ದೇಶ

ತೆಲಂಗಾಣ: ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ಮಾಜಿ ಸಂಸದ ಆನಂದ ಭಾಸ್ಕರ್ ರಾಪೋಲು ರಾಜೀನಾಮೆ

Ramyashree GN

ಹೈದರಾಬಾದ್: ತೆಲಂಗಾಣದ ಬಿಜೆಪಿ ನಾಯಕ ಮತ್ತು ರಾಜ್ಯಸಭಾ ಮಾಜಿ ಸಂಸದ ಆನಂದ ಭಾಸ್ಕರ್ ರಾಪೋಲು ಅವರು ಭಾರತೀಯ ಜನತಾ ಪಕ್ಷದ (ಬಿಜೆಪಿ) ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರಿಗೆ ಬುಧವಾರ ಪತ್ರ ಬರೆದಿರುವ ಆನಂದ ಭಾಸ್ಕರ್, 'ಕೇಂದ್ರ ಸರ್ಕಾರವು ತೆಲಂಗಾಣದ ಬಗ್ಗೆ ತೀವ್ರವಾಗಿ ಮಲತಾಯಿ ಧೋರಣೆ ತೋರಿಸಿದೆ ಮತ್ತು ತೆಲಂಗಾಣದಿಂದ ಹಲವಾರು ಅರ್ಹ ಅವಕಾಶಗಳನ್ನು ಕಸಿದುಕೊಂಡಿದೆ' ಎಂದು ಹೇಳಿದ್ದಾರೆ.

'ಸಕಾರಾತ್ಮಕ ಜಾತ್ಯತೀತತೆ' ಎಂಬ ತನ್ನ ಹೇಳಿಕೆಗೆ ಬದ್ಧವಾಗಿದೆಯೇ ಎಂದು ಬಿಜೆಪಿ ಆತ್ಮಾವಲೋಕನ ಮಾಡಿಕೊಳ್ಳಬೇಕೆಂದು ಹೇಳಿರುವ ಅವರು, 'ಅನಗತ್ಯ ವಿಭಜನೆ'ಗಳನ್ನು ಪ್ರಚಾರ ಮಾಡಲಾಗುತ್ತಿದೆ ಮತ್ತು ಸಹಕಾರಿ ಒಕ್ಕೂಟದ ಕುರಿತು ದಿವಂಗತ ಎ.ಬಿ. ವಾಜಪೇಯಿ ಅವರ ಸಲಹೆಯನ್ನು ಅನುಸರಿಸುವ ಯಾವುದೇ ಸೂಚನೆ ಕೂಡ ಇಲ್ಲ' ಎಂದು ಹೇಳಿದರು.

ಎಲ್ಲಕ್ಕಿಂತ ಮುಖ್ಯವಾಗಿ, 'ಚುನಾವಣಾ ಲಾಭ ಪಡೆಯಲು, ಭಯಭೀತಗೊಳಿಸುವುದು ಮತ್ತು ವಿಭಜನೆಯನ್ನು ಸೃಷ್ಟಿಸುವುದು' ಈಗ ಪಕ್ಷದ ವಿಶಿಷ್ಟ ಲಕ್ಷಣವಾಗಿದೆ. ನಾನು ನೇಕಾರರ ಸಮಸ್ಯೆಗಳ ಬಗ್ಗೆ ನಿರಂತರವಾಗಿ ಹೇಳುತ್ತಿದ್ದರೂ, ನನ್ನ ಮನವಿಗಳನ್ನು ನಿರ್ಲಕ್ಷಿಸಲಾಗಿದೆ ಎಂದು ದೂರಿದರು.

ಕೈಮಗ್ಗ ಉತ್ಪನ್ನಗಳ ಮೇಲಿನ ಜಿಎಸ್‌ಟಿ ನೇಕಾರರ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ. ಕಲ್ಯಾಣ ಕಾರ್ಯಗಳನ್ನು ‘ಉಚಿತ’ ಎಂದು ಬಿಂಬಿಸುತ್ತಿರುವುದು ತನ್ನನ್ನು ಅಲುಗಾಡಿಸಿದೆ. ಕಳೆದ ನಾಲ್ಕು ವರ್ಷಗಳಿಂದ ಕೇಂದ್ರದಲ್ಲಿ ನನ್ನನ್ನು ಕಡೆಗಣಿಸಲಾಗಿದೆ, ಅವಮಾನಿಸಲಾಗಿದೆ, ಕಡಿಮೆ ಪ್ರಾಶಸ್ತ್ಯ ನೀಡಲಾಗಿದೆ ಮತ್ತು ಹೊರಗಿಡಲಾಗಿದೆ ಎಂದು ಅವರು ಹೇಳಿದರು.

SCROLL FOR NEXT