ದೇಶ

ಅಪಹರಣ ಆರೋಪ: ನೂತನ ಖಾತೆ ಹಂಚಿಕೆ ಬೆನ್ನಲ್ಲೇ ಬಿಹಾರ ಸಚಿವ ಕಾರ್ತಿಕ್ ರಾಜೀನಾಮೆ; ಮೊದಲ ವಿಕೆಟ್ ಪತನ-ಬಿಜೆಪಿ ಟೀಕೆ

Shilpa D

ಪಾಟ್ನಾ: 2014ರ ಅಪಹರಣ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಬಿಹಾರದ ಸಚಿವ ಕಾರ್ತಿಕ್ ಕುಮಾರ್, ವಿರೋಧ ಪಕ್ಷಗಳ ತೀವ್ರ ಒತ್ತಡದ ನಡುವೆ ಬುಧವಾರ ರಾತ್ರಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಸರ್ಕಾರದಲ್ಲಿ ಆರ್‌ಜೆಡಿ ಎಂಎಲ್‌ಸಿ ಕಾರ್ತಿಕ್ ಕುಮಾರ್ ಅವರು ಕಾನೂನು ಸಚಿವರಾಗಿದ್ದರು. ಆದರೆ ಕಬ್ಬು ಉದ್ಯಮ ಸಚಿವರಾಗಿ ಖಾತೆ ಬದಲಾಯಿಸಿದ್ದ ಕೆಲವೇ ಗಂಟೆಗಳಲ್ಲಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಸಚಿವರ ರಾಜೀನಾಮೆ ಪತ್ರವನ್ನು ಬಿಹಾರ ರಾಜ್ಯಪಾಲರು ಅಂಗೀಕರಿಸಿದ್ದಾರೆ. ಕಂದಾಯ ಸಚಿವ ಅಲೋಕ್ ಕುಮಾರ್ ಮೆಹ್ತಾ ಅವರಿಗೆ ಕಬ್ಬು ಉದ್ಯಮ ಸಚಿವಾಲಯದ ಹೆಚ್ಚುವರಿ ಹೊಣೆ ವಹಿಸಲಾಗಿದೆ.

ಕಾರ್ತಿಕ್ ಕುಮಾರ್ ರಾಜೀನಾಮೆಯ ನಂತರ,  ನಿತೀಶ್ ಕುಮಾರ್ ವಿರುದ್ಧ ಬಿಜೆಪಿಯ ಹಿರಿಯ ನಾಯಕ ಸುಶೀಲ್ ಕುಮಾರ್ ಮೋದಿ ಹರಿಹಾಯ್ದಿದ್ದಾರೆ.  ಬಿಹಾರದಲ್ಲಿ ಮಹಾಮೈತ್ರಿಕೂಟದ ಮೇಲೆ ವಾಗ್ದಾಳಿ ನಡೆಸಿದ ಅವರು. ಮೊದಲ ವಿಕೆಟ್ ಈಗಷ್ಟೇ ಬಿದ್ದಿದೆ. ಇನ್ನು ಹಲವು ವಿಕೆಟ್‌ಗಳು ಪತನವಾಗಲಿವೆ ಎಂದು ಟ್ವೀಟ್ ಮಾಡಿದ್ದಾರೆ.

SCROLL FOR NEXT