ದೇಶ

ಮೆದುಳಿನ ಶಸ್ತ್ರಚಿಕಿತ್ಸೆಗೊಳಗಾಗಿರುವ ಮುಕುಲ್ ರಾಯ್ ಗೆ ಪಾರ್ಕಿನ್ಸನ್, ಮರೆವಿವ ರೋಗ ಇದೆ: ವೈದ್ಯರು

Srinivas Rao BV

ಕೋಲ್ಕತ್ತ: ಬಂಗಾಳದಲ್ಲಿ ಬಿಜೆಪಿ- ಟಿಎಂಸಿ ನಡುವೆ ಕಳೆದ ಕೆಲವು ವರ್ಷಗಳಲ್ಲಿ ಪಕ್ಷಾಂತರ ಮಾಡಿದ್ದ ಪ್ರಮುಖ ರಾಜಕಾರಣಿ ಮುಕುಲ್ ರಾಯ್ ಪಾರ್ಕಿನ್ಸನ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ನರವೈಜ್ಞಾನಿಕ ಅಸ್ವಸ್ಥತೆ ಎದುರಿಸುತ್ತಿದ್ದ ಅವರಿಗೆ ಕಳೆದ ತಿಂಗಳು ಮೆದುಳಿನ ಶಸ್ತ್ರಚಿಕಿತ್ಸೆ ನಡೆದಿದೆ ಎಂದು ಚಿಕಿತ್ಸೆ ನೀಡುತ್ತಿದ್ದ ವೈದ್ಯರು ತಿಳಿಸಿದ್ದಾರೆ.

ದೈಹಿಕವಾಗಿ ಮುಕುಲ್ ರಾಯ್ ಚೇತರಿಸಿಕೊಂಡರೂ, ಅವರ ಮಾನಸಿಕ ಕಾರ್ಯನಿರ್ವಹಣೆಯ ಸುಧಾರಣೆಯ ಬಗ್ಗೆ ವೈದ್ಯರು ಖಚಿತವಾಗಿ ಏನನ್ನೂ ಹೇಳಿಲ್ಲ. ರಾಯ್ ಅವರು ಜಲಮಸ್ತಿಷ್ಕ (ಮೆದುಳಿನಲ್ಲಿ ಒಂದು ರೀತಿಯ ದ್ರವ ತುಂಬಿಕೊಳ್ಳುವ ಸಮಸ್ಯೆ) ರೋಗಕ್ಕೆ ಶಸ್ತ್ರಚಿಕಿತ್ಸೆಗೆ ಒಳಗಾದರು, ಈ ಸ್ಥಿತಿಯು ಮೆದುಳಿನಲ್ಲಿ ದ್ರವವು ಸಂಗ್ರಹಗೊಳ್ಳುತ್ತದೆ, ಇದು ಮೆದುಳಿಗೆ ಹಾನಿಯನ್ನುಂಟುಮಾಡುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ.

ರಾಯ್ ಅವರ ದೈಹಿಕ ಸ್ಥಿತಿ ಒಂದು ತಿಂಗಳ ಹಿಂದಿನ ಸ್ಥಿತಿಗಿಂತಲೂ ಈಗ ಸುಧಾರಿಸಿದೆ. ಆದರೆ ಅವರು ಸಂಚರಿಸಲು ದೈಹಿಕವಾಗಿ ಸದೃಢರಾಗಿದ್ದಾರೆ. ಆದರೆ ಡಿಮ್ನಿಷಿಯಾ ಸಮಸ್ಯೆಯನ್ನು ಸಂಪೂರ್ಣವಾಗಿ ಗುಣ ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ಖ್ಯಾತ ನರಶಸ್ತ್ರಚಿಕಿತ್ಸಕ ಡಾ ಎಸ್ಎನ್  ಸಿಂಗ್ ಹೇಳಿದ್ದಾರೆ. 

SCROLL FOR NEXT