ದೇಶ

ಗಡಿಯಲ್ಲಿ ಬಗೆಹರಿಯದ ಸಮಸ್ಯೆಗಳು: ಭಾರತ- ಚೀನಾ ರಾಜತಾಂತ್ರಿಕ ಮಾತುಕತೆಯಲ್ಲಿ ಯಾವುದೇ ಪ್ರಗತಿಯಾಗಿಲ್ಲ- ಎಂಇಎ

Nagaraja AB

ನವದೆಹಲಿ: ಪೂರ್ವ ಲಡಾಖ್‌ನಲ್ಲಿ ಉಳಿದಿರುವ ಸಮಸ್ಯೆಗಳನ್ನು ಆದಷ್ಟು ಬೇಗ ಪರಿಹರಿಸಲು ಮತ್ತು ದ್ವಿಪಕ್ಷೀಯ ಸಂಬಂಧಗಳಲ್ಲಿ ಸಹಜತೆಯನ್ನು ಪುನಃಸ್ಥಾಪಿಸಲು ಮುಂದಿನ ಸುತ್ತಿನ ಮಿಲಿಟರಿ ಮಟ್ಟದ ಮಾತುಕತೆ ನಡೆಸಲು ಭಾರತ ಮತ್ತು ಚೀನಾ ಶುಕ್ರವಾರ ಒಪ್ಪಿಕೊಂಡಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ. 

ಡೆಮ್‌ಚೋಕ್ ಮತ್ತು ಡೆಪ್ಸಾಂಗ್‌ನ ಪ್ರಮುಖ ಘರ್ಷಣೆ ಬಿಂದುಗಳಲ್ಲಿ ಸಮಸ್ಯೆಗಳನ್ನು ಪರಿಹರಿಸಲು ಯಾವುದೇ ಪ್ರಗತಿಯಾಗದ ಕಾರಣ, ಭಾರತ-ಚೀನಾ ಗಡಿ ವ್ಯವಹಾರಗಳ ಕುರಿತ ಸಮಾಲೋಚನೆ ಮತ್ತು ಕಾರ್ಯವಿಧಾನದ ಸಭೆಯಲ್ಲಿ ಇದೊಂದು ನಿರ್ಧಾರವನ್ನು ಮಾತ್ರ ತೆಗೆದುಕೊಳ್ಳಲಾಯಿತು.  ಉಳಿದಿರುವ ಸಮಸ್ಯೆಗಳನ್ನು ಶೀಘ್ರ ಪರಿಹರಿಸಲು ರಾಜತಾಂತ್ರಿಕ ಮತ್ತು ಮಿಲಿಟರಿ ಮಾತುಕತೆ ಮೂಲಕ ರ್ಚೆ ಮುಂದುವರೆಸಲು ಉಭಯ ಕಡೆಯವರು ಒಪ್ಪಿಕೊಂಡಿದ್ದಾರೆ ಎಂದು ಎಂಇಎ ಹೇಳಿದೆ. 

ವಾಸ್ತವ ಗಡಿ ರೇಖೆಯಲ್ಲಿ ಉಳಿದಿರುವ ಸಮಸ್ಯೆಗಳನ್ನು ಪರಿಹರಿಸುವ ಉದ್ದೇಶದೊಂದಿಗೆ ಶೀಘ್ರದಲ್ಲೇ  ಮತ್ತೊಂದು ಸುತ್ತಿನ (17) ಹಿರಿಯ ಕಮಾಂಡರ್ ಗಳ ಸಭೆ ನಡೆಸಲು ಉಭಯ ದೇಶಗಳು ಒಪ್ಪಿಕೊಂಡಿರುವುದಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.  ಕಳೆದ ತಿಂಗಳ ಪೆಟ್ರೋಲಿಂಗ್ ಪಾಯಿಂಟ್ ನಿಂದ ಉಭಯ ರಾಷ್ಟ್ರಗಳು ಸೇನೆಯನ್ನೂ ಹಿಂತೆಗೆದುಕೊಂಡಿದ್ದರೂ ಡೆಮ್ ಚೋಕ್ ಮತ್ತು ಡೆಪ್ಸಾಂಗ್ ವಲಯದಲ್ಲಿನ ಬಿಕ್ಕಟ್ಟು ಬಗೆಹರಿದಿಲ್ಲ. 

SCROLL FOR NEXT