ಸಾಂದರ್ಭಿಕ ಚಿತ್ರ 
ದೇಶ

ಆಗ್ರಾ: ಪ್ರಸಾದ ವಿತರಿಸುತ್ತಿದ್ದ ವೇಳೆ ದೇವಸ್ಥಾನದ ಛಾವಣಿ ಕುಸಿದು ಬಾಲಕಿ ಸಾವು, 8 ಮಂದಿಗೆ ಗಾಯ

ಉತ್ತರ ಪ್ರದೇಶದ ಆಗ್ರ ಜಿಲ್ಲೆಯ ಶಹಗಂಜ್ ಪ್ರದೇಶದಲ್ಲಿ ಸೋಮವಾರ ಶಿವ ದೇವಸ್ಥಾನದ ಒಂದು ಭಾಗದ ಛಾವಣಿ ಕುಸಿದು ಬಿದ್ದು 17 ವರ್ಷದ ಬಾಲಕಿ ಸಾವನ್ನಪ್ಪಿದ್ದಾರೆ ಮತ್ತು ಎಂಟು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಆಗ್ರಾ: ಉತ್ತರ ಪ್ರದೇಶದ ಆಗ್ರ ಜಿಲ್ಲೆಯ ಶಹಗಂಜ್ ಪ್ರದೇಶದಲ್ಲಿ ಸೋಮವಾರ ಶಿವ ದೇವಸ್ಥಾನದ ಒಂದು ಭಾಗದ ಛಾವಣಿ ಕುಸಿದು ಬಿದ್ದು 17 ವರ್ಷದ ಬಾಲಕಿ ಸಾವನ್ನಪ್ಪಿದ್ದಾರೆ ಮತ್ತು ಎಂಟು ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳೀಯರು ಮತ್ತು ಕನ್ವಾರಿಯಾದವರಿಗೆ ಪ್ರಸಾದ ವಿತರಿಸುತ್ತಿದ್ದ ವೇಳೆ ದೇವಸ್ಥಾನದ ವರಾಂಡದ ಮೇಲ್ಛಾವಣಿ ಕುಸಿದು ಬಿದ್ದಿದೆ.

ಬೆಳಗ್ಗೆ 8 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದ, ಅವಶೇಷಗಳಡಿ ಸಿಲುಕಿದ್ದ ಹಲವಾರು ಜನರನ್ನು ರಕ್ಷಿಸಿ ನಗರದ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಉಪ ಪೊಲೀಸ್ ಆಯುಕ್ತ(ನಗರ) ಸೂರಜ್ ಕುಮಾರ್ ರೈ ತಿಳಿಸಿದ್ದಾರೆ.

ಮೃತ ಬಾಲಕಿಯನ್ನು ಜ್ಯೋತಿ ಎಂದು ಗುರುತಿಸಲಾಗಿದ್ದು, ಗಾಯಾಳುಗಳನ್ನು ಪೊಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಈಗಾಗಲೇ ದುರ್ಬಲವಾಗಿದ್ದ ವರಾಂಡ, ಕಳೆದ ಕೆಲವು ದಿನಗಳಿಂದ ಮಳೆಯಿಂದ ಮತ್ತಷ್ಟು ಶೀತಿಲಾವಸ್ಥೆ ತಲುಪಿತ್ತು ಎಂದು ಕುಮಾರ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯೋಗ್ಯತಾ ಪರವಾನಗಿ ಇಲ್ಲದೆ ಎಂಟು ಬಾರಿ ವಿಮಾನ ಹಾರಾಟ: ಏರ್ ಇಂಡಿಯಾಕ್ಕೆ 1 ಕೋಟಿ ರೂ.ದಂಡ!

ಅಧಿಕಾರಿ ವರ್ಗಾವಣೆಗಾಗಿ ಸಿಎಂ ಸಿದ್ದರಾಮಯ್ಯರ ನಕಲಿ ಟಿಪ್ಪಣಿ: ಪೊಲೀಸ್ ಕೇಸ್ ದಾಖಲು!

ಬಾಬರ್‌ನ ಗೌರವಿಸಿ ವಂದೇ ಮಾತರಂ ವಿರೋಧಿಸುವವರಿಗೆ ಭಾರತದಲ್ಲಿ ನೆಲೆಸುವ ಹಕ್ಕಿಲ್ಲ: ಸಿಎಂ ಯೋಗಿ ಆದಿತ್ಯನಾಥ್

ಹೊಸ PMO ಕಚೇರಿ 'ಸೇವಾ ತೀರ್ಥ' ಕಟ್ಟಡಕ್ಕೆ ಪ್ರಧಾನಿ ಮೋದಿ ಸ್ಥಳಾಂತರ: ಮೊದಲ ದಿನವೇ ಹಲವು ಪ್ರಮುಖ ನಿರ್ಧಾರ!

ಸಾಹಸಸಿಂಹ, ಏಜೆಂಟ್ ಅಮರ್ ಚಿತ್ರ ಖ್ಯಾತಿಯ ನಿರ್ದೇಶಕ ಜೋ ಸೈಮನ್ ಹೃದಯಾಘಾತದಿಂದ ನಿಧನ

SCROLL FOR NEXT