ರಾಜ್ಯಸಭೆ ಕಲಾಪ (ಸಂಗ್ರಹ ಚಿತ್ರ) 
ದೇಶ

ಡೆರೆಕ್ ಓ'ಬ್ರೇನ್ ಅಮಾನತುಗೊಂಡಿಲ್ಲ, ಸಂಸತ್ ಅಧಿವೇಶನದಲ್ಲಿ ಭಾಗಿಯಾಗಬಹುದು

ರಾಜ್ಯಸಭೆ ಕಲಾಪದಲ್ಲಿ ಟಿಎಂಸಿ ಸಂಸದ ಡೆರೆಕ್ ಓ'ಬ್ರೇನ್ ಅವರ ಅಮಾನತು ವಿಷಯವಾಗಿ ಗದ್ದಲ ಉಂಟಾಗಿತ್ತು. 

ನವದೆಹಲಿ: ರಾಜ್ಯಸಭೆ ಕಲಾಪದಲ್ಲಿ ಟಿಎಂಸಿ ಸಂಸದ ಡೆರೆಕ್ ಓ'ಬ್ರೇನ್ ಅವರ ಅಮಾನತು ವಿಷಯವಾಗಿ ಗದ್ದಲ ಉಂಟಾಗಿತ್ತು. 

ಮೊದಲು ಸಭಾಧ್ಯಕ್ಷರು ಡೆರೆಕ್ ಓ'ಬ್ರೇನ್ ಅವರು ಸದನದಿಂದ ಹೊರನಡೆಯಬೇಕು ಎಂದು ಹೇಳಿದವರು, ಆ ನಂತರ ಡೆರೆಕ್ ಓ'ಬ್ರೇನ್ ಅವರನ್ನು ಅಮಾನತುಗೊಳಿಸುವ ಪ್ರಸ್ತಾವನೆಯನ್ನು ಮತಕ್ಕೆ ಹಾಕಿಲ್ಲ. ಅವರು ಕಲಾಪದಲ್ಲಿ ಭಾಗಿಯಾಗಬಹುದು ಎಂದು ಸ್ಪಷ್ಟನೆ ನೀಡಿದರು. 

ತಾವು ದೂರದೃಷ್ಟಿಯಿಂದ, ಡೆರೆಕ್ ಓ'ಬ್ರೇನ್ ಅವರನ್ನು ಅಮಾನತುಗೊಳಿಸುವ ಪ್ರಸ್ತಾವನೆಯನ್ನು ಮತಕ್ಕೆ ಹಾಕದೇ ಇರುವ ನಿರ್ಧಾರ ಕೈಗೊಂಡಿರುವುದಾಗಿ ರಾಜ್ಯಸಭೆಯ ಅಧ್ಯಕ್ಷರಾದ ಜಗದೀಪ್ ಧನ್ಕರ್ ಹೇಳಿದ್ದಾರೆ. 

ಟಿಎಂಸಿ ನಾಯಕ ಸದನದಲ್ಲಿ ಅಶಿಸ್ತಿನ ವರ್ತನೆ ತೋರಿದ್ದಕ್ಕಾಗಿ ಅವರನ್ನು ಅಮಾನತುಗೊಳಿಸಿರುವುದಾಗಿ ಜಗದೀಪ್ ಧನ್ಕರ್ ಹೇಳಿದ್ದರು. ಪ್ರಮೋದ್ ತಿವಾರಿ (ಕಾಂಗ್ರೆಸ್) ಸೇರಿದಂತೆ ಹಲವಾರು ಸದಸ್ಯರು ಒ'ಬ್ರಿಯಾನ್ ಬಗ್ಗೆ ಸೌಮ್ಯವಾದ ದೃಷ್ಟಿಕೋನವನ್ನು ತೆಗೆದುಕೊಳ್ಳುವಂತೆ ಅಧ್ಯಕ್ಷರನ್ನು ಒತ್ತಾಯಿಸಿದರು, ಆದರೆ ಅಧ್ಯಕ್ಷರು ಏಕೆ ಮೃದುತ್ವವನ್ನು ತೋರಿಸಬೇಕು ಎಂದು ಪ್ರಶ್ನಿಸಿದ್ದರು. 

"ಒ'ಬ್ರೇನ್ ಅವರನ್ನು ಈ ಅಧಿವೇಶನಕ್ಕೆ ಸದನದಿಂದ ಅಮಾನತುಗೊಳಿಸಿದ್ದರೆ, ಅವರಿಗೆ ಮತ್ತೆ ಸದನವನ್ನು ಪ್ರವೇಶಿಸಲು ಅವಕಾಶ ನೀಡಲಾಗುತ್ತಿತ್ತು ಎಂದು ನೀವು ಭಾವಿಸುತ್ತೀರಾ? ಅವರು ಮತ್ತೆ ಹಿಂತಿರುಗಬಹುದೇ?" ಯಾವುದೇ ಸದಸ್ಯರ ವಿರುದ್ಧ ಕ್ರಮ ಕೈಗೊಳ್ಳುವುದು ನನಗೆ ನೋವಿನ ಸಂಗತಿಯಾಗಿದೆ ಎಂದು ಅಧ್ಯಕ್ಷರು ಹೇಳಿದ್ದಾರೆ.

ನಿರ್ಣಯವನ್ನು ಸಂಪೂರ್ಣವಾಗಿ ಅಂಗೀಕರಿಸಿದ್ದರೆ, ಒ'ಬ್ರೇನ್ ಅವರಿಗೆ ಸದನ ಪ್ರವೇಶಿಸಲು ಸಾಧ್ಯವಾಗುತ್ತಿರಲಿಲ್ಲ. ಸದನವು ತೀವ್ರ ಮಟ್ಟದಲ್ಲಿ ನಡೆಯುವುದನ್ನು ಖಚಿತಪಡಿಸಿಕೊಳ್ಳುವುದು ನನ್ನ ಜವಾಬ್ದಾರಿಯಾಗಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT