ದೇಶ

ಎಲ್ಗಾರ್‌ ಪರಿಷತ್‌ ಪ್ರಕರಣ: 24 ಗಂಟೆಯೊಳಗೆ ಗೌತಮ್‌ ನವ್ಲಾಖಾರನ್ನು ಗೃಹಬಂಧನದಲ್ಲಿರಿಸಿ: 'ಸುಪ್ರೀಂ' ಆದೇಶ

Srinivasamurthy VN

ನವದೆಹಲಿ: ಎಲ್ಗಾರ್‌ ಪರಿಷತ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈನ ತಲೋಜಾ ಜೈಲಿನಲ್ಲಿರುವ ಸಾಮಾಜಿಕ ಕಾರ್ಯಕರ್ತ ಗೌತಮ್‌ ನವ್ಲಾಖಾ ಅವರನ್ನು 24 ಗಂಟೆಗಳ ಒಳಗೆ ಗೃಹಬಂಧನ ಸ್ಥಳಾಂತರಿಸುವಂತೆ ಸುಪ್ರೀಂ ಕೋರ್ಟ್ ಶುಕ್ರವಾರ ಆದೇಶಿಸಿದೆ.

ಎನ್‌ಐಎ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಶುಕ್ರವಾರ ತಿರಸ್ಕರಿಸಿದ್ದು, ಸಾಮಾಜಿಕ ಕಾರ್ಯಕರ್ತ ಗೌತಮ್‌ ನವ್ಲಾಖಾ ಅವರನ್ನು ನವಿ ಮುಂಬೈನ ತಲೋಜಾ ಜೈಲಿನಿಂದ 24 ಗಂಟೆಗಳ ಒಳಗೆ ಗೃಹಬಂಧನದಲ್ಲಿರಿಸುವಂತೆ ಆದೇಶಿಸಿದೆ.

ಎಲ್ಗರ್ ಪರಿಷತ್-ಮಾವೋವಾದಿ ಸಂಪರ್ಕ ಪ್ರಕರಣಕ್ಕೆ ಸಂಬಂಧಿಸಿದಂತೆ ನವ್ಲಾಖಾ ಜೈಲು ಸೇರಿದ್ದಾರೆ. ಮಾವೋವಾದಿಗಳು ಮತ್ತು ಪಾಕಿಸ್ತಾನದ ಐಎಸ್‌ಐ ಜೊತೆಗಿನ ಸಂಪರ್ಕವನ್ನು ಉಲ್ಲೇಖಿಸಿ ನವ್ಲಾಖಾ ಅವರನ್ನು ಗೃಹಬಂಧನದಲ್ಲಿ ಇರಿಸಲು ನವೆಂಬರ್ 10 ರ ಸುಪ್ರೀಂ ಕೋರ್ಟ್ ಆದೇಶವನ್ನು ಮರುಪಡೆಯಲು ಭಯೋತ್ಪಾದನಾ ವಿರೋಧಿ ತನಿಖಾ ಸಂಸ್ಥೆ ಕೋರಿತ್ತು. 

ಆದರೆ ನ್ಯಾಯಮೂರ್ತಿಗಳಾದ ಕೆಎಂ ಜೋಸೆಫ್ ಮತ್ತು ಹೃಷಿಕೇಶ್ ರಾಯ್ ಅವರ ಪೀಠ, ನವ್ಲಾಖಾ ಅವರನ್ನು ಗೃಹ ಬಂಧನದಲ್ಲಿರಿಸುವಂತೆ ಆದೇಶಿಸಿದ್ದು, ಅಲ್ಲದೆ ಅವರನ್ನು ಇರಿಸುವ ಸ್ಥಳದಲ್ಲಿ ಕೆಲವು ಹೆಚ್ಚುವರಿ ಭದ್ರತಾ ಕ್ರಮಗಳನ್ನು ಕೈಗೊಳ್ಳಲು ಆದೇಶಿಸಿದೆ.

ಎಲ್ಗಾರ್‌ ಪರಿಷತ್‌ ಪ್ರಕರಣದಲ್ಲಿ ಬಂಧಿಸಲಾಗಿರುವ ಸಾಮಾಜಿಕ ಕಾರ್ಯಕರ್ತ ಗೌತಮ್‌ ನವಲಖಾ ಅವರನ್ನು ಒಂದು ತಿಂಗಳ ಮಟ್ಟಿಗೆ ಗೃಹಬಂಧನದಲ್ಲಿ ಇರಿಸುವ ಪ್ರಕ್ರಿಯೆ ಕುರಿತ ವಿಚಾರಣೆಯನ್ನು ರಾಷ್ಟ್ರೀಯ ತನಿಖಾ ದಳದ ವಿಶೇಷ ನ್ಯಾಯಾಲಯವು ಮಂಗಳವಾರ ನಡೆಸಿತ್ತು. ನವಿ ಮುಂಬೈಯ ತಾಲೋಜಾ ಕಾರಾಗೃಹದಲ್ಲಿರುವ ನವಲಖಾ ಅವರನ್ನು ವೈದ್ಯಕೀಯ ಕಾರಣಗಳಿಗಾಗಿ ಒಂದು ತಿಂಗಳ ಮಟ್ಟಿಗೆ ಗೃಹಬಂಧನದಲ್ಲಿ ಇರಿಸಲು ಕಳೆದ ವಾರ ಸುಪ್ರೀಂ ಕೋರ್ಟ್ ಅನುಮತಿ ನೀಡಿತ್ತು.

ಆದೇಶವಾದ 48 ತಾಸುಗಳ ಒಳಗಾಗಿ ನವಲಖಾ ಅವರನ್ನು ಗೃಹಬಂಧನದಲ್ಲಿ ಇರಿಸಬೇಕು ಎಂದು ಕೋರ್ಟ್‌ ಹೇಳಿತ್ತು. ಆದರೆ, ಗೃಹಬಂಧನದಲ್ಲಿ ಇರಿಸುವ ಕುರಿತ ಪ್ರಕ್ರಿಯೆ ಪೂರ್ಣಗೊಳ್ಳದ ಕಾರಣ, ಅವರು ಇನ್ನೂ ಕಾರಾಗೃಹದಲ್ಲಿಯೇ ಇದ್ದಾರೆ. ಹೀಗಾಗಿ ಇಂದು ಸುಪ್ರೀಂ ಕೋರ್ಟ್ ತನಿಖಾಧಿಕಾರಿಗಳಿಗೆ 24 ಗಂಟೆಗಳ ಗಡುವು ನೀಡಿದೆ.
 

SCROLL FOR NEXT