ದೇಶ

CISFಗೆ ಮೊದಲ ಮಹಿಳಾ ಮುಖ್ಯಸ್ಥೆ: IPS ಅಧಿಕಾರಿ ನೀನಾ ಸಿಂಗ್ ನೇಮಕ

Srinivasamurthy VN

ನವದೆಹಲಿ: ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಗೆ(Central Industrial Security Force – CISF)ಗೆ ಇದೇ ಮೊದಲ ಬಾರಿಗೆ ಮಹಿಳಾ ಅಧಿಕಾರಿಯೊಬ್ಬರು ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ.

ಹೌದು.. ದೇಶದ ರಾಜಧಾನಿ ದೆಹಲಿ ಸೇರಿದಂತೆ ದೇಶಾದ್ಯಂತ ಇರುವ ವಿಮಾನ ನಿಲ್ದಾಣಗಳಿಗೆ ಭದ್ರತೆ ಒದಗಿಸುವ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಗೆ(Central Industrial Security Force – CISF)ಗೆ ಇದೇ ಮೊದಲ ಬಾರಿಗೆ ಮಹಿಳಾ ಅಧಿಕಾರಿಯೊಬ್ಬರು ಮುಖ್ಯಸ್ಥೆಯಾಗಿ ಆಗಮಿಸಿದ್ದು, ರಾಜಸ್ಥಾನ ಕೆಡರ್‌ನ 1989 ಬ್ಯಾಚಿನ ಖಡಕ್ ಐಪಿಎಸ್ ಅಧಿಕಾರಿ ನೀನಾ ಸಿಂಗ್ (IPS Nina Singh) ಅವರು ಸಿಐಎಸ್‌ಎಫ್‌ನ ಪ್ರಧಾನ ನಿರ್ದೇಶಕಿಯಾಗಿ ನೇಮಕವಾಗಿದ್ದಾರೆ.

ಮುಂದಿನ ವರ್ಷ ಜುಲೈ 31ರಂದು ಅವರು ನಿವೃತ್ತರಾಗಲಿದ್ದು, ಅಲ್ಲಿಯವರೆಗೆ ಅವರೂ ಸಿಐಎಸ್‌ಎಫ್ ಡಿಜಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ITBP) ಮುಖ್ಯಸ್ಥರಾಗಿದ್ದ ಅನೀಶ್ ದಯಾಳ್ ಸಿಂಗ್ ಅವರನ್ನು ಹೊಸ ನೇಮಕಾತಿಗಳ ಭಾಗವಾಗಿ ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF)ನ ಮಹಾನಿರ್ದೇಶಕರನ್ನಾಗಿ ನೇಮಿಸಲಾಗಿದೆ.

CRPFಗೆ ಅನೀಶ್ ದಯಾಳ್ ಸಿಂಗ್
ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಮುಖ್ಯಸ್ಥ ಅನೀಶ್ ದಯಾಳ್ ಸಿಂಗ್ ಅವರನ್ನು ಕೇಂದ್ರೀಯ ಮೀಸಲು ಪೊಲೀಸ್ ಪಡೆಯ ಮಹಾನಿರ್ದೇಶಕರಾಗಿ ಗುರುವಾರ ನೇಮಕ ಮಾಡಲಾಗಿದೆ. ಮಣಿಪುರ ಕೇಡರ್‌ನ 1988-ಬ್ಯಾಚ್‌ನ ಭಾರತೀಯ ಪೊಲೀಸ್ ಸೇವಾ ಅಧಿಕಾರಿ ಸಿಂಗ್, ನವೆಂಬರ್ 30 ರಂದು ಪ್ರಸ್ತುತ ಎಸ್‌ಎಲ್ ಥಾಸೆನ್ ನಿವೃತ್ತರಾದ ನಂತರ ಸಿಆರ್‌ಪಿಎಫ್‌ನ ಹೆಚ್ಚುವರಿ ಜವಾಬ್ದಾರಿಯನ್ನು ಹೊಂದಿದ್ದರು. ಕ್ಯಾಬಿನೆಟ್ ನೇಮಕಾತಿ ಸಮಿತಿಯು ಡಿಸೆಂಬರ್ 31, 2024 ರವರೆಗೆ ಸಿಆರ್‌ಪಿಎಫ್‌ನ ಡಿಜಿ ಆಗಿ ಸಿಂಗ್ ಅವರ ನೇಮಕಾತಿಯನ್ನು ಅನುಮೋದಿಸಿದೆ, ಅಂದರೆ ಅವರ ನಿವೃತ್ತಿಯ ದಿನಾಂಕ ಎಂದು ಅದು ಹೇಳಿದೆ.

ITBPಗೆ ರಾಹುಲ್ ರಸ್ಗೋತ್ರಾ 
ಪ್ರಸ್ತುತ ಇಂಟೆಲಿಜೆನ್ಸ್ ಬ್ಯೂರೋದಲ್ಲಿ ವಿಶೇಷ ನಿರ್ದೇಶಕರಾಗಿರುವ ರಾಹುಲ್ ರಸ್ಗೋತ್ರಾ ಅವರು ಸಿಂಗ್ ಬದಲಿಗೆ ಹೊಸ ITBP ಮುಖ್ಯಸ್ಥರಾಗಿ ನೇಮಿಸಲಾಗಿದೆ. ಮಣಿಪುರ ಕೇಡರ್‌ನ 1989-ಬ್ಯಾಚ್‌ನ ಐಪಿಎಸ್ ಅಧಿಕಾರಿಯಾದ ರಸ್ಗೋತ್ರ ಅವರನ್ನು ಸೆಪ್ಟೆಂಬರ್ 30, 2025 ರವರೆಗೆ ಅಂದರೆ ಅವರ ನಿವೃತ್ತಿಯ ದಿನಾಂಕದವರೆಗೆ ಈ ಹುದ್ದೆಗೆ ನೇಮಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಮುಂದಿನ ವರ್ಷ ಜುಲೈ 31ರಂದು ಅವರು ನಿವೃತ್ತರಾಗಲಿದ್ದು, ಅಲ್ಲಿಯವರೆಗೆ ಅವರೂ ಸಿಐಎಸ್‌ಎಫ್ ಡಿಜಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ. 

SCROLL FOR NEXT