ದೇಶ

ಭಾರತದೊಂದಿಗೆ ಜಮ್ಮು-ಕಾಶ್ಮೀರ ವಿಲೀನ ಷರತ್ತುಗಳನ್ನು ಮರುಸ್ಥಾಪಿಸಿ: ಮೆಹ್ಬೂಬಾ ಮುಫ್ತಿ 

Srinivas Rao BV

ಶ್ರೀನಗರ: ಭಾರತದೊಂದಿಗೆ ಜಮ್ಮು-ಕಾಶ್ಮೀರ ವಿಲೀನವಾಗಲು  ಮಹಾರಾಜ ಹರಿ ಸಿಂಗ್ ಸಹಿ ಹಾಕುವಾಗ ವಿಧಿಸಲಾಗಿದ್ದ ಷರತ್ತುಗಳನ್ನು ಮರು ಸ್ಥಾಪಿಸದೇ ಇದ್ದಲ್ಲಿ ಜಮ್ಮು-ಕಾಶ್ಮೀರದಲ್ಲಿ ಭಾರತದ ಇರುವಿಕೆ ಅಕ್ರಮವಾಗಲಿದೆ ಎಂದು ಪಿಡಿಪಿ ಅಧ್ಯಕ್ಷ್ಯೆ ಮೆಹ್ಬೂಬಾ ಮುಫ್ತಿ ಹೇಳಿದ್ದಾರೆ.
 
ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ತೆಗೆದುಹಾಕುವ 2019 ರ ಆಗಸ್ಟ್ 5 ರ ನಿರ್ಧಾರ ಕಾನೂನು ಬಾಹಿರ ಎಂದು ಮೆಹಬೂಬಾ ಮುಫ್ತಿ ಹೇಳಿದ್ದಾರೆ. 

ಜಮ್ಮು-ಕಾಶ್ಮೀರ ಭಾರತದ ಭಾಗವಾಗಲು ಒಪ್ಪಿಗೆ ನೀಡಿದಾಗ ವಿಧಿಸಲಾಗಿದ್ದ ಷರತ್ತುಗಳನ್ನು ಮರುಸ್ಥಾಪಿಸಬೇಕು ಅಥವಾ ಜಮ್ಮು-ಕಾಶ್ಮೀರದಲ್ಲಿ ಭಾರತದ ಇರುವಿಕೆ ಅಕ್ರಮವಾಗಲಿದೆ. 1947 ರಲ್ಲಿ ಸೇರ್ಪಡೆಯ ಸಂದರ್ಭದ ಖಾತ್ರಿಗಳನ್ನು ನಮ್ಮಿಂದ ಕಸಿದುಕೊಳ್ಳುವುದಕ್ಕೆ ಸಾಧ್ಯವಿಲ್ಲ. ಅದನ್ನು ಯಾರಾದರೂ ಅನ್ಯಾಯವಾಗಿ ಕಸಿದುಕೊಂಡಿದ್ದೇ ಆದಲ್ಲಿ ಬಿಜೆಪಿ ಮತ್ತೊಮ್ಮೆ ಹೊಸದಾಗಿ ಜಮ್ಮು-ಕಾಶ್ಮೀರವನ್ನು ಭಾರತದೊಂದಿಗೆ ಸೇರ್ಪಡೆಗೊಳಿಸಿಕೊಳ್ಳಬೇಕಾಗುತ್ತದೆ. ಆಗ ಷರತ್ತುಗಳು ಇರಲಿವೆ ನನಗೆ ಗೊತ್ತಿಲ್ಲ ಎಂದು ಮೆಹಬೂಬಾ ಮುಫ್ತಿ ಪಕ್ಷದ ಕಚೇರಿಯಲ್ಲಿ ಹೇಳಿದ್ದಾರೆ. 

ಒಂದು ಮುಸ್ಲಿಮ್ ಬಹುಸಂಖ್ಯಾತ ರಾಜ್ಯವಿದ್ದು, ಅದನ್ನು ನೋಡಿಕೊಳ್ಳುವುದಕ್ಕೆ ಸಾಧ್ಯವಿಲ್ಲವೇ? ಎಂದು ಮುಫ್ತಿ ಪ್ರಶ್ನಿಸಿದ್ದು, ಬಿಜೆಪಿ ವಿರುದ್ಧ ಜಮ್ಮು-ಕಾಶ್ಮೀರವನ್ನು ಹಾಳು ಮಾಡುತ್ತಿರುವ ಆರೋಪ ಮಾಡಿದ್ದಾರೆ. 

ಭಾರತದೊಂದಿಗೆ ನಮ್ಮ ಸಂಬಂಧ ಸೇರ್ಪಡೆಯ ಸಾಧನದ ಆಧಾರದಲ್ಲಿತ್ತು ಆದರೆ ಅದನ್ನು ಈಗ ನೀವು ಗನ್, ಸೇನೆ, ಪಿಎಸ್ಎ, ಯುಎಪಿಎ, ಇಡಿ ಆಧಾರದಲ್ಲಿರಿಸಿಕೊಂಡಿದ್ದೀರ, ಇದನ್ನೇ ಎಷ್ಟು ಮುಂದುವರೆಸಲು ಸಾಧ್ಯ ಎಂದು ಮುಫ್ತಿ ಪ್ರಶ್ನಿಸಿದ್ದಾರೆ.
 

SCROLL FOR NEXT