ಹರ್ಯಾಣ ಸರ್ಕಾರ ಡ್ರೆಸ್ ಕೋಡ್ (ಸಂಗ್ರಹ ಚಿತ್ರ) 
ದೇಶ

ಆಸ್ಪತ್ರೆ ಸಿಬ್ಬಂದಿಗೆ ಜೀನ್ಸ್, ಸ್ಕರ್ಟ್‌ಗಳು, ಮೇಕಪ್ ಮತ್ತು 'ಫಂಕಿ' ಹೇರ್‌ಸ್ಟೈಲ್‌ ನಿಷೇಧಿಸಿದ ಹರ್ಯಾಣ ಸರ್ಕಾರ

ಆಸ್ಪತ್ರೆಗಳಲ್ಲಿ ವೈದ್ಯಕೀಯ ಮತ್ತು ಇತರ ಸಿಬ್ಬಂದಿಗೆ ಮೇಕಪ್, "ಫಂಕಿ ಹೇರ್ ಸ್ಟೈಲ್" ಮತ್ತು ಉದ್ದನೆಯ ಉಗುರು ಬಿಡುವುದನ್ನು ಹರ್ಯಾಣ ಸರ್ಕಾರ ನಿಷೇಧಿಸಿದೆ. 

ಚಂಡೀಗಢ: ಆಸ್ಪತ್ರೆಗಳಲ್ಲಿ ವೈದ್ಯಕೀಯ ಮತ್ತು ಇತರ ಸಿಬ್ಬಂದಿಗೆ ಮೇಕಪ್, "ಫಂಕಿ ಹೇರ್ ಸ್ಟೈಲ್" ಮತ್ತು ಉದ್ದನೆಯ ಉಗುರು ಬಿಡುವುದನ್ನು ಹರ್ಯಾಣ ಸರ್ಕಾರ ನಿಷೇಧಿಸಿದೆ. 

ಹೌದು.. ಹರ್ಯಾಣ ರಾಜ್ಯ ಸರ್ಕಾರವು ಆರೋಗ್ಯ ವೃತ್ತಿಪರರಿಗೆ ಡ್ರೆಸ್ ಕೋಡ್ ಅನ್ನು ಜಾರಿಗೆ ತರಲಿದ್ದು, ಟಿ-ಶರ್ಟ್‌ಗಳು, ಡೆನಿಮ್‌ಗಳು ಮತ್ತು ಸ್ಕರ್ಟ್‌ಗಳನ್ನು ಧರಿಸುವುದನ್ನು ನಿಷೇಧಿಸಿದೆ. ರಾಜ್ಯ ಸರ್ಕಾರ ಸಿದ್ಧಪಡಿಸುತ್ತಿರುವ ಡ್ರೆಸ್ ಕೋಡ್ ಅಂತಿಮ ಹಂತದಲ್ಲಿದೆ ಎಂದು ಹರಿಯಾಣ ಆರೋಗ್ಯ ಸಚಿವ ಅನಿಲ್ ವಿಜ್ ಹೇಳಿದ್ದಾರೆ.

ಈ ಬಗ್ಗೆ ಮಾತನಾಡಿದ ಅವರು, 'ಕೆಲವು ರೀತಿಯ ಉಡುಪುಗಳನ್ನು ನಿಷೇಧಿಸುವ ಕ್ರಮವು ಅಂಬಾಲಾದ ವೈದ್ಯಕೀಯ ಸಂಘಟನೆಯಿಂದ ಮಿಶ್ರ ಪ್ರತಿಕ್ರಿಯೆಗಳನ್ನು ಪಡೆಯಿತು, ಡ್ರೆಸ್ ಕೋಡ್ ಅನ್ನು ಜಾರಿಗೊಳಿಸುವುದು ಸಿಬ್ಬಂದಿಗೆ ವೃತ್ತಿಪರ ದೃಷ್ಟಿಕೋನವನ್ನು ನೀಡುತ್ತದೆ ಎಂದು ವೈದ್ಯರ ಸಂಸ್ಥೆ ಹೇಳಿದೆ, ಆದರೆ ದಾದಿಯರ ಸಂಘವು ಈ ವಿಚಾರದಲ್ಲಿ ಸರ್ಕಾರವು ತನ್ನ ಅಭಿಪ್ರಾಯವನ್ನು ಗಣನೆಗೆ ತೆಗೆದುಕೊಳ್ಳಬೇಕಾಗಿತ್ತು ಎಂದು ಹೇಳಿದೆ. ವಾರಾಂತ್ಯ, ಸಂಜೆ ಮತ್ತು ರಾತ್ರಿ ಪಾಳಿ ಸೇರಿದಂತೆ ದಿನದ 24 ಗಂಟೆಗಳ ಕಾಲ ಕರ್ತವ್ಯದಲ್ಲಿರುವ ಉದ್ಯೋಗಿಗಳು ಡ್ರೆಸ್ ಕೋಡ್ ಅನ್ನು ಅನುಸರಿಸಬೇಕು ಎಂದು ಹೇಳಿದರು.

ಒಂದು ವೇಳೆ ದಾದಿಯರು ಡ್ರೆಸ್ ಕೋಡ್ ನಿಯಮ ಉಲ್ಲಂಘಿಸಿದರೆ ಅಂತಹ ನೌಕರರನ್ನು ದಿನಕ್ಕೆ ಗೈರುಹಾಜರೆಂದು ಗುರುತಿಸಲಾಗುತ್ತದೆ. ಆಸ್ಪತ್ರೆಯು ತನ್ನ ಉದ್ಯೋಗಿಗಳಿಗೆ ಕೆಲವು ನಡವಳಿಕೆಯನ್ನು ಅನುಸರಿಸುವ ಅಗತ್ಯವಿದೆ ಮತ್ತು ಡ್ರೆಸ್ ಕೋಡ್ ಸಂಸ್ಥೆಗೆ "ವೃತ್ತಿಪರ ಸ್ಪರ್ಶ" ನೀಡುವ ಅತ್ಯಗತ್ಯ ಅಂಶವಾಗಿದೆ. ಆರೋಗ್ಯ ಕೇಂದ್ರಗಳಲ್ಲಿ ಫಂಕಿ ಹೇರ್ ಸ್ಟೈಲ್, ಭಾರವಾದ ಆಭರಣಗಳು, ಪರಿಕರಗಳು, ಮೇಕಪ್, ಕೆಲಸದ ವೇಳೆ ಉದ್ದನೆಯ ಉಗುರುಗಳು ಸ್ವೀಕಾರಾರ್ಹವಲ್ಲ ಎಂದು ಸಚಿವ ವಿಜ್ ಹೇಳಿದ್ದಾರೆ.

ಯಾವುದೇ ಬಣ್ಣದ ಜೀನ್ಸ್, ಡೆನಿಮ್ ಸ್ಕರ್ಟ್‌ಗಳು ಮತ್ತು ಡೆನಿಮ್ ಉಡುಪುಗಳನ್ನು ವೃತ್ತಿಪರ ಉಡುಗೆ ಎಂದು ಪರಿಗಣಿಸಲಾಗುವುದಿಲ್ಲ ಮತ್ತು ಆದ್ದರಿಂದ ಅನುಮತಿಸಲಾಗುವುದಿಲ್ಲ. ಉದ್ಯೋಗಿಗಳು ತಮ್ಮ ಹುದ್ದೆಯನ್ನು ಪ್ರಕಟಿಸುವ ಹೆಸರಿನ ಬ್ಯಾಡ್ಜ್ ಅನ್ನು ಧರಿಸಬೇಕಾಗುತ್ತದೆ. ಈಗ ಎಲ್ಲವನ್ನೂ ನಿಷೇಧಿಸಿದೆ.

