ಸಾಂದರ್ಭಿಕ ಚಿತ್ರ 
ದೇಶ

ಹೈದರಾಬಾದ್‌ನಲ್ಲಿ ಬೀದಿ ನಾಯಿಗಳ ದಾಳಿಗೆ ಐದು ತಿಂಗಳ ಕಂದಮ್ಮ ದಾರುಣ ಸಾವು

ಬೀದಿ ನಾಯಿಗಳ ದಾಳಿಯಲ್ಲಿ ಐದು ತಿಂಗಳ ಹಸುಗೂಸು ಸಾವಿಗೀಡಾಗಿರುವ ಮತ್ತೊಂದು ಭಯಾನಕ ಘಟನೆ ವರದಿಯಾಗಿದೆ. ಹೈದರಾಬಾದ್‌ನ ಶೇಕ್‌ಪೇಟ್ ಪ್ರದೇಶದ ವಿನೋಬಾ ನಗರದಲ್ಲಿ ತನ್ನ ಗುಡಿಸಲಿನಲ್ಲಿ ಮಲಗಿದ್ದ ಶಿಶು ಮೇಲೆ ಡಿಸೆಂಬರ್ 8 ರಂದು ಬೀದಿ ನಾಯಿಗಳ ಹಿಂಡು ದಾಳಿ ಮಾಡಿತ್ತು. 

ಹೈದರಾಬಾದ್: ಬೀದಿ ನಾಯಿಗಳ ದಾಳಿಯಲ್ಲಿ ಐದು ತಿಂಗಳ ಹಸುಗೂಸು ಸಾವಿಗೀಡಾಗಿರುವ ಮತ್ತೊಂದು ಭಯಾನಕ ಘಟನೆ ಹೈದರಾಬಾದ್‌ನಲ್ಲಿ ವರದಿಯಾಗಿದೆ.

ಹೈದರಾಬಾದ್‌ನ ಶೇಕ್‌ಪೇಟ್ ಪ್ರದೇಶದ ವಿನೋಬಾ ನಗರದಲ್ಲಿ ತನ್ನ ಗುಡಿಸಲಿನಲ್ಲಿ ಮಲಗಿದ್ದ ಶಿಶು ಮೇಲೆ ಡಿಸೆಂಬರ್ 8 ರಂದು ಬೀದಿ ನಾಯಿಗಳ ಹಿಂಡು ದಾಳಿ ಮಾಡಿತ್ತು. ದಿನಗೂಲಿ ಕಾರ್ಮಿಕರ ಮಗುವಿಗೆ ಗಂಭೀರ ಗಾಯಗಳಾಗಿದ್ದು, ಉಸ್ಮಾನಿಯಾ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆದರೆ ಮಗುವಿನ ಸ್ಥಿತಿ ಚಿಂತಾಜನಕವಾಗಿತ್ತು. ಚಿತಿತ್ಸೆಗೆ ಸ್ಪಂದಿಸದೆ ಸೋಮವಾರ ಮಗು ಕೊನೆಯುಸಿರೆಳೆದಿದೆ. 

ಈ ವರ್ಷ ಹೈದರಾಬಾದ್ ಮತ್ತು ತೆಲಂಗಾಣದ ಇತರ ಭಾಗಗಳಲ್ಲಿ ನಡೆದಿರುವ ಹೃದಯ ವಿದ್ರಾವಕ ಘಟನೆಗಳ ಸರಣಿಯಲ್ಲಿ ಇದು ಇತ್ತೀಚಿನದು. ಫೆಬ್ರುವರಿಯಲ್ಲಿ ನಾಲ್ಕು ವರ್ಷದ ಬಾಲಕನನ್ನು ಬೀದಿನಾಯಿಗಳ ಗುಂಪೊಂದು ಕಚ್ಚಿ ಕೊಂದು ಹಾಕಿತ್ತು.

