ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

'RRR' 'ನಾಟು ನಾಟು' ಹಾಡಿಗೆ ಕೊರಿಯನ್ ರಾಯಭಾರ ಕಚೇರಿ ಸಿಬ್ಬಂದಿ ಮಸ್ತು ಡ್ಯಾನ್ಸ್! ಪ್ರಧಾನಿ ಮೋದಿ ಫಿದಾ; ವಿಡಿಯೋ

'RRR' ಸಿನಿಮಾದ 'ನಾಟು ನಾಟು' ಹಾಡು ವಿಶ್ವದಾದ್ಯಂತ ಜನಪ್ರಿಯತೆ ಗಳಿಸಿದ್ದು, ಗೋಲ್ಡನ್ ಗ್ಲೋಬ್ಸ್, ಕ್ರಿಟಿಕ್ಸ್ ಚಾಯ್ಸ್ ನಂತಹ ಅನೇಕ ಪ್ರಶಸ್ತಿಗಳನ್ನು ಗೆದ್ದಿದೆ. ಈ ಹಾಡನ್ನು ಆಸ್ಕರ್ ಪ್ರಶಸ್ತಿಗೂ ನಾಮನಿರ್ದೇಶನ ಮಾಡಲಾಗಿದೆ.

ನಾಟು ನಾಟು ಹಾಡಿಗೆ ಕೊರಿಯನ್ ರಾಯಭಾರಿ ಕಚೇರಿ ಸಿಬ್ಬಂದಿ ಡ್ಯಾನ್ಸ್ ವಿಡಿಯೋ
Nagaraja AB
Updated On : 10 Mar 2023, 8:24 pm

ನವದೆಹಲಿ:  'RRR' ಸಿನಿಮಾದ 'ನಾಟು ನಾಟು' ಹಾಡು ವಿಶ್ವದಾದ್ಯಂತ ಜನಪ್ರಿಯತೆ ಗಳಿಸಿದ್ದು, ಗೋಲ್ಡನ್ ಗ್ಲೋಬ್ಸ್,  ಕ್ರಿಟಿಕ್ಸ್ ಚಾಯ್ಸ್ ನಂತಹ ಅನೇಕ ಪ್ರಶಸ್ತಿಗಳನ್ನು ಗೆದ್ದಿದೆ. ಈ ಹಾಡನ್ನು ಆಸ್ಕರ್ ಪ್ರಶಸ್ತಿಗೂ ನಾಮನಿರ್ದೇಶನ ಮಾಡಲಾಗಿದೆ.

ಈ ಹಾಡಿನ ಜನಪ್ರಿಯತೆ ದಕ್ಷಿಣ ಕೊರಿಯಾಕ್ಕೂ ತಲುಪಿದೆ. ಭಾರತದಲ್ಲಿರುವ ದಕ್ಷಿಣ ಕೊರಿಯಾದ ರಾಯಭಾರಿ ಕಚೇರಿಯಲ್ಲಿನ  ಸಿಬ್ಬಂದಿ ಹಿಟ್ ಟ್ರ್ಯಾಕ್ ಗೆ ಗುಂಪಾಗಿ ಡ್ಯಾನ್ಸ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ: ಆರ್ ಆರ್ ಆರ್ ನಿಂದ ಮತ್ತೊಂದು ದಾಖಲೆ, ನಾಟು ನಾಟು ಹಾಡು ಆಸ್ಕರ್ ಗೆ ನಾಮನಿರ್ದೇಶನ

Advertisement

Advertisement

ಕೊರಿಯಾದ ರಾಯಭಾರಿ ಚಾಂಗ್ ಜೇ-ಬೊಕ್ ಜೊತೆಗೆ ರಾಯಭಾರ ಕಚೇರಿಯ ಸಿಬ್ಬಂದಿ ಮಸ್ತು ಡ್ಯಾನ್ಸ್ ಮಾಡಿದ್ದಾರೆ.  ಈ ವಿಡಿಯೋಗೆ ಪ್ರಧಾನಿ ಮೋದಿ ಕೂಡಾ ಫಿದಾ ಆಗಿದ್ದು, ತಮ್ಮ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 

 ವೀಡಿಯೊಗೆ ಪ್ರತಿಕ್ರಿಯಿಸಿರುವ ಪ್ರಧಾನಿ ನರೇಂದ್ರ ಮೋದಿ, ಥಂಬ್ಸ್-ಅಪ್ ಎಮೋಜಿಯೊಂದಿಗೆ  'ಗೌರವಾನ್ವಿತ ತಂಡದ ಪ್ರಯತ್ನ' ಎಂದು ಬರೆದುಕೊಂಡಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement