ಕೋಲ್ಕತಾ 
ದೇಶ

ಕೋಲ್ಕತ್ತಾ ಭಾರತದ ಅತ್ಯಂತ ಸುರಕ್ಷಿತ ನಗರ, 2ನೇ ನಗರ ಯಾವುದು ಗೊತ್ತಾ?

ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತಾ ಸತತ ಮೂರನೇ ವರ್ಷವೂ ದೇಶದ ಅತ್ಯಂತ ಸುರಕ್ಷಿತ ನಗರಗಳ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿ ಮುಂದುವರೆದಿದೆ.

ನವದೆಹಲಿ: ಪಶ್ಚಿಮ ಬಂಗಾಳ ರಾಜಧಾನಿ ಕೋಲ್ಕತಾ ಸತತ ಮೂರನೇ ವರ್ಷವೂ ದೇಶದ ಅತ್ಯಂತ ಸುರಕ್ಷಿತ ನಗರಗಳ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿ ಮುಂದುವರೆದಿದೆ.

ಹೌದು.. ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (ಎನ್‌ಸಿಆರ್‌ಬಿ) ಪ್ರಕಟಿಸಿದ ವರದಿಯಲ್ಲಿ ಈ ಅಂಶ ಬಯಲಾಗಿದ್ದು, ಕೋಲ್ಕತ್ತಾ ಸತತ ಮೂರನೇ ವರ್ಷ ಭಾರತದ ಸುರಕ್ಷಿತ ನಗರವಾಗಿ ಹೊರಹೊಮ್ಮಿದೆ. ದೇಶದ ಮಹಾನಗರಗಳಲ್ಲಿ ಪ್ರತಿ ಲಕ್ಷ ಜನಸಂಖ್ಯೆಗೆ ಕನಿಷ್ಠ ಸಂಖ್ಯೆಯ ಅಪರಾಧಗಳನ್ನು ದಾಖಲಿಸಿದೆ ಎಂದು ಎನ್‌ಸಿಆರ್‌ಬಿ ಪ್ರಕಟಿಸಿದ ವರದಿ ತಿಳಿಸಿದೆ. 

2022 ರಲ್ಲಿ ಪ್ರತಿ ಲಕ್ಷ ಜನರಿಗೆ 86.5 ಕಾಗ್ನೈಸಬಲ್ ಅಪರಾಧಗಳ ಪ್ರಕರಣಗಳನ್ನು ಕೋಲ್ಕತಾ ವರದಿ ಮಾಡಿತ್ತು. ನಂತರದ ಸ್ಥಾನದಲ್ಲಿ ಮಹಾರಾಷ್ಟ್ರದ ಪುಣೆ ಇದ್ದು, ಪುಣೆಯ ಸರಾಸರಿ ಪ್ರಕರಣಗಳ ಸಂಖ್ಯೆ 280.7 ರಷ್ಟಿದೆ. ಮೂರನೇ ಸ್ಥಾನದಲ್ಲಿ ತೆಲಂಗಾಣ ರಾಜಧಾನಿ ಹೈದರಾಬಾದ್ ಇದ್ದು ಇಲ್ಲಿ ಸರಾಸರಿ ಪ್ರಕರಣಗಳ ಸಂಖ್ಯೆ 299.2 ಇದೆ ಎಂದು NCRB ಡೇಟಾ ತಿಳಿಸಿದೆ.

ಭಾರತೀಯ ದಂಡ ಸಂಹಿತೆ (IPC) ಮತ್ತು SLL (ವಿಶೇಷ ಮತ್ತು ಸ್ಥಳೀಯ ಕಾನೂನುಗಳು) ಸೆಕ್ಷನ್‌ಗಳ ಅಡಿಯಲ್ಲಿ ದಾಖಲಾಗುವ ಪ್ರಕರಣಗಳು ಕಾಗ್ನಿಸಬಲ್ ಅಪರಾಧಗಳಾಗಿವೆ. ಎನ್‌ಸಿಆರ್‌ಬಿ ವರದಿಯ ಪ್ರಕಾರ, ಕೋಲ್ಕತ್ತಾ 2021 ರಲ್ಲಿ ಪ್ರತಿ ಲಕ್ಷ ಜನರಿಗೆ 103.4 ಅಪರಾಧ ಪ್ರಕರಣಗಳನ್ನು ದಾಖಲಿಸಿದೆ, ಇದು ಈ ವರ್ಷ 86.5 ಕ್ಕೆ ಇಳಿದಿದೆ. 2020 ರಲ್ಲಿ ಈ ಪ್ರಮಾಣ ಗರಿಷ್ಠ ಅಂದರೆ129.5 ರಷ್ಟಿತ್ತು.

