ದೇಶ

ಉದ್ಧವ್ ಠಾಕ್ರೆಗೆ ಪಾಠ ಕಲಿಸುವ ಅಗತ್ಯವಿದೆ: ಅಮಿತ್ ಶಾ

Nagaraja AB

ಮುಂಬೈ: ಬಿಜೆಪಿಗೆ ದ್ರೋಹ ಬಗೆದಿರುವ ಶಿವಸೇನಾ ಮುಖಂಡ ಉದ್ಧವ್ ಠಾಕ್ರೆಗೆ ಪಾಠ ಕಲಿಸಬೇಕಾಗಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ. ಬಿಜೆಪಿ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ರಾಜಕೀಯದಲ್ಲಿ ನಾವು ಏನು ಬೇಕಾದರೂ ಸಹಿಸಬಹುದು ಆದರೆ ದ್ರೋಹವನ್ನು ಸಹಿಸಲು ಆಗದು ಎಂದು ಅಮಿತ್ ಶಾ ಸಭೆಯಲ್ಲಿ ಗುಡುಗಿದ್ದಾಗಿ ಮೂಲಗಳು ತಿಳಿಸಿವೆ.

ಶಿವಸೇನೆ ಇಬ್ಬಾಗಕ್ಕೆ ಉದ್ದವ್ ಠಾಕ್ರೆ ಕಾರಣ, ಅವರ ದುರಾಸೆಯಿಂದ ಸೇನೆಯ ಕೆಲ ಶಾಸಕರು ತಿರುಗಿ ಬೀಳುವ ಮೂಲಕ ಮಹಾ ವಿಕಾಸ್ ಆಘಾದಿ ಸರ್ಕಾರವನ್ನು ಪತನಗೊಳಿಸಿದ್ದಾಗಿ ಅಮಿತ್ ಶಾ ಹೇಳಿದ್ದಾರೆ. ಉದ್ದವ್ ಠಾಕ್ರೆ ಬಿಜೆಪಿಗೆ ಮಾತ್ರ ದ್ರೋಹ ಬಗೆದಿಲ್ಲ, ಸಿದ್ಧಾಂತಕ್ಕೆ ದ್ರೋಹ ಬಗೆದಿದ್ದಾರೆ ಮತ್ತು ಮಹಾರಾಷ್ಟ್ರ ಜನಾದೇಶಕ್ಕೆ ಅವಮಾನಿಸಿದ್ದಾರೆ ಎಂದು ಆರೋಪಿಸಿದರು. 

ಉದ್ದವ್ ಠಾಕ್ರೆಯ ಅಧಿಕಾರದ ದುರಾಸೆ ಯಿಂದ ಇಂದು ಅವರ ಪಕ್ಷ ಕುಗ್ಗಿದೆ. ಬಿಜೆಪಿಯಿಂದ ಅಲ್ಲ, ಉದ್ಧವ್ ಠಾಕ್ರೆಗೆ ಮುಖ್ಯಮಂತ್ರಿ ಹುದ್ದೆ ಭರವಸೆಯನ್ನು ಎಂದಿಗೂ ನಾವು ನೀಡಿರಲಿಲ್ಲ ಎಂದು ಇಂದು ನಾನು ಮತ್ತೊಮ್ಮೆ ಹೇಳಲು ಬಯಸುತ್ತೇನೆ. ನಾವು ಬಹಿರಂಗವಾಗಿ ರಾಜಕೀಯ ಮಾಡುತ್ತೀವಿ ಆದರೆ, ಬಾಗಿಲು ಹಾಕಿದ ಕೊಠಡಿಯಲ್ಲಿ ರಾಜಕೀಯ ಮಾಡಲ್ಲ ಎಂದು ಅಮಿತ್ ಶಾ ಹೇಳಿದ್ದಾರೆ.

ರಾಜಕೀಯದಲ್ಲಿ ಮೋಸ ಮಾಡುವವರಿಗೆ ಶಿಕ್ಷೆಯಾಗಬೇಕು, ಮುಂಬೈನಲ್ಲಿ ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮಿಷನ್ 150 ಗುರಿ ಸಾಧಿಸಬೇಕು ಎಂದು ಅಮಿತ್ ಶಾ ಹೇಳಿರುವುದಾಗಿ ಮೂಲಗಳು ವರದಿ ಮಾಡಿವೆ.
 

SCROLL FOR NEXT