ನೈಜರ್ ನಲ್ಲಿ ಸೇನಾ ಸಂಘರ್ಷ 
ದೇಶ

'ಆದಷ್ಟು ಬೇಗ ದೇಶ ತೊರೆಯಿರಿ': ನೈಜರ್ ನಲ್ಲಿರುವ ಭಾರತೀಯರಿಗೆ ಕೇಂದ್ರ ಸರ್ಕಾರ ಎಚ್ಚರಿಕೆ

ನೈಜರ್ ನಲ್ಲಿ ಆಂತರಿಕ ಸಂಘರ್ಷ ಉಲ್ಬಣಗೊಂಡಿರುವ ಹಿನ್ನಲೆಯಲ್ಲಿ ತತ್ ಕ್ಷಣವೇ ಆ ದೇಶ ತೊರೆಯುವಂತೆ ಅಲ್ಲಿರುವ ಭಾರತೀಯರಿಗೆ ಕೇಂದ್ರ ಸರ್ಕಾರ ಶುಕ್ರವಾರ ಎಚ್ಚರಿಕೆ ನೀಡಿದೆ.

ನವದೆಹಲಿ: ನೈಜರ್ ನಲ್ಲಿ ಆಂತರಿಕ ಸಂಘರ್ಷ ಉಲ್ಬಣಗೊಂಡಿರುವ ಹಿನ್ನಲೆಯಲ್ಲಿ ತತ್ ಕ್ಷಣವೇ ಆ ದೇಶ ತೊರೆಯುವಂತೆ ಅಲ್ಲಿರುವ ಭಾರತೀಯರಿಗೆ ಕೇಂದ್ರ ಸರ್ಕಾರ ಶುಕ್ರವಾರ ಎಚ್ಚರಿಕೆ ನೀಡಿದೆ.

ನೈಜರ್ ದೇಶದಲ್ಲಿರುವ ಭಾರತೀಯ ನಾಗರೀಕರಿಗ ತಕ್ಷಣವೇ ದೇಶ ತೊರೆಯುವಂತೆ ಭಾರತ ವಿದೇಶಾಂದ ಸಚಿವಾಲಯ ಸೂಚನೆ ನೀಡಿದ್ದು, ಇಷ್ಟೇ ಅಲ್ಲ ನೈಜರ್ ದೇಶಕ್ಕೆ ಪ್ರಯಾಣ ಮುಂದೂಡುವಂತೆ ಸೂಚಿಸಿದೆ. ರಿಪಬ್ಲಿಕ್ ಆಫ್ ನಿಜರ್‌ನಲ್ಲಿ ಸಂಘರ್ಷ ವ್ಯಾಪಕವಾಗಿದ್ದು, ಪರಿಸ್ಥಿತಿ ಕೈಮೀರುತ್ತಿದ್ದು, ಭಾರತೀಯರು ನೈಜರ್ ದೇಶ ಪ್ರಯಾಣವನ್ನು ಮುಂದೂಡುವಂತೆ ಸೂಚಿಸಲಾಗಿದೆ.

ನೈಜರ್ ದೇಶದ ಪರಿಸ್ಥಿತಿಯನ್ನು ಭಾರತ ಸೂಕ್ಷ್ಮವಾಗಿ ಗಮನಿಸುತ್ತಿದೆ. ಸದ್ಯ ನೈಜರ್ ದೇಶದ ವಿಮಾನಯಾನ ಸೇವೆಗಳು ಸ್ಥಗಿತಗೊಂಡಿದೆ. ಪರಿಸ್ಥಿತಿ ಕೈಮೀರುತ್ತಿದೆ. ಹೀಗಾಗಿ ನೈಜರ್ ದೇಶದಲ್ಲಿರುವ ಭಾರತೀಯ ನಾಗರೀಕರು ತಕ್ಷಣವೇ ನೈಜರ್ ದೇಶ ತೊರೆಯಬೇಕು.ಭಾರತೀ ನಾಗರೀಕರ ಸುರಕ್ಷತೆಗಾಗಿ ದೇಶ ತೊರೆಯುವುದು ಸದ್ಯಕ್ಕಿರುವ ಮಾರ್ಗ. ನೈಜರ್ ದೇಶದಲ್ಲಿರುವ ಭಾರತೀಯರ ರಾಯಭಾರ ಕಚೇರಿ ನಿಮಗೆ ನರೆವು ನೀಡಲಿದೆ.