ಅಂತೆಯೇ 2ನೇ ಸ್ಥಾನದಲ್ಲಿರುವ ಪುಣೆ 2021ರಲ್ಲಿ ಮತ್ತು ಮೂರನೇ ಸ್ಥಾನದಲ್ಲಿರುವ ಹೈದರಾಬಾದ್ ಪ್ರತಿ ಲಕ್ಷ ಜನಸಂಖ್ಯೆಗೆ ಕ್ರಮವಾಗಿ 256.8 ಮತ್ತು 259.9 ಕಾಗ್ನೈಸಬಲ್ ಅಪರಾಧಗಳನ್ನು ವರದಿ ಮಾಡಿದೆ. 20 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ 19 ನಗರಗಳ ಹೋಲಿಕೆಯ ನಂತರ ಶ್ರೇಯಾಂಕಗಳನ್ನು ನೀಡಲಾಗಿದೆ. ಆದಾಗ್ಯೂ, ಕೋಲ್ಕತ್ತಾದಲ್ಲಿ ಮಹಿಳೆಯರ ವಿರುದ್ಧದ ಅಪರಾಧಗಳ ಸಂಖ್ಯೆಯು 2021 ರಲ್ಲಿ 1,783 ರಿಂದ 2022 ರಲ್ಲಿ 1,890 ಕ್ಕೆ ಏರಿದೆ. ಕೋಲ್ಕತ್ತಾದಲ್ಲಿ ಮಹಿಳೆಯರ ವಿರುದ್ಧದ ಅಪರಾಧದ ಪ್ರಮಾಣವು ಪ್ರತಿ ಲಕ್ಷ ಜನಸಂಖ್ಯೆಗೆ 27.1 ರಷ್ಟಿದ್ದು, ಇದು ಕೊಯಮತ್ತೂರಿನ 12.9 ಮತ್ತು ಚೆನ್ನೈನ 17.1 ಕ್ಕಿಂತ ಹೆಚ್ಚಾಗಿದೆ ಎಂದು ವರದಿ ಹೇಳಿದೆ.
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಇಸ್ರೇಲ್‌ ಜೊತೆ ನಮ್ಮ ಸಂಬಂಧ 'ರಕ್ತ ಮತ್ತು ತ್ಯಾಗ'ದಲ್ಲಿ ಬರೆಯಲ್ಪಟ್ಟಿದೆ, ನಾನು ಹುಟ್ಟಿದ ವರ್ಷ ಭಾರತ ಇಸ್ರೇಲ್ ಗೆ ಮಾನ್ಯತೆ ನೀಡಿತು': ಪ್ರಧಾನಿ ಮೋದಿ-Video

'ಭಯೋತ್ಪಾದನೆಯನ್ನು ಯಾವುದೂ ಸಮರ್ಥಿಸಲು ಸಾಧ್ಯವಿಲ್ಲ, ಭಾರತ ಇಸ್ರೇಲ್ ಜೊತೆ ದೃಢವಾಗಿ ನಿಲ್ಲುತ್ತದೆ': ನೆಸ್ಸೆಟ್‌ನಲ್ಲಿ ಪ್ರಧಾನಿ ಮೋದಿ ಭಾಷಣ

'ನ್ಯಾಯಾಂಗದಲ್ಲಿ ಭ್ರಷ್ಟಾಚಾರ' ಪಾಠ: ಸುಪ್ರೀಂ ಕೋರ್ಟ್ ಚಾಟಿ ನಂತರ ವೆಬ್‌ಸೈಟ್‌ನಿಂದ ಪಠ್ಯಪುಸ್ತಕ ತೆಗೆದ NCERT

T20 World Cup 2026: ಶ್ರೀಲಂಕಾ ವಿರುದ್ಧ ನ್ಯೂಜಿಲ್ಯಾಂಡ್ ​ಗೆ 61 ರನ್ ಭರ್ಜರಿ ಗೆಲುವು

India to Israel: ಪ್ರಧಾನಿ ಮೋದಿ ಪಯಣಿಸಿದ Air India ವಿಮಾನ ವಿಶ್ವದಲ್ಲೇ ಅತಿ ಹೆಚ್ಚು ಟ್ರ್ಯಾಕ್: Flightradar24

SCROLL FOR NEXT