"ಸ್ವೆಟ್‌ಶರ್ಟ್‌ಗಳು, ಸ್ವೆಟ್‌ಸೂಟ್‌ಗಳು ಮತ್ತು ಶಾರ್ಟ್‌ಗಳನ್ನು ಆಸ್ಪತ್ರೆಯಲ್ಲಿ ಅನುಮತಿಸಲಾಗುವುದಿಲ್ಲ. ಸ್ಲಾಕ್ಸ್, ಡ್ರೆಸ್‌ಗಳು, ಸ್ಕರ್ಟ್‌ಗಳು ಮತ್ತು ಪಲಾಝೋಗಳನ್ನು ಸಹ ಅನುಮತಿಸಲಾಗುವುದಿಲ್ಲ. ಟಿ-ಶರ್ಟ್‌ಗಳು, ಸ್ಟ್ರೆಚ್ ಟಿ-ಶರ್ಟ್‌ಗಳು, ಸ್ಟ್ರೆಚ್ ಪ್ಯಾಂಟ್‌ಗಳು, ಫಿಟ್ಟಿಂಗ್ ಪ್ಯಾಂಟ್‌ಗಳು, ಲೆದರ್ ಪ್ಯಾಂಟ್‌ಗಳು, ಕ್ಯಾಪ್ರಿಸ್, ಸ್ವೆಟ್‌ಪ್ಯಾಂಟ್‌ಗಳು, ಟ್ಯಾಂಕ್ ಟಾಪ್‌ಗಳು, ಕ್ರಾಪ್ಸ್ ಟಾಪ್‌ಗಳು , ಆಫ್ ಶೋಲ್ಡರ್ ಡ್ರೆಸ್‌ಗಳು, ಸ್ನೀಕರ್ಸ್, ಚಪ್ಪಲ್‌ಗಳು ಇತ್ಯಾದಿಗಳನ್ನು ಅನುಮತಿಸಲಾಗುವುದಿಲ್ಲ. ಅದೇ ರೀತಿ, ಶೂಗಳು ಕಪ್ಪು ಮತ್ತು ಸ್ವಚ್ಛವಾಗಿರಬೇಕು ಮತ್ತು ಫಂಕಿ ವಿನ್ಯಾಸಗಳಿಂದ ಮುಕ್ತವಾಗಿರಬೇಕು. ಈ ಉಡುಪುಗಳನ್ನು ನಿಷೇಧಿಸುವ ಔಪಚಾರಿಕ ಆದೇಶವನ್ನು ಇನ್ನೂ ಹೊರಡಿಸಬೇಕಾಗಿದೆ. ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿನ ಸಿಬ್ಬಂದಿಯಲ್ಲಿ ಶಿಸ್ತು, ಏಕರೂಪತೆ ಮತ್ತು ಸಮಾನತೆ ಕಾಪಾಡುವುದು ವಸ್ತ್ರ ಸಂಹಿತೆ ನೀತಿಯ ಉದ್ದೇಶವಾಗಿದೆ ಎಂದು ವಿಜ್ ಹೇಳಿದರು. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

'ಸದನದಲ್ಲಿ ಹುಲಿ, ಹೈಕಮಾಂಡ್‌ ಮುಂದೆ ಇಲಿ'.. 'ಅಧಿಕಾರದಲ್ಲಿ ಉಳಿಯಲು DK Shivakumar ಕ್ಷಮೆಯಾಚನೆ': BJP-JDS ಟೀಕಾ ಪ್ರಹಾರ!

ಸಂಭಾಲ್ ದೇವಸ್ಥಾನದಿಂದ ಸಾಯಿಬಾಬಾ ವಿಗ್ರಹಕ್ಕೆ ಗೇಟ್ ಪಾಸ್! ಗಂಗಾ ನದಿಯಲ್ಲಿ ವಿಸರ್ಜನೆ!

RSS ಅನ್ನು ಯಾರೂ "ಸಮರ್ಥಿಸಿಕೊಳ್ಳಬಾರದು": ಡಿಕೆಶಿ ಕ್ಷಮೆಯಾಚನೆ ಸ್ವಾಗತಿಸಿದ ಬಿ.ಕೆ ಹರಿಪ್ರಸಾದ್

SCROLL FOR NEXT