ಮನೀಶ್ ಸಿಸೋಡಿಯಾ 
ದೇಶ

ಸೀಜ್ ಮಾಡಲಾಗಿದ್ದ ಸಿಸೋಡಿಯಾ ಅವರ ಕಂಪ್ಯೂಟರ್‌ನಿಂದ ಅಳಿಸಲಾದ ಫೈಲ್‌ಗಳನ್ನು ಹಿಂಪಡೆದ ಸಿಬಿಐ

ಇದೀಗ ರದ್ದಾಗಿರುವ ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಭ್ರಷ್ಟಾಚಾರದ ಆರೋಪದಲ್ಲಿ ಬಂಧಿಸಲಾದ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಕಂಪ್ಯೂಟರ್‌ನಿಂದ ಅಳಿಸಲಾಗಿದ್ದ ಫೈಲ್‌ಗಳು ಮತ್ತು ಡೇಟಾವನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ಹಿಂಪಡೆದಿದೆ.

ನವದೆಹಲಿ: ಇದೀಗ ರದ್ದಾಗಿರುವ ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದಂತೆ ಭ್ರಷ್ಟಾಚಾರದ ಆರೋಪದಲ್ಲಿ ಬಂಧಿಸಲಾದ ದೆಹಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ಕಂಪ್ಯೂಟರ್‌ನಿಂದ ಅಳಿಸಲಾಗಿದ್ದ ಫೈಲ್‌ಗಳು ಮತ್ತು ಡೇಟಾವನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ಹಿಂಪಡೆದಿದೆ.

ಜನವರಿಯಲ್ಲಿ ಸಿಬಿಐ ಕಂಪ್ಯೂಟರ್ ಅನ್ನು ವಶಪಡಿಸಿಕೊಂಡಿತ್ತು. ಕೆಲವು ಡೇಟಾವನ್ನು ಅಳಿಸಲಾಗಿದೆ ಎಂದು ಪತ್ತೆಯಾದ ನಂತರ, ಅದನ್ನು ಹಿಂಪಡೆಯಲು ಕಂಪ್ಯೂಟರ್ ಅನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್) ಕಳುಹಿಸಲಾಗಿತ್ತು.

ಇದೀಗ ಫೋರೆನ್ಸಿಕ್ ವಿಭಾಗವು ಹಿಂಪಡೆದ ಡೇಟಾ ಮತ್ತು ಫೈಲ್‌ಗಳೊಂದಿಗೆ ವರದಿಯನ್ನು ಕಳುಹಿಸಿದೆ. ಈ ಫೈಲ್‌ಗಳನ್ನು ಆರಂಭದಲ್ಲಿ ವಾಟ್ಸಾಪ್ ಮೂಲಕ ಹಂಚಿಕೊಳ್ಳಲಾಗಿದೆ ಮತ್ತು ನಂತರ ಮನೀಶ್ ಸಿಸೋಡಿಯಾ ಅವರ ಕಂಪ್ಯೂಟರ್‌ನಲ್ಲಿ ಸೇವ್ ಮಾಡಲಾಗಿತ್ತು. ನಂತರ, ಇವುಗಳನ್ನು ಡಿಲೀಟ್ ಮಾಡಲಾಯಿತು ಎಂದು ಎಫ್‌ಎಸ್‌ಎಲ್ ವರದಿ ಸೂಚಿಸುತ್ತದೆ.

ಸಿಸೋಡಿಯಾ ಕಚೇರಿಯಿಂದ ಕಂಪ್ಯೂಟರ್ ಅನ್ನು ವಶಪಡಿಸಿಕೊಳ್ಳಲಾಗಿದೆ. ಸಿಸೋಡಿಯಾ ಅವರ ಕಚೇರಿಗೆ ಭೇಟಿ ನೀಡುವ ಮೊದಲು, ಸಿಆರ್‌ಪಿಸಿಯ ಸೆಕ್ಷನ್ 91 ರ ಅಡಿಯಲ್ಲಿ ಸಿಬಿಐ ನೋಟಿಸ್ ನೀಡಿತ್ತು. 

ಈ ಸಂಬಂಧ ಸಿಬಿಐ ಈಗಾಗಲೇ ಆರೋಪಪಟ್ಟಿ ಸಲ್ಲಿಸಿದೆ. ಒಂದು ಮೂಲದ ಪ್ರಕಾರ, ಏಜೆನ್ಸಿಯು ಈ ವಿಷಯದಲ್ಲಿ ಪೂರಕ ಚಾರ್ಜ್‌ಶೀಟ್ ಸಲ್ಲಿಸುವ ಪ್ರಕ್ರಿಯೆಯಲ್ಲಿದೆ ಮತ್ತು ಆದ್ದರಿಂದ ಪ್ರಕರಣಕ್ಕೆ ಸಂಬಂಧಿಸಿದ ಹೆಚ್ಚಿನ ಸಾಕ್ಷ್ಯಗಳನ್ನು ಸಂಗ್ರಹಿಸಲು ಅವರು ಬಯಸಿದ್ದರು.

ಸಿಸೋಡಿಯಾ ಅವರ ಕಂಪ್ಯೂಟರ್‌ನಿಂದ ಪುರಾವೆಗಳನ್ನು ವಶಪಡಿಸಿಕೊಳ್ಳಲಾಗಿದೆ. ನಮ್ಮ ಪ್ರಕರಣವು ಈಗ ಹೆಚ್ಚು ಬಲವಾಗಿದೆ ಎಂದು ಸಿಬಿಐ ಮೂಲಗಳು ತಿಳಿಸಿವೆ.

ಅಬಕಾರಿ ನೀತಿ ಹಗರಣದಲ್ಲಿ ಉಪಮುಖ್ಯಮಂತ್ರಿ ಸಿಸೋಡಿಯಾ ಅವರನ್ನು ಸಿಬಿಐ ಭಾನುವಾರ ಬಂಧಿಸಿದೆ. ರಾಜ್‌ಘಾಟ್‌ಗೆ ಭೇಟಿ ನೀಡಿದ ನಂತರ 11.10 ರ ಸುಮಾರಿಗೆ ದಕ್ಷಿಣ ದೆಹಲಿಯ ಲೋಧಿ ರಸ್ತೆಯಲ್ಲಿರುವ ಸೆಂಟ್ರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (ಸಿಬಿಐ) ಪ್ರಧಾನ ಕಚೇರಿಯನ್ನು ತಲುಪಿದ ಸಿಸೋಡಿಯಾ ಅವರನ್ನು ಬಂಧಿಸುವ ಮೊದಲು ಎಂಟು ಗಂಟೆಗಳ ಕಾಲ ವಿಚಾರಣೆ ನಡೆಸಲಾಯಿತು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT