ದೇಶ

ಅ.25 ರಿಂದ ಮಾಲಿನ್ಯ ಪ್ರಮಾಣ ಪತ್ರ ಇದ್ದರೆ ಮಾತ್ರ ಪೆಟ್ರೋಲ್, ಡೀಸೆಲ್: ದೆಹಲಿ ಪರಿಸರ ಸಚಿವ

Lingaraj Badiger

ನವದೆಹಲಿ: ವಾಹನಗಳಿಗೆ ಸಂಬಂಧಪಟ್ಟಂತೆ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರವನ್ನು ದೆಹಲಿ ಸರ್ಕಾರ ಕಡ್ಡಾಯಗೊಳಿಸಿದ್ದು, ಅಕ್ಟೋಬರ್ 25 ರಿಂದ ಮಾಲಿನ್ಯ ಪ್ರಮಾಣ ಪತ್ರ ಹೊಂದಿದ್ದರೆ ಮಾತ್ರ ಪೆಟ್ರೋಲ್, ಡೀಸೆಲ್ ಹಾಕಲಾಗುವುದು ಎಂದು ದೆಹಲಿ ಪರಿಸರ ಸಚಿವ ಗೋಪಾಲ್ ರೈ ಘೋಷಿಸಿದ್ದಾರೆ.

ಮಾಲಿನ್ಯ ಪ್ರಮಾಣಪತ್ರ ಹೊಂದಿರದ ವಾಹನಗಳಿಗೆ ಪೆಟ್ರೋಲ್ ಮತ್ತು ಡೀಸೆಲ್ ಹಾಕುವುದಿಲ್ಲ. ಅಕ್ಟೋಬರ್ 25ರಿಂದ ಈ ನಿಯಮ ಜಾರಿಗೆ ಬರಲಿದೆ. ಈ ಸಂಬಂಧ ಶೀಘ್ರದಲ್ಲೇ ಅಧಿಸೂಚನೆ ಹೊರಡಿಸಲಾಗುವುದು ಎಂದು ಸಚಿವ ಗೋಪಾಲ್ ರೈ ತಿಳಿಸಿದ್ದಾರೆ.

ವಾಯುಮಾಲಿನ್ಯ ಪರಿಶೀಲನೆ ಸಂಬಂಧ ಪರಿಸರ ಇಲಾಖೆಯು ವಾರ್ ರೂಂ ಅನ್ನು ಅಕ್ಟೋಬರ್ ೩ರಿಂದ ಸ್ಥಾಪಿಸಲಾಗುವುದು. ದೆಹಲಿಯಲ್ಲಿ ವಾಯು ಮಾಲಿನ್ಯಕ್ಕೆ ತಿದ್ದುಪಡಿಯಾದ ಗ್ರೇಡೆಡ್ ರೆಸ್ಪಾನ್ಸ್ ಆಕ್ಷನ್ ಪ್ಲಾನ್ (GRAP) ಪರಿಣಾಮಕಾರಿ ಅನುಷ್ಠಾನಗೊಳಿಸಲಾಗುವುದು ಎಂದು ಅವರು ಹೇಳಿದ್ದಾರೆ.

ದೆಹಲಿಯ AQI ಕಳಪೆ ವರ್ಗಕ್ಕಿಂತ ಕೆಟ್ಟದಾಗಿದ್ದರೆ GRAP ಕ್ರಮಗಳನ್ನು ಸಾಮಾನ್ಯವಾಗಿ ಶಿಫಾರಸು ಮಾಡಲಾಗುತ್ತದೆ. ಶುಕ್ರವಾರ ದೆಹಲಿಯ AQI 173 ಇತ್ತು.

SCROLL FOR NEXT