ಲಾಲ್‌ಬಾಗ್ಚಾ ರಾಜಾ ಗಣೇಶೋತ್ಸವ 
ದೇಶ

ಮುಂಬೈನ ಪ್ರತಿಷ್ಠಿತ ಲಾಲ್‌ಬಾಗ್ಚಾ ರಾಜಾ ಗಣೇಶ ಸಮಿತಿಗೆ 3.66 ಲಕ್ಷ ರೂ ದಂಡ..!; ಕಾರಣ ಏನು ಗೊತ್ತಾ?

ದೇಶದ ಪ್ರತಿಷ್ಠಿಕ ಗಣೇಶೋತ್ಸವ ಸಮಿತಿಗಳಲ್ಲಿ ಒಂದಾದ ಮುಂಬೈನ ಪ್ರತಿಷ್ಠಿತ ಲಾಲ್‌ಬಾಗ್ಚಾ ರಾಜಾ ಗಣೇಶ ಸಮಿತಿಗೆ ಬೃಹನ್ ಮುಂಬೈ ಮಹಾನಗರ ಪಾಲಿಕೆ ಬರೊಬ್ಬರಿ 3.66 ಲಕ್ಷ ರೂ ದಂಡ ವಿಧಿಸಿದೆ.

ಮುಂಬೈ: ದೇಶದ ಪ್ರತಿಷ್ಠಿಕ ಗಣೇಶೋತ್ಸವ ಸಮಿತಿಗಳಲ್ಲಿ ಒಂದಾದ ಮುಂಬೈನ ಪ್ರತಿಷ್ಠಿತ ಲಾಲ್‌ಬೌಚಾ ರಾಜಾ ಗಣೇಶ ಸಮಿತಿಗೆ ಬೃಹನ್ ಮುಂಬೈ ಮಹಾನಗರ ಪಾಲಿಕೆ ಬರೊಬ್ಬರಿ 3.66 ಲಕ್ಷ ರೂ ದಂಡ ವಿಧಿಸಿದೆ.

ಈ ವರ್ಷ ಗಣೇಶೋತ್ಸವದ ವೇಳೆ  ಲಾಲ್‌ಬಾಗ್ಚಾ ರಾಜಾ ಗಣೇಶ ಸಮಿತಿ ರಸ್ತೆಯಲ್ಲಿ ಗುಂಡಿಗಳ ಸೃಷ್ಟಿಗೆ ಕಾರಣವಾದ ಹಿನ್ನಲೆಯಲ್ಲಿ ಬಿಎಂಸಿ ಸಮತಿಗೆ ಭಾರಿ ಪ್ರಮಾಣದ ದಂಡ ವಿಧಿಸಿದೆ. ಈ ಬಾರಿಯ ಗಣೇಶೋತ್ಸವ ವೇಳೆ ಲಾಲ್‌ಬಾಗ್ಚಾ ರಾಜಾ ಗಣೇಶ ಸಮಿತಿ ರಸ್ತೆಗಳಲ್ಲಿ 183 ಗುಂಡಿಗಳ ಸೃಷ್ಟಿಸಿಗೆ ಕಾರಣವಾಗಿತ್ತು. ಇದೇ ಕಾರಣಕ್ಕೆ ಮುಂಬೈನ ನಾಗರಿಕ ಸಂಸ್ಥೆಯಾದ ಬೃಹನ್‌ಮುಂಬೈ ಮುನ್ಸಿಪಲ್ ಕಾರ್ಪೊರೇಷನ್ ಲಾಲ್‌ಬೌಚಾ ರಾಜಾ ಸಾರ್ವಜನಿಕ ಗಣೇಶೋತ್ಸವ ಮಂಡಳಿಗೆ 3.66 ಲಕ್ಷ ರೂಪಾಯಿ ದಂಡ ವಿಧಿಸಿದೆ. ಪ್ರತಿ ಗುಂಡಿಗೆ 2000 ರೂಪಾಯಿ ನಂತೆ ದಂಡ ವಿಧಿಸಲಾಗುವುದು ಎಂದು ಬಿಎಂಸಿ ತಿಳಿಸಿದೆ.

