಜರಾಗುತ್ತಿರುವುದು ಇದು ಎರಡನೇ ಬಾರಿ. 2021 ರಲ್ಲಿ, ರಾಜ್ಯ ಅಬಕಾರಿ ಮತ್ತು ಜಾರಿ ವಿಭಾಗವು 2017ರಲ್ಲಿ ದಾಖಲಿಸಿದ್ದ ಕುಖ್ಯಾತ ಡ್ರಗ್ಸ್ ಪ್ರಕರಣವೊಂದರಲ್ಲಿ ಹಣ ಅಕ್ರಮ ವರ್ಗಾವಣೆ ನಡೆದಿದೆ ಎಂಬ ಆರೋಪದ ಕುರಿತು ಇ.ಡಿ ನಿರ್ದೇಶಕ ಪುರಿ ಜಗನ್ನಾಥ್ ಮತ್ತು ಚಾರ್ಮಿ ಸೇರಿದಂತೆ ಹಲವಾರು ಸೆಲೆಬ್ರಿಟಿಗಳನ್ನು ವಿಚಾರಣೆ ನಡೆಸಿತ್ತು.

ಹಣ ಅಕ್ರಮ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಟಾಲಿವುಡ್ ನಟರಾದ ರವಿತೇಜ, ತರುಣ್, ನವದೀಪ್, ಸುಬ್ಬರಾಜು, ಕ್ಯಾಮರಾಮನ್ ಶ್ಯಾಮ್ ಕೆ ನಾಯ್ಡು, ನಿರ್ದೇಶಕ ಚಿನ್ನಾ, ನಟಿ ಮುಮೈತ್ ಖಾನ್ ಮತ್ತು ಇತರರನ್ನು ವಿಚಾರಣೆ ನಡೆಸಿತ್ತು.

ಟಾಲಿವುಡ್ ಮೂಲಗಳು ಹೇಳುವಂತೆ ಪುರಿ ಜಗನ್ನಾಥ್ ಮತ್ತು ಚಾರ್ಮಿ ಅವರು ಲೈಗರ್ ಸಿನಿಮಾದಲ್ಲಿ ಸುಮಾರು 120 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಿದ್ದರು. ಆದರೆ, ದೊಡ್ಡ ಮಟ್ಟದ ಆದಾಯದ ನಿರೀಕ್ಷೆಯಲ್ಲಿ ಚಿತ್ರವು ಬಾಕ್ಸ್ ಆಫೀಸ್‌ನಲ್ಲಿ ಯಶಸ್ವಿಯಾಗಲಿಲ್ಲ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಭಯೋತ್ಪಾದನೆಯನ್ನು ಯಾವುದೂ ಸಮರ್ಥಿಸಲು ಸಾಧ್ಯವಿಲ್ಲ, ಭಾರತ ಇಸ್ರೇಲ್ ಜೊತೆ ದೃಢವಾಗಿ ನಿಲ್ಲುತ್ತದೆ': ನೆಸ್ಸೆಟ್‌ನಲ್ಲಿ ಪ್ರಧಾನಿ ಮೋದಿ ಭಾಷಣ

'ನ್ಯಾಯಾಂಗದಲ್ಲಿ ಭ್ರಷ್ಟಾಚಾರ' ಪಾಠ: ಸುಪ್ರೀಂ ಕೋರ್ಟ್ ಚಾಟಿ ನಂತರ ವೆಬ್‌ಸೈಟ್‌ನಿಂದ ಪಠ್ಯಪುಸ್ತಕ ತೆಗೆದ NCERT

T20 World Cup 2026: ಶ್ರೀಲಂಕಾ ವಿರುದ್ಧ ನ್ಯೂಜಿಲ್ಯಾಂಡ್ ​ಗೆ 61 ರನ್ ಭರ್ಜರಿ ಗೆಲುವು

India to Israel: ಪ್ರಧಾನಿ ಮೋದಿ ಪಯಣಿಸಿದ Air India ವಿಮಾನ ವಿಶ್ವದಲ್ಲೇ ಅತಿ ಹೆಚ್ಚು ಟ್ರ್ಯಾಕ್: Flightradar24

Ranji Trophy final: ಕರ್ನಾಟಕ ವಿರುದ್ಧ ಜಮ್ಮು ಮತ್ತು ಕಾಶ್ಮೀರ ಬೃಹತ್ ಮೊತ್ತ; 527/6

SCROLL FOR NEXT