ದೇಶ

2023 ರಲ್ಲಿ ಕಾಂಗ್ರೆಸ್ ಗೆ 80 ಕೋಟಿ ರೂ. ದೇಣಿಗೆ: ಆಡಳಿತರೂಢ ಬಿಜೆಪಿ ಗಳಿಸಿದ್ದೆಷ್ಟು ಗೊತ್ತೆ?

Srinivas Rao BV

ನವದೆಹಲಿ: 2023 ರಲ್ಲಿ ಕಾಂಗ್ರೆಸ್ ಪಕ್ಷಕ್ಕೆ 80 ಕೋಟಿ ರೂಪಾಯಿ ದೇಣಿಗೆ ಹರಿದುಬಂದಿದೆ. 

ಸಂಸ್ಥೆಗಳು, ಪಕ್ಷದ ನಾಯಕರು, ವ್ಯಕ್ತಿಗಳು,  ಚುನಾವಣಾ ಟ್ರಸ್ಟ್‌ಗಳಿಂದ ಕಾಂಗ್ರೆಸ್ ಗೆ 80 ಕೋಟಿ ರೂಪಾಯಿ ದೇಣಿಗೆ ಬಂದಿದೆ. ಈ ಕುರಿತ ಮಾಹಿತಿಯನ್ನು ಚುನಾವಣಾ ಆಯೋಗ ಡಿ.04 ರಂದು ಸಾರ್ವಜನಿಕ ಡೊಮೈನ್ ನಲ್ಲಿ ಪ್ರಕಟಿಸಿದೆ. 

ಕಾಂಗ್ರೆಸ್ ಗೆ ಕೋಲ್ಕತ್ತಾ ಮೂಲದ ಸಮಾಜ ಚುನಾವಣಾ ಟ್ರಸ್ಟ್ ಒಂದೇ 50 ಲಕ್ಷ ರೂಪಾಯಿ ನೀಡಿದೆ. ಮತ್ತೊಂದೆಡೆ, ಆಡಳಿತಾರೂಢ ಬಿಜೆಪಿ 2022-23ರ ಆರ್ಥಿಕ ವರ್ಷದಲ್ಲಿ ಸಂಸ್ಥೆಗಳು, ಚುನಾವಣಾ ಟ್ರಸ್ಟ್‌ಗಳು, ವ್ಯಕ್ತಿಗಳು ಮತ್ತು ಅದರ ಶಾಸಕರಿಂದ ಸುಮಾರು 720 ಕೋಟಿ ರೂಪಾಯಿಗಳನ್ನು ಕೊಡುಗೆಯಾಗಿ ಸ್ವೀಕರಿಸಿದೆ.

ಬಿಜೆಪಿ ಮತ್ತು ಕಾಂಗ್ರೆಸ್ ಎರಡೂ ಮಾನ್ಯತೆ ಪಡೆದ ರಾಷ್ಟ್ರೀಯ ಪಕ್ಷಗಳಾಗಿದ್ದು ಒಂದು ಹಣಕಾಸು ವರ್ಷದಲ್ಲಿ 20,000 ರೂ.ಗಿಂತ ಹೆಚ್ಚಿನ ದೇಣಿಗೆ ನೀಡಿದ ದಾನಿಗಳ ವಿವರಗಳನ್ನು ರಾಜಕೀಯ ಪಕ್ಷಗಳು ಪ್ರತಿ ವರ್ಷ ಚುನಾವಣಾ ಆಯೋಗಕ್ಕೆ ಸಲ್ಲಿಸಬೇಕಾಗುತ್ತದೆ. 

SCROLL FOR NEXT