ಲಾಲ್‌ಬಾಗ್ಚಾ ರಾಜಾ ನಗರದಲ್ಲಿರುವ ಪ್ರಮುಖ ಗಣೇಶ ಮಂಡಲಗಳಲ್ಲಿ ಒಂದಾಗಿದ್ದು, ಹತ್ತು ದಿನಗಳ ಕಾಲ ನಡೆಯುವ ಉತ್ಸವದಲ್ಲಿ ರಾಜ್ಯ ಮತ್ತು ದೇಶಾದ್ಯಂತ ಭಕ್ತರನ್ನು ಆಕರ್ಷಿಸುತ್ತದೆ. ಉತ್ಸವ ಮುಗಿದ ನಂತರ BMC ಅಧಿಕಾರಿಗಳು ರಸ್ತೆಗಳ ಪರಿಶೀಲನೆ ನಡೆಸುತ್ತಾರೆ, ಸಂಘಟನಾ ಸಮಿತಿಗಳು ಅಥವಾ ಮಂಡಲಗಳು ಬಿದಿರಿನ ಕಡ್ಡಿಗಳನ್ನು ನೆಡುವ ಉದ್ದೇಶದಿಂದ ರಸ್ತೆಗಳನ್ನು ಅಗೆಯುವ ಮೂಲಕ ಮತ್ತು ಪ್ಯಾಂಡಲ್‌ಗಳ ಸುತ್ತಮುತ್ತ ಬ್ಯಾರಿಕೇಡ್‌ಗಳನ್ನು ಸ್ಥಾಪಿಸುವ ಮೂಲಕ ರಸ್ತೆಗಳನ್ನು ಹಾಳುಮಾಡಿದ್ದಾರೆಯೇ ಎಂದು ಪರಿಶೀಲಿಸುತ್ತಾರೆ.

ಈ ಪರಿಶೀಲನೆ ಬಳಿಕ ಲಾಲ್‌ಬೌಚಾ ರಾಜಾ ಗಣೇಶ ಸಮಿತಿಗೆ 3.66 ಲಕ್ಷ ರೂ ದಂಡ ವಿಧಿಸಲಾಗಿದೆ ಎಂದು ಸಮಿತಿ ಸದಸ್ಯರೊಬ್ಬರು ತಿಳಿಸಿದ್ದಾರೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಕ್ಸಿ ಜಿನ್‌ಪಿಂಗ್ ಜತೆ ಮಾತುಕತೆ: ಗಡಿಯಾಚೆಗಿನ ಭಯೋತ್ಪಾದನೆ ಬಗ್ಗೆ ಪ್ರಧಾನಿ ಮೋದಿ ಪ್ರಸ್ತಾಪ

ಜನರನ್ನು ಮೂರ್ಖರನ್ನಾಗಿಸುವವನೇ ಶ್ರೇಷ್ಠ ನಾಯಕ: ಕೇಂದ್ರ ಸಚಿವ ನಿತಿನ್ ಗಡ್ಕರಿ

ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಶ್ರಮಿಸುವ 'ಎಜುಕೇಟ್ ಗರ್ಲ್ಸ್' NGOಗೆ ಪ್ರತಿಷ್ಠಿತ ಮ್ಯಾಗ್ಸೆಸೆ ಪ್ರಶಸ್ತಿ

Rain Alert: ರಾಜ್ಯಾದ್ಯಂತ ಮುಂದಿನ 5 ದಿನ ಭಾರಿ ಮಳೆ; ಬೆಂಗಳೂರು, ಕರಾವಳಿ ಕರ್ನಾಟಕಕ್ಕೆ ಹವಾಮಾನ ಇಲಾಖೆ ಎಚ್ಚರಿಕೆ!

ಬೆಂಗಳೂರು: ಪಿಜಿಯಲ್ಲಿ ಮಲಗಿದ್ದ ಯುವತಿಗೆ ಲೈಂಗಿಕ ಕಿರುಕುಳ, ನಗದು ದೋಚಿ ಪರಾರಿ!

SCROLL FOR NEXT