ದೇಶ

"ಮಹಾ" ರಾಜಕೀಯ ಬೆಳವಣಿಗೆ: ಅಜಿತ್ ಪವಾರ್ ಗೆ ಬಿಜೆಪಿ ಬೆಂಬಲದ ಬಗ್ಗೆ ಶಿಂಧೆ ಬಣ ಏನೆನ್ನುತ್ತಿದೆ ಗೊತ್ತೇ?

Srinivas Rao BV

ಮುಂಬೈ: ಮಹಾರಾಷ್ಟ್ರದಲ್ಲಿ ಏಕನಾಥ್ ಶಿಂಧೆ ನೇತೃತ್ವದ ಸರ್ಕಾರವನ್ನು ಉರುಳಿಸಿ, ಹೊಸ ಮುಖ್ಯಮಂತ್ರಿಯನ್ನಾಗಿ ಎನ್ ಸಿಪಿಯ ಅಜಿತ್ ಪವಾರ್ ಅವರನ್ನು ಆಯ್ಕೆ ಮಾಡುವ ಲಕ್ಷಣಗಳು ಗೋಚರಿಸುತ್ತಿರುವುದರ ನಡುವೆ ಶಿವಸೇನೆ ಬಣ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ. 

ಶಿವಸೇನೆಯ ಮುಖ್ಯ ಸಚೇತಕ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಪವಾರ್ ಗೆ ಬಿಜೆಪಿ ಬೆಂಬಲ ನೀಡುವುದು ಬಿಜೆಪಿ-ಶಿವಸೇನೆಯ ಮೈತ್ರಿಗೆ ವಿರುದ್ಧವಾದದ್ದು ಎಂದು ಹೇಳಿದ್ದಾರೆ.

ಇದನ್ನೂ ಓದಿ: ಅಜಿತ್ ಪವಾರ್ ಬಿಜೆಪಿಯೊಂದಿಗೆ ಹೋಗುವ ಊಹಾಪೋಹಗಳ ಬಗ್ಗೆ ಶರದ್ ಪವಾರ್ ಪ್ರತಿಕ್ರಿಯೆ: ಕಠಿಣ ಸಂದೇಶ ರವಾನೆ
 
"ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಾಗ, 2024 ರ ಚುನಾವಣೆಯವರೆಗೂ ಶಿಂಧೆ ಅವರೇ ಸಿಎಂ ಆಗಿರುತ್ತಾರೆ ಎಂದು ನಿರ್ಧರಿಸಲಾಗಿತ್ತು.  ಈಗ ಯಾವುದೇ ಪರಿಸ್ಥಿತಿಯಲ್ಲೂ ಅಜಿತ್ ಪವಾರ್ ಸಿಎಂ ಆಗುವುದಕ್ಕೆ ನಾವು ಬಿಡುವುದಿಲ್ಲ. ಮೈತ್ರಿ ವೇಳೆ ನೀಡಿದ್ದ ಮಾತನ್ನು ಉಳಿಸಿಕೊಳ್ಳಬೇಕು ಎಂದು ಶಿವಸೇನೆ ನಾಯಕ ಭರತ್ ಗೊಗವಾಲೆ ತಿಳಿಸಿದ್ದಾರೆ.

SCROLL FOR NEXT