ದೇಶ

ಭಾರತೀಯ ವಿದ್ಯಾರ್ಥಿಗಳಿಗೆ ಭಾರತದಿಂದಲೇ ವೈದ್ಯಕೀಯ ಪರೀಕ್ಷೆ ಬರೆಯಲು ಉಕ್ರೇನ್ ಅವಕಾಶ

Lingaraj Badiger

ನವದೆಹಲಿ: ಫೆಬ್ರುವರಿ 24, 2022 ರಂದು ರಷ್ಯಾದೊಂದಿಗೆ ಸಂಘರ್ಷ ಪ್ರಾರಂಭವಾಗುವ ಮೊದಲು ಉಕ್ರೇನ್‌ನಲ್ಲಿ ಅಧ್ಯಯನ ಮಾಡುತ್ತಿದ್ದ 20,000 ಕ್ಕೂ ಹೆಚ್ಚು ಭಾರತೀಯ ವೈದ್ಯಕೀಯ ವಿದ್ಯಾರ್ಥಿಗಳಿಗೆ ಭಾರತದಿಂದಲೇ ಏಕೀಕೃತ ಅರ್ಹತಾ ಪರೀಕ್ಷೆ ತೆಗೆದುಕೊಳ್ಳಲು ಅನುಮತಿಸಲಾಗಿದೆ.

ಇತ್ತೀಚೆಗೆ ಉಕ್ರೇನ್ ಉಪ ವಿದೇಶಾಂಗ ಸಚಿವ ಎಮಿನೆ ಝಪರೋವಾ ಅವರು ದೆಹಲಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಇದನ್ನು ಘೋಷಿಸಿದ್ದರು.

"ಉಕ್ರೇನ್‌ನ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಓದುತ್ತಿದ್ದ ನನ್ನಂತಹ ಅನೇಕ ವಿದ್ಯಾರ್ಥಿಗಳು ತಮ್ಮ ಪದವಿಯನ್ನು ಹೇಗೆ ಪೂರ್ಣಗೊಳಿಸಬೇಕು ಎಂಬ ಚಿಂತೆಯಲ್ಲಿದ್ದವರಿಗೆ ಇದು ಉತ್ತಮ ಸುದ್ದಿಯಾಗಿದೆ” ಎಂದು ಖಾರ್ಖಿವ್‌ನಲ್ಲಿ ಓದುತ್ತಿದ್ದ ಮೂರನೇ ವರ್ಷದ ವೈದ್ಯಕೀಯ ವಿದ್ಯಾರ್ಥಿ ಅರ್ಮಾನ್ ಅವರು ಹೇಳಿದ್ದಾರೆ.

ಏತನ್ಮಧ್ಯೆ, ಉಕ್ರೇನ್, ಭಾರತದಿಂದ ಮಾನವೀಯ ನೆರವು ಕೋರಿದ್ದು, ವಿದೇಶಾಂಗ ಕಾರ್ಯದರ್ಶಿ(ಎಂಇಎ) ಅವರೊಂದಿಗೆ ನಡೆಸಿದ ಸಂವಾದದ ಸಮಯದಲ್ಲಿ, ಇತರ ವಿಷಯಗಳ ಜೊತೆಗೆ ಹೆಚ್ಚಿನ ಮಾನವೀಯ ನೆರವು ವಿಸ್ತರಿಸುವ ಕುರಿತು ಝಪರೋವಾ ಅವರು ಚರ್ಚೆ ನಡೆಸಿದರು" ಎಂದು ಎಂಇಎ ತಿಳಿಸಿದೆ.

ಭಾರತ ಈಗಾಗಲೇ ಔಷಧಿ ಮತ್ತು ವೈದ್ಯಕೀಯ ಉಪಕರಣಗಳ ರೂಪದಲ್ಲಿ ಉಕ್ರೇನ್ ಗೆ ಮಾನವೀಯ ನೆರವು ನೀಡಿದೆ ಮತ್ತು ಶಾಲಾ ಬಸ್ಸುಗಳನ್ನು ಒದಗಿಸುವ ಬಗ್ಗೆ ಸಹ ಮಾತನಾಡಿದೆ. ಮೂಲಸೌಕರ್ಯ ಮರುನಿರ್ಮಾಣದಲ್ಲಿ ಉಕ್ರೇನ್ ಭಾರತದ ಸಹಾಯ ಬಯಸುತ್ತಿದೆ.

SCROLL FOR NEXT