ದೇಶ

ದೇಶದಲ್ಲಿ 50 ಕೋಟಿ ದಾಟಿದ ಜನ್ ಧನ್ ಖಾತೆದಾರರ ಸಂಖ್ಯೆ: ಪ್ರಧಾನಿ ಮೋದಿ ಹರ್ಷ

Sumana Upadhyaya

ನವದೆಹಲಿ: ಜನ್ ಧನ್ ಖಾತೆದಾರರ ಸಂಖ್ಯೆ ದೇಶದಲ್ಲಿ 50 ಕೋಟಿ ದಾಟಿರುವುದು ಮಹತ್ವದ ಮೈಲಿಗಲ್ಲು ಎಂದು ಪ್ರಧಾನಿ ನರೇಂದ್ರ ಮೋದಿ ಶನಿವಾರ ಶ್ಲಾಘಿಸಿದ್ದಾರೆ.

ಈ ಖಾತೆಗಳಲ್ಲಿ ಅರ್ಧಕ್ಕಿಂತ ಹೆಚ್ಚು ಖಾತೆಗಳು ಮಹಿಳೆಯರಿಗೆ ಸೇರಿರುವುದು ಮತ್ತೊಂದು ಖುಷಿಯ ವಿಚಾರ ಎಂದು ಕೂಡ ಪ್ರಧಾನಿ ಮೋದಿ ಹೇಳಿದ್ದಾರೆ.  

ದೇಶದಲ್ಲಿ ಒಟ್ಟು ಜನ್ ಧನ್ ಖಾತೆಗಳ ಸಂಖ್ಯೆ 50 ಕೋಟಿ ದಾಟಿದ್ದು, ಅದರಲ್ಲಿ ಶೇ.56 ರಷ್ಟು ಮಹಿಳೆಯರಿಗೆ ಸೇರಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ತಿಳಿಸಿದೆ. 

ಈ ಪೈಕಿ ಶೇ 67ರಷ್ಟು ಖಾತೆಗಳನ್ನು ಗ್ರಾಮೀಣ ಮತ್ತು ಅರೆ ನಗರ ಪ್ರದೇಶಗಳಲ್ಲಿ ತೆರೆಯಲಾಗಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ. 

ಇದು ಮಹತ್ವದ ಮೈಲಿಗಲ್ಲು ಎಂದು ಅಭಿಪ್ರಾಯಪಟ್ಟಿರುವ ಪ್ರಧಾನಿ ಮೋದಿ, ಈ ಖಾತೆಗಳಲ್ಲಿ ಅರ್ಧಕ್ಕಿಂತ ಹೆಚ್ಚು ಖಾತೆಗಳು ನಮ್ಮ ನಾರಿ ಶಕ್ತಿಗೆ ಸೇರಿರುವುದು ಸಂತೋಷಕರವಾಗಿದೆ. ಶೇಕಡಾ 67ರಷ್ಟು ಖಾತೆಗಳು ಗ್ರಾಮೀಣ ಮತ್ತು ಅರೆ ನಗರ ಪ್ರದೇಶಗಳಲ್ಲಿ ತೆರೆಯಲ್ಪಟ್ಟಿರುವುದರಿಂದ, ನಾವು ಲಾಭದಲ್ಲಿ ಮುನ್ನಡೆಯುತ್ತಿದ್ದೇವೆ. ಇದು ರಾಷ್ಟ್ರದ ಮೂಲೆ ಮೂಲೆಯನ್ನು ತಲುಪುತ್ತದೆ ಎಂದಿದ್ದಾರೆ. 

ಜನ್ ಧನ್ ಖಾತೆಗಳಲ್ಲಿನ ಒಟ್ಟು ಠೇವಣಿ 2.03 ಲಕ್ಷ ಕೋಟಿ ರೂಪಾಯಿಗಿಂತ ಹೆಚ್ಚಿದ್ದು, ಸುಮಾರು 34 ಕೋಟಿ ರೂಪಾಯಿ ಕಾರ್ಡ್‌ಗಳನ್ನು ಈ ಖಾತೆಗಳೊಂದಿಗೆ ಉಚಿತವಾಗಿ ನೀಡಲಾಗಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ.

2014 ರಲ್ಲಿ ಜನ್ ಧನ್ ಬ್ಯಾಂಕ್ ಖಾತೆಗಳನ್ನು ತೆರೆಯಲು ಬೃಹತ್ ರಾಷ್ಟ್ರವ್ಯಾಪಿ ಅಭಿಯಾನ ಪ್ರಾರಂಭಿಸಿತು. ಇದು ನೇರ ಲಾಭ ವರ್ಗಾವಣೆ ಸೇರಿದಂತೆ ಹಲವಾರು ಹಣಕಾಸು ಸೇವೆಗಳನ್ನು ಬಡವರಿಗೆ ತಲುಪಿಸುವಂತೆ ಮಾಡುವ ಗುರಿಯನ್ನು ಹೊಂದಿದೆ.

SCROLL FOR NEXT