ದೇಶ

ಶಾಸಕ ಜಿಗ್ನೇಶ್ ಮೇವಾನಿ, ಇತರ 19 ಮಂದಿಗೆ 6 ತಿಂಗಳ ಜೈಲು ಶಿಕ್ಷೆ

Lingaraj Badiger

ಅಹಮದಾಬಾದ್: 2016 ರ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ಜಿಗ್ನೇಶ್ ಮೇವಾನಿ ಮತ್ತು ಇತರ 19 ಆರೋಪಿಗಳು ತಪ್ಪಿತಸ್ಥರು ಎಂದು ಶುಕ್ರವಾರ ತೀರ್ಪು ನೀಡಿದ ಅಹಮದಾಬಾದ್ ನ್ಯಾಯಾಲಯ, ಅವರಿಗೆ ಆರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ.

ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ಕೋರ್ಟ್, ಐಪಿಸಿಯ ಮೂರು ವಿಭಿನ್ನ ಸೆಕ್ಷನ್‌ಗಳ ಅಡಿಯಲ್ಲಿ ಮೂರು ವಿಭಿನ್ನ ಶಿಕ್ಷೆಗಳನ್ನು ನೀಡಿದ್ದು, ಒಂದರ ಅಡಿಯಲ್ಲಿ ಆರು ತಿಂಗಳ ಜೈಲು, ಮತ್ತೊಂದರ ಅಡಿಯಲ್ಲಿ 500 ರೂಪಾಯಿ ದಂಡ ಮತ್ತು ಮೂರನೆ ಸೆಕ್ಷನ್ ಅಡಿ 100 ರೂಪಾಯಿ ದಂಡ ವಿಧಿಸಲಾಗಿದೆ.

2016ರಲ್ಲಿ, ಮೇವಾನಿ ಮತ್ತು ಇತರರು ಗುಜರಾತ್ ವಿಶ್ವವಿದ್ಯಾಲಯದ ಕಾನೂನು ವಿಭಾಗಕ್ಕೆ ಡಾ ಬಾಬಾಸಾಹೇಬ್ ಅಂಬೇಡ್ಕರ್ ಭವನ ಎಂದು ಹೆಸರಿಡಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಆವರಣವನ್ನು ಧ್ವಂಸಗೊಳಿಸಲಾಗಿತ್ತು.  ನಂತರ ಎಲ್ಲಾ ಪ್ರತಿಭಟನಾಕಾರರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.

ಈ ಪ್ರತಿಭಟನೆಗೆ ಸಂಬಂಧಿಸಿದಂತೆ ಜಿಗ್ನೇಶ್ ಮೇವಾನಿ ಮತ್ತು ಇತರ 19 ಮಂದಿ ವಿರುದ್ಧ ಪ್ರಕರಣ ದಾಖಲಾಗಿತ್ತು.

SCROLL FOR NEXT