ಈ ಘಟನೆಯ ನಂತರ, ಪುರಸಭೆಯ ಅಧಿಕಾರಿಗಳು ಬೀದಿ ನಾಯಿಗಳ ಹಾವಳಿಯನ್ನು ತಡೆಯಲು ಹೊಸ ಕ್ರಮಗಳನ್ನು ಘೋಷಿಸಿದ್ದರು. ಆದರೆ, ಆ ಕ್ರಮಗಳಿಂದ ಯಾವುದೇ ಪ್ರಯೋಜನವಾಗಿಲ್ಲ ಎಂದು ನಾಗರಿಕರು ಹೇಳುತ್ತಾರೆ.

ಪ್ರತಿದಿನ, ರಾಜ್ಯ ರಾಜಧಾನಿ ಮತ್ತು ರಾಜ್ಯದ ಇತರ ನಗರ ಪ್ರದೇಶಗಳಲ್ಲಿ ಹತ್ತಾರು ನಾಯಿ ಕಡಿತ ಪ್ರಕರಣಗಳು ವರದಿಯಾಗುತ್ತಿವೆ.
ಮಾರ್ಚ್‌ನಲ್ಲಿ ಖಮ್ಮಂ ಜಿಲ್ಲೆಯಲ್ಲಿ ಐದು ವರ್ಷದ ಬಾಲಕನೊಬ್ಬ ರೇಬಿಸ್‌ಗೆ ಬಲಿಯಾಗಿದ್ದ. ಆತನಿಗೆ ಬೀದಿ ನಾಯಿಗಳು ಕಚ್ಚಿದ್ದವು ಮತ್ತು ನಂತರ ರೇಬೀಸ್‌ನ ಲಕ್ಷಣಗಳು ಕಾಣಿಸಿಕೊಂಡಿದ್ದವು.

ಮೇ 19 ರಂದು ಹನಮಕೊಂಡದ ಕಾಜಿಪೇಟ್ ರೈಲು ನಿಲ್ದಾಣದ ಬಳಿ ಎಂಟು ವರ್ಷದ ಬಾಲಕನನ್ನು ಬೀದಿನಾಯಿಗಳ ಹಿಂಡು ಹಿಂಡು ಕೊಂದು ಹಾಕಿತ್ತು. 2022ರ ಏಪ್ರಿಲ್‌ನಲ್ಲಿ ಹೈದರಾಬಾದ್‌ನ ಗೋಲ್ಕೊಂಡಾದ ಬಡಾ ಬಜಾರ್ ಪ್ರದೇಶದಲ್ಲಿ ಬೀದಿ ನಾಯಿಗಳು ಎರಡು ವರ್ಷದ ಬಾಲಕನನ್ನು ಕೊಂದು ಹಾಕಿದ್ದವು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 13 ಮಂದಿ ಸಾವು

ದೇಶಾದ್ಯಂತ ಗಣೇಶ ಚತುರ್ಥಿ ಸಂಭ್ರಮ: ದೇವಾಲಯಗಳಲ್ಲಿ ವಿಶೇಷ ಪೂಜೆ, ರಾಷ್ಟ್ರಪತಿ, ಪ್ರಧಾನಿ, ಮುಖ್ಯಮಂತ್ರಿಗಳಿಂದ ಶುಭಾಶಯ

ಧರ್ಮಸ್ಥಳ ಕೇಸ್: ತನಿಖೆ ಶೀಘ್ರಗತಿ ಪೂರ್ಣಗೊಳಿಸಲು SIT ಪ್ರಯತ್ನ; ಗೃಹ ಸಚಿವ ಡಾ.ಜಿ.ಪರಮೇಶ್ವರ್

ಕೃಷ್ಣಾ ಮೇಲ್ದಂಡೆ ಯೋಜನೆ-3: ಸರ್ವಪಕ್ಷ ನಾಯಕರೊಂದಿಗೆ ಶೀಘ್ರದಲ್ಲೇ ಸಭೆ; ಡಿಕೆ.ಶಿವಕುಮಾರ್

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

SCROLL FOR NEXT