ಸುಪ್ರೀಂ ಕೋರ್ಟ್ 
ದೇಶ

'ದಿ ಕಾಶ್ಮೀರ್ ಫೈಲ್ಸ್' ವಿರುದ್ಧ ಐಎಫ್ ಎಫ್ಐ ಜ್ಯೂರಿ ಮುಖ್ಯಸ್ಥ ಅವಹೇಳನಕಾರಿ ಟೀಕೆ: ಸುಪ್ರೀಂ ಕೋರ್ಟ್ ವಕೀಲರಿಂದ ಕೇಸು ದಾಖಲು

'ದಿ ಕಾಶ್ಮೀರ್ ಫೈಲ್ಸ್' ಚಿತ್ರದ  ಬಗ್ಗೆ ಜ್ಯೂರಿ ಮುಖ್ಯಸ್ಥರು ವಿವಾದಾತ್ಮಕ ಹೇಳಿಕೆ ನೀಡಿರುವ ಬಗ್ಗೆ ತೀವ್ರ ಟೀಕೆಗಳು ಕೇಳಿಬರುತ್ತಿರುವುದರ ಮಧ್ಯೆ ಸುಪ್ರೀಂ ಕೋರ್ಟ್ ನಲ್ಲಿ ಅಭ್ಯಾಸನಿರತ ವಕೀಲರೊಬ್ಬರು ಮಂಗಳವಾರ ಗೋವಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ನವದೆಹಲಿ: 'ದಿ ಕಾಶ್ಮೀರ್ ಫೈಲ್ಸ್' ಚಿತ್ರದ  ಬಗ್ಗೆ ಜ್ಯೂರಿ ಮುಖ್ಯಸ್ಥರು ವಿವಾದಾತ್ಮಕ ಹೇಳಿಕೆ ನೀಡಿರುವ ಬಗ್ಗೆ ತೀವ್ರ ಟೀಕೆಗಳು ಕೇಳಿಬರುತ್ತಿರುವುದರ ಮಧ್ಯೆ ಸುಪ್ರೀಂ ಕೋರ್ಟ್ ನಲ್ಲಿ ಅಭ್ಯಾಸನಿರತ ವಕೀಲರೊಬ್ಬರು ಮಂಗಳವಾರ ಗೋವಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ನಿನ್ನೆ 53ನೇ ಐಎಫ್ಎಫ್ಐ ಸಮಾರೋಪ ಸಮಾರಂಭದಲ್ಲಿ ಜ್ಯೂರಿ ಮುಖ್ಯಸ್ಥ ನಡವ್ ಲ್ಯಾಪಿಡ್ ಆಡಿದ್ದ ಮಾತು ವಿವಾದದ ಬೆಂಕಿ ಹಚ್ಚಿದ್ದು ಹಿಂದೂ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ, ಮುಗ್ಧ ಕಾಶ್ಮೀರ ಪಂಡಿತರನ್ನು ಅವಮಾನ ಮಾಡಲಾಗಿದೆ ಎಂದು ಆರೋಪಿಸಿ ಕೇಸು ದಾಖಲಿಸಿದ್ದಾರೆ.

ಅಡ್ವೊಕೇಟ್ ವಿನೀತ್ ಜಿಂದಾಲ್ ಎಂಬುವವರು ನಡವ್ ಲ್ಯಾಪಿಡ್ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 121, 153, 153ಎ ಮತ್ತು ಬಿ, 295, 298 ಮತ್ತು 505ರಡಿಯಲ್ಲಿ ಕೇಸು ದಾಖಲಿಸಿದ್ದಾರೆ. 1990ರ ದಶಕದಲ್ಲಿ ಇಸ್ಲಾಂ ಭಯೋತ್ಪಾದಕರಿಂದ ಕಾಶ್ಮೀರ ಕಣಿವೆಯಲ್ಲಿ ಮುಗ್ಧ ಕಾಶ್ಮೀರ ಪಂಡಿತರನ್ನು ಕ್ರೂರವಾಗಿ ಹತ್ಯೆ ಮಾಡುತ್ತಿದ್ದರ ಮೇಲೆ ಬೆಳಕು ಚೆಲ್ಲುವ ಕಥೆ ದಿ ಕಾಶ್ಮೀರ್ ಫೈಲ್ಸ್. ಇಸ್ಲಾಂ ಭಯೋತ್ಪಾದಕರಿಂದ ಹಿಂದೂ ನರಮೇಧವಾಗಿದ್ದು ಅದನ್ನು ಚಿತ್ರದಲ್ಲಿ ತೋರಿಸಿರುವುದನ್ನು ಅಶ್ಲೀಲ, ಪ್ರಚಾರದ ಹುಚ್ಚು ಎಂದು ಕರೆದು ಭಾರತೀಯ ಹಿಂದೂ ಸಮುದಾಯಕ್ಕೆ ಅವಮಾನ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಕಾವೇರಿ' ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೆ ಶಾಕ್: ತಮಿಳುನಾಡಿಗೆ ನೀರು ಬಿಡಬೇಕೆಂಬ CWRC ಆದೇಶ ಎತ್ತಿಹಿಡಿದ CWMA

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಶ್ ಮಾಫಿ ಸಾಕ್ಷಿ ಅರ್ಜಿ ಅಂಗೀಕರಿಸಿದ ಕೋರ್ಟ್; 'ದಾಸ'ನಿಗೆ ಬಿಗ್ ಶಾಕ್!

'ಕಾಂಗ್ರೆಸ್ ಸರ್ಕಾರದ ವೈಫಲ್ಯ' ವಿರೋಧಿಸಿ ಸೆಪ್ಟೆಂಬರ್ 1 ರಿಂದ 10ರವರೆಗೆ ರಾಯಚೂರಿನಿಂದ ಬಳ್ಳಾರಿಗೆ BJP-JDS ಪಾದಯಾತ್ರೆ!

Uorfi Javed: ಮದ್ವೆ ಆಗ್ತೀನೋ ಇಲ್ಲವೋ ಗೊತ್ತಿಲ್ಲ, ಆದ್ರೆ ತಾಯಿ ಆಗ್ತೀನಿ; ಸೀಕ್ರೆಟ್‌ ರಿವೀಲ್ ಮಾಡಿದ ಉರ್ಫಿ ಜಾವೇದ್

ಡಿಕೆಶಿ ಸಂಪುಟಕ್ಕೆ ಮತ್ತೆ ಸರ್ಜರಿ? ಭಾರಿ ಬದಲಾವಣೆ, 3-5 ಸಚಿವರಿಗೆ ಕೊಕ್?; ಮಹಿಳೆ ಸೇರಿ ಕೆಲ ರೆಬೆಲ್ ನಾಯಕರಿಗೆ ಅವಕಾಶ ಸಾಧ್ಯತೆ