ದೇಶ

ಟಿಡಿಪಿ ಅಧಿಕಾರಕ್ಕೆ ಬಂದರೆ ಮುಸ್ಲಿಮರಿಗೆ ಇಸ್ಲಾಮಿಕ್ ಬ್ಯಾಂಕ್: ಮಾಜಿ ಸಿಎಂ ನಾಯ್ಡು ಪುತ್ರ ನಾರಾ ಲೋಕೇಶ್

Srinivasamurthy VN

ವಿಶಾಖಪಟ್ಟಣ: ಮುಂಬರುವ ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ತೆಲುಗು ದೇಶಂ ಪಕ್ಷ ಅಧಿಕಾರಕ್ಕೆ ಬಂದರೆ ಮುಸ್ಲಿಮರಿಗೆ ಪ್ರತ್ಯೇಕ ಇಸ್ಲಾಮಿಕ್ ಬ್ಯಾಂಕ್ ಸ್ಥಾಪಿಸುವುದಾಗಿ ಟಿಡಿಪಿ ನಾಯಕ ಹಾಗೂ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರ ಪುತ್ರ ನಾರಾ ಲೋಕೇಶ್ ಘೋಷಣೆ ಮಾಡಿದ್ದಾರೆ.

ಮಂಗಳವಾರ ಎರಡು ದಿನಗಳ ವಿರಾಮದ ನಂತರ ತಮ್ಮ ಪಾದಯಾತ್ರೆ (ಯುವ ಗಲಂ)ಯನ್ನು ಪುನಾರಂಭಿಸಿರುವ ತೆಲುಗು ದೇಶಂ ಪಕ್ಷದ ಪ್ರಧಾನ ಕಾರ್ಯದರ್ಶಿ ನಾರಾ ಲೋಕೇಶ್ ಅವರು, ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಟಿಡಿಪಿ ಮತ್ತೊಮ್ಮೆ ಸರ್ಕಾರವನ್ನು ರಚಿಸಿದರೆ, ಈ ಇಸ್ಲಾಮಿಕ್ ಬ್ಯಾಂಕ್ ಅನ್ನು ಸ್ಥಾಪಿಸಲಾಗುವುದು ಎಂದು ನಾನು ನಿಮಗೆ ಭರವಸೆ ನೀಡುತ್ತಿದ್ದೇನೆ ಎಂದು ಹೇಳಿದರು. 

ಅಲ್ಪಸಂಖ್ಯಾತರ ನಿಗಮವನ್ನು ಮಾಜಿ ಮುಖ್ಯಮಂತ್ರಿ ಮತ್ತು ಟಿಡಿಪಿಯ ಸಂಸ್ಥಾಪಕ ದಿವಂಗತ ಎನ್ ಟಿ ರಾಮರಾವ್ ಅವರು ಸ್ಥಾಪಿಸಿದರು..ಆದರೆ ವೈಎಸ್ ಜಗನ್ ಮೋಹನ್ ರೆಡ್ಡಿ ಸಿಎಂ ಆದ ಮೇಲೆ ಈ ನಿಗಮವನ್ನು ಸ್ಥಗಿತಗೊಳಿಸಲಾಗಿದೆ ಎಂದು ಆರೋಪಿಸಿದ ಅವರು, ತಮ್ಮ ಪಕ್ಷ ಸರ್ಕಾರ ರಚಿಸಿದರೆಟ ಅಲ್ಪಸಂಖ್ಯಾತ ಸಮುದಾಯಕ್ಕೆ ಮತ್ತೆ ಜೀವ ತುಂಬುವುದಾಗಿ ಭರವಸೆ ನೀಡಿದರು.

ಇದೇ ವೇಳೆ ಲೋಕೇಶ್ ಅವರ ಪಾದಯಾತ್ರೆ ಶ್ರೀ ಕಾಳಹಸ್ತಿ ವಿಧಾನಸಭಾ ಕ್ಷೇತ್ರದ ತೊಂಡಮನುಪುರಂ ಪಂಚಾಯಿತಿಯಲ್ಲಿ 300 ಕಿ.ಮೀ ದೂರ ಕ್ರಮಿಸಿದ್ದು, ಈ ವೇಳೆ ಸ್ಥಳೀಯ ಗ್ರಾಮದಲ್ಲಿ ರೈತರನ್ನು ಉದ್ದೇಶಿಸಿ ಮಾತನಾಡಿದ ಲೋಕೇಶ್ 'ಕ್ರಿಮಿನಾಶಕಗಳ ಬದಲಿಗೆ ರೈತರಿಗೆ ಅಗ್ಗದ ಮದ್ಯ ದೊರೆಯುತ್ತಿದ್ದು, ರೈತರು ಮೊದಲಿನ ಮದ್ಯವನ್ನು ಬದಲಿಸಲು ಸಾಧ್ಯವಾಗುತ್ತಿದೆ ಎಂದು ವ್ಯಂಗ್ಯವಾಡಿದರು. ರೈತರು ಸೇರಿದಂತೆ ಗಾಂಡ್ಲ, ತೆಲಿಕುಲ, ದೇವ ತೆಲಿಕುಲ ಸಮುದಾಯಗಳಿಗೆ ನ್ಯಾಯ ಕೊಡಿಸುವುದಾಗಿ ಭರವಸೆ ನೀಡಿದರು.

SCROLL FOR NEXT