ಇದುವರೆಗೆ ರಾಯಭಾರ ಕಚೇರಿಯಲ್ಲಿ ನೋಂದಣಿ ಮಾಡಿಕೊಳ್ಳದೇ ಇರುವ ನಾಗರೀಕರು ಆನ್‌ಲೈನ್ ಮೂಲಕ ಅಥವಾ ದೂರವಾಣಿ ಮೂಲಕ ಮಾಡಿಕೊಳ್ಳಿ. ನೈಜರ್‌ನ ಭಾರತ ರಾಯಭಾರ ಕಚೇರಿ ಎಲ್ಲಾ ನೆರವು ನೀಡಲಿದೆ. ಇನ್ನು ನೈಜರ್ ದೇಶಕ್ಕೆ ಪ್ರಯಾಣ ಬೆಳೆಸುವ ಭಾರತೀಯರು ಸದ್ಯಕ್ಕೆ ಮುಂದೂಡುವುದು ಉತ್ತಮ. ಪರಿಸ್ಥಿತಿ ಸುಧಾರಿಸಿದ ಬಳಿಕ ಪ್ರಯಾಣ ಮುಂದುವರಿಸಿ ಎಂದು ವಿದೇಶಾಂಗ ಇಲಾಖೆ ವಕ್ತಾರ ಅರಿಂದಮ್ ಬಗ್ಚಿ ಹೇಳಿದ್ದಾರೆ.

ನೈಜರ್ ನಲ್ಲಿ ಸೇನಾ ಸಂಘರ್ಷ
ನೈಜರ್ ದೇಶದಲ್ಲಿ ಪರಿಸ್ಥಿತಿ ಶೋಚನೀಯವಾಗಿದೆ. ಚುನಾಯಿತ ಅಧ್ಯಕ್ಷ ಮೊಹಮ್ಮದ್ ಬಜೌಮ್ ಬಂಧಿಸಿರುವ ನೈಜರ್ ಸೇನಾ ಪಡೆ ತನ್ನ ವಶದಲ್ಲಿ ಇಟ್ಟುಕೊಂಡಿದೆ. ಇತ್ತ ನೈಜರ್ ಸೇನಾ ಪಡೆಗೆ ಆಫ್ರಿಕನ್ ರಾಷ್ಟ್ರಗಳು ಹಲವು ನಿರ್ಬಂಧ ವಿಧಿಸಿದೆ. ಈ ಬೆಳವಣಿಗೆಗಳಿಂದ ನೈಜರ್ ದೇಶದಲ್ಲಿ ದಂಗೆ ಶುರುವಾಗಿದೆ. ಅರಾಜಕತೆ ಸೃಷ್ಟಿಯಾಗಿದೆ. ಪರಿಸ್ಥಿತಿ ಗಂಭೀರವಾಗುತ್ತಿರುವ ಹಿನ್ನಲೆಯಲ್ಲಿ ಭಾರತೀಯ ವಿದೇಶಾಂಗ ಇಲಾಖೆ ತನ್ನ ನಾಗರೀಕರಿಗೆ ಮಹತ್ವದ ಸೂಚನೆ ನೀಡಿದೆ. ಈಗಾಗಲೇ ನೈಜರ್ ದೇಶದ ವಿಮಾನ ಸೇವೆಗಳು ಸ್ಥಗಿತಗೊಂಡಿದೆ. 

ನೈಜರ್ ದೇಶದ ಚುನಾಯಿತ ಸರ್ಕಾರವನ್ನೇ ಸೇನೆ ಪತನಗೊಳಿಸಿದೆ. ಇತ್ತ ನೈಜರ್ ಸೇನಾ ಕಮಾಂಡರ್ ಎಬಿ ಟಿಯಾನಿ ನೀಡಿದ ಘೋಷಣೆ ಆಫ್ರಿಕನ್ ದೇಶಗಳನ್ನು ಮತ್ತಷ್ಟು ಕೆರಳಿಸಿದೆ. ತಾನೇ ನೈಜರ್ ದೇಶದ ಅಧ್ಯಕ್ಷ ಎಂದು ಟಿಯಾನಿ ಘೋಷಣೆ ಮಾಡಿದ್ದಾರೆ. ಇತ್ತ ನೈಜೀರಿಯಾ ಸೇರಿದಂತೆ 15 ಆಫ್ರಿಕನ್ ರಾಷ್ಟ್ರಗಳು ತುರ್ತು ಸಭೆ ನಡೆಸಿದೆ. ನೈಜರ್ ದೇಶದ ಪರಿಸ್ಥಿತಿ ಅವಲೋಕಿಸಿದೆ. ಇಷ್ಟೇ ಅಲ್ಲ ವಶದಲ್ಲಿಟ್ಟುಕೊಂಡಿರುವ ಪದಚ್ಯುತ ಅಧ್ಯಕ್ಷ ಮೊಹಮ್ಮದ್ ಬಜೌಮ್ ಅವರನ್ನು ತಕ್ಷಣವೇ ಒಪ್ಪಿಸುವಂತೆ ಸೂಚಿಸಿದೆ.

ಆದರೆ ಯಾವುದೇ ಸೂಚನೆಗೆ ಬಗ್ಗದ ನೈಜರ್ ಸೇನೆ ದಾಳಿ ಆರಂಭಿಸಿದೆ. ನೈಜರ್ ದೇಶದ ಜೊತೆಗಿನ ವಾಣಿಜ್ಯ ಹಾಗೂ ಇತರ ವ್ಯವಹಾರ ಸಂಬಂಧವನ್ನು ಆಫ್ರಿಕನ್ ದೇಶಗಳು ಕಡಿತಗೊಳಿಸಿದೆ. ವಶದಲ್ಲಿಟ್ಟುಕೊಂಡಿರುವ ಚುನಾಯಿತ ಅಧ್ಯಕ್ಷ ಮೊಹಮ್ಮದ್ ಬಜೌಮ್ ಅವರನ್ನು ಆಫ್ರಿಕನ್ ಒಕ್ಕೂಟಕ್ಕೆ ಒಪ್ಪಿಸದಿದ್ದರೆ, ದಾಳಿ ನಡೆಸುವುದಾಗಿ ಆಫ್ರಿಕನ್ ಒಕ್ಕೂಟ ಎಚ್ಚರಿಕೆ ನೀಡಿದೆ. ಇತ್ತ ಆಫ್ರಿಕನ್ ಸೇನಾ ದಾಳಿ ಎದುರಿಸಲು ನೈಜರ್ ದೇಶದ ಸೇನೆ ಕೂಡ ಸಜ್ಜಾಗಿದೆ. ಹೀಗಾಗಿ ನೈಜರ್ ದೇಶದಲ್ಲಿ  ದಂಗೆಯ ಜೊತೆಗೆ ಯುದ್ಧ ನಡೆಯುವ ಎಲ್ಲಾ ಸಾಧ್ಯತೆಗಳು ಗೋಚರಿಸುತ್ತಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಭಾರತ ಮತ್ತು ಚೀನಾ 'ಸ್ನೇಹಿತರಾಗಿರುವುದೇ' ಸರಿಯಾದ ಆಯ್ಕೆ: ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್

Dharmasthala Case: NIA ತನಿಖೆ ಅಗತ್ಯವಿಲ್ಲ, SITಗೆ ಸ್ವಾತಂತ್ರ್ಯ ನೀಡಲಾಗಿದೆ; ಸಿಎಂ ಸಿದ್ದರಾಮಯ್ಯ

ಆಪರೇಷನ್ ಸಿಂಧೂರ ವೇಳೆಯ 'ಅಪವಿತ್ರ ಮೈತ್ರಿ'ಯನ್ನು ಸದ್ದಿಲ್ಲದೆ ಒಪ್ಪಿಕೊಂಡ ಮೋದಿ ಸರ್ಕಾರ! ಚೀನಾ ಆಕ್ರಮಣವನ್ನು ಕಾನೂನುಬದ್ಧಗೊಳಿಸುತ್ತಿದ್ದೆಯೇ? ಕಾಂಗ್ರೆಸ್

ಬೆಂಗಳೂರು: ಪ್ರಯಾಣಿಕನಿಗೆ ಕಪಾಳಮೋಕ್ಷ ಮಾಡಿದ BMTC ಬಸ್ ಕಂಡೆಕ್ಟರ್; ನೆಟ್ಟಿಗರು ಆಕ್ರೋಶ, Video!

ಮಕ್ಕಳ ಕಣ್ಣೀರಿಗೂ ಕರಗದ ಮನಸ್ಸು: ವಿಚ್ಛೇನದ ನೀಡಿ ಪ್ರಿಯಕರನ ಜೊತೆ ಹೋಗುತ್ತಿದ್ದ ತಾಯಿಯನ್ನು ಪರಿ ಪರಿಯಾಗಿ ಬೇಡಿದ ಮಕ್ಕಳು, Video!

SCROLL FOR NEXT