ಕೊಲೆಯಾದ ಬಿಜೆಪಿ ನಾಯಕಿ ಸನಾ ಖಾನ್ , ಆರೋಪಿ ಪತಿ 
ದೇಶ

 ಮಧ್ಯಪ್ರದೇಶ: ಬಿಜೆಪಿ ನಾಯಕಿ ಸನಾ ಖಾನ್ ಕೊಂದು ಶವವನ್ನು ನದಿಗೆ ಎಸೆದಿದ್ದ ಪತಿಯ ಬಂಧನ!

ನಾಗ್ಪುರ ಮೂಲದ ಬಿಜೆಪಿಯ ನಾಯಕಿ ಸನಾ ಖಾನ್ ಅವರನ್ನು ಕೊಂದ ಆರೋಪದ ಮೇಲೆ ಬಂಧಿತನಾಗಿರುವ ವ್ಯಕ್ತಿಯು ಪೊಲೀಸರ ಬಳಿ ತಪ್ಪೊಪ್ಪಿಕೊಂಡಿದ್ದಾನೆ.  ಸನಾ ಖಾನ್  ತನ್ನ ಪತ್ನಿಯಾಗಿದ್ದು, ಹಣಕಾಸು ಮತ್ತು ವೈಯಕ್ತಿಕ ಸಮಸ್ಯೆಯಿಂದ ಆಕೆಯನ್ನು ಕೊಲೆ ಮಾಡಿರುವುದಾಗಿ ಪೊಲೀಸರಿಗೆ ಆತ ಹೇಳಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. 

ಜಬಲ್‌ಪುರ: ನಾಗ್ಪುರ ಮೂಲದ ಬಿಜೆಪಿಯ ನಾಯಕಿ ಸನಾ ಖಾನ್ ಅವರನ್ನು ಕೊಂದ ಆರೋಪದ ಮೇಲೆ ಬಂಧಿತನಾಗಿರುವ ವ್ಯಕ್ತಿಯು ಪೊಲೀಸರ ಬಳಿ ತಪ್ಪೊಪ್ಪಿಕೊಂಡಿದ್ದಾನೆ.  ಸನಾ ಖಾನ್  ತನ್ನ ಪತ್ನಿಯಾಗಿದ್ದು, ಹಣಕಾಸು ಮತ್ತು ವೈಯಕ್ತಿಕ ಸಮಸ್ಯೆಯಿಂದ ಆಕೆಯನ್ನು ಕೊಲೆ ಮಾಡಿರುವುದಾಗಿ ಪೊಲೀಸರಿಗೆ ಆತ ಹೇಳಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. 

ಆರೋಪಿಯನ್ನು ಅಮಿತ್ ಸಾಹು ಅಲಿಯಾಸ್ ಪಪ್ಪು (37) ಎಂದು ಗುರುತಿಸಲಾಗಿದೆ. ಮನೆಯಲ್ಲಿ ದೊಣ್ಣೆಯಿಂದ ಹೊಡೆದು ಆಕೆಯನ್ನು ಕೊಂದು ನಂತರ ಶವವನ್ನು ಹಿರಾನ್  ನದಿಗೆ ಎಸೆದಿರುವುದಾಗಿ ಆತ ತಿಳಿಸಿದ್ದಾನೆ. ನದಿ ಮತ್ತು ಅದರ ಹತ್ತಿರದ ಪ್ರದೇಶಗಳಲ್ಲಿ ಸನಾ ಖಾನ್ ಮೃತದೇಹಕ್ಕಾಗಿ  ಶೋಧ ಕಾರ್ಯಾಚರಣೆ ನಡೆಯುತ್ತಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕಮಲ್ ಮೌರ್ಯ ತಿಳಿಸಿದ್ದಾರೆ.  

ಆರೋಪಿಯು ಅಪರಾಧದ ಸಮಯದಲ್ಲಿ ತನ್ನ ಜೊತೆಯಲ್ಲಿದ್ದ ತನ್ನ ಸಹಚರನ ಹೆಸರನ್ನೂ ಬಹಿರಂಗಪಡಿಸಿದ್ದು, ಆ ವ್ಯಕ್ತಿಗಾಗಿ ಶೋಧ ನಡೆಯುತ್ತಿದೆ ಎಂದು ಅವರು ಹೇಳಿದರು. ಸಾಹು ಮತ್ತು ಮತ್ತಿಬ್ಬರನ್ನು ಶುಕ್ರವಾರ ಜಬಲ್‌ಪುರದಲ್ಲಿ ಬಂಧಿಸಿ ನಾಗ್ಪುರಕ್ಕೆ ಕರೆತರಲಾಗಿದ್ದು, ಅವರನ್ನು ಶನಿವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ನಾಗ್ಪುರ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಾಗ್ಪುರದ ಅವಸ್ತಿ ನಗರದ ನಿವಾಸಿ ಖಾನ್ ಅವರ ತಾಯಿ ಮೆಹ್ರುನಿಶಾ ಅವರು ಆಗಸ್ಟ್ 1 ರಂದು ಸಾಹುವನ್ನು ಭೇಟಿಯಾಗಲು ಜಬಲ್ಪುರಕ್ಕೆ ತೆರಳಿದ ನಂತರ ಮಗಳು ನಾಪತ್ತೆಯಾದಾಗ ದೂರು ನೀಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಆಕೆಯ ದೂರಿನ ಆಧಾರದ ಮೇಲೆ, ಸಾಹು ವಿರುದ್ಧ ಮಾಂಕಾಪುರ ಪೊಲೀಸ್ ಠಾಣೆಯಲ್ಲಿ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸಲಾಗಿದೆ, ಸಾಹು ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 364 (ಕೊಲೆಗಾಗಿ ಅಪಹರಣ ಅಥವಾ ಅಪಹರಣ) ಮತ್ತು 506 (ಕ್ರಿಮಿನಲ್ ಬೆದರಿಕೆ) ಅಡಿ ಪ್ರಕರಣ ದಾಖಲಿಸಲಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

ಸುಪ್ರೀಂ ಕೋರ್ಟ್‌ಗೆ ನ್ಯಾ. ಪಾಂಚೋಲಿ ಹೆಸರು ಶಿಫಾರಸು: ನ್ಯಾ. ಬಿ. ವಿ. ನಾಗರತ್ನ ತೀವ್ರ ಅಸಮಾಧಾನ!

ಶಿಬು ಸೊರೇನ್ 'ರಾಜ್ಯದ ಪಿತಾಮಹ' ಎಂದು ಘೋಷಿಸುವಂತೆ ಜೆಎಂಎಂ ಆಗ್ರಹ

SCROLL FOR NEXT