ದೆಹಲಿ ಕೋರ್ಟ್ 
ದೇಶ

ಪಿಎಫ್ಐ ಪ್ರಕರಣ, 8 ಮಂದಿಗೆ ಜಾಮೀನು ನೀಡಿ ಪೊಲೀಸರನ್ನು ತರಾಟೆಗೆ ತೆಗೆದುಕೊಂಡ ದೆಹಲಿ ಕೋರ್ಟ್

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾಗೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ದೆಹಲಿ ಕೋರ್ಟ್ 8 ಮಂದಿಗೆ ಜಾಮೀನು ನೀಡಿದ್ದು, ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದೆ.

ದೆಹಲಿ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾಗೆ ಸಂಬಂಧಿಸಿದ ಪ್ರಕರಣವೊಂದರಲ್ಲಿ ದೆಹಲಿ ಕೋರ್ಟ್ 8 ಮಂದಿಗೆ ಜಾಮೀನು ನೀಡಿದ್ದು, ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದೆ.

ಈ ಪ್ರಕರಣದಲ್ಲಿ 8 ಮಂದಿಯನ್ನು ಬಂಧಿಸಿದ್ದನ್ನು ಸಮರ್ಥಿಸಿಕೊಳ್ಳಲು ಪೊಲೀಸ್ ಇಲಾಖೆ ವಿಫಲವಾಗಿದ್ದಕ್ಕಾಗಿ ದೆಹಲಿ ಕೋರ್ಟ್ ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದೆ. 

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವಿರುದ್ಧದ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವವರು, ಪೊಲೀಸರು ಆರೋಪಿಸಿದ್ದಂತೆ ಅಪರಾಧ ಕೃತ್ಯಗಳು ನಡೆದಾಗ ಕಸ್ಟಡಿಯಲ್ಲೇ ಇದ್ದರು. ಈ ರೀತೀ ಅಪರಾಧ ಕೃತ್ಯಗಳು ನಡೆದಾಗ ಕಸ್ಟಡಿಯಲ್ಲೇ ಇದ್ದ ವ್ಯಕ್ತಿಗಳು ಅದರಲ್ಲಿ ಭಾಗವಹಿಸುವುದಕ್ಕೆ ಹೇಗೆ ಸಾಧ್ಯ ಎಂದು ನ್ಯಾಯಾಲಯ ಪ್ರಶ್ನಿಸಿದೆ.

ಆರೋಪಿಗಳಿಗೆ ಜಾಮೀನು ಮಂಜೂರು ಮಾಡಿರುವ ನ್ಯಾಯಾಧೀಶರಾದ ಸಂಜಯ್, ಆರೋಪಿಗಳ ಬಂಧನವನ್ನು ಸಮರ್ಥಿಸಿಕೊಳ್ಳುವುದಕ್ಕೆ ಹಾಗೂ ಅವರ ವಿರುದ್ಧದ ಆರೋಪಗಳನ್ನು ಸಾಬೀತುಪಡಿಸುವುದಕ್ಕೆ ಸಾಧ್ಯವಾದಿಲ್ಲ. ಪಿಎಫ್ಐ ನ್ನು ಕಾನೂನು ವಿರುದ್ಧದ ಸಂಘಟನೆ ಎಂದು ಘೋಷಣೆ ಮಾಡಿದ್ದ ದಿನದಿಂದ ಈಗಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಬಂಧನದವರೆಗೂ ಅವರು ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರು ಎಂಬುದನ್ನು ಸಾಬೀತುಪಡಿಸಲು ಸಾಧ್ಯವಾಗಿಲ್ಲ ಎಂದು ಕೋರ್ಟ್ ಹೇಳಿದೆ. ಪಿಎಫ್ಐ ನಿಷೇಧ ಘೋಷಣೆಯಾದಾಗ ಆರೋಪಿಗಳು ಪೊಲೀಸ್ ಕಸ್ಟಡಿಯಲ್ಲೇ ಇದ್ದರು ಎಂಬುದನ್ನು ಕೋರ್ಟ್ ಉಲ್ಲೇಖಿಸಿದೆ.
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Iran war: ಬುಶೆಹರ್ ಅಣುಸ್ಥಾವರದ ಮೇಲೆ ಅಮೆರಿಕ-ಇಸ್ರೇಲ್ ಕ್ಷಿಪಣಿ ದಾಳಿ, ಓರ್ವ ಸಾವು

ಇರಾನ್-ಇಸ್ರೇಲ್ ಯುದ್ಧದ ನಡುವೆ ಭಾರತದ ರಕ್ಷಣಾ ರಫ್ತು ಇತಿಹಾಸದಲ್ಲೇ ದಾಖಲೆಯ ಏರಿಕೆ!, ಖರೀದಿದಾರರು ಯಾರು?

ಭಾರತದತ್ತ ಹೊರಟಿದ್ದ ಇರಾನ್ ತೈಲ ಹೊತ್ತ ಹಡಗು ಏಕಾಏಕಿ ಚೀನಾಗೆ ರೀ-ರೂಟ್; ಕೇಂದ್ರ ಹೇಳಿದ್ದೇನು?

Iran war ನಡುವೆಯೂ ಭಾರತ ದೇಶೀಯ ಮತ್ತು ಬಾಹ್ಯ ಸವಾಲುಗಳ ಯಶಸ್ವಿಯಾಗಿ ನಿರ್ವಹಿಸಿದೆ: EAM Jaishankar

'ನಾನು ಸಂಸತ್ತಿಗೆ ಹೋಗುವುದು ಗದ್ದಲ ಸೃಷ್ಟಿಸಲು ಅಲ್ಲ': AAP ಆರೋಪಗಳನ್ನು ತಳ್ಳಿಹಾಕಿದ ರಾಘವ್ ಚಡ್ಡಾ

SCROLL FOR